Telegram Join My Telegram WhatsApp Join My WhatsApp

ವಿಶ್ವದ ಮೊದಲ ಸಹಕಾರಿ ಟ್ಯಾಕ್ಸಿ ಸೇವೆ ಶುರು.

ವಿಶ್ವದ ಮೊದಲ ಮತ್ತು ಅತಿದೊಡ್ಡ ಸಹಕಾರಿ ಟ್ಯಾಕ್ಸಿ ಸೇವೆಯಾದ “ಭಾರತ ಟ್ಯಾಕ್ಸಿ”ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಇಲ್ಲಿ ನೀಡಿದರು.

ಮೊದಲ ಹಂತದಲ್ಲಿ ದೆಹಲಿ ಮತ್ತು ಗುಜರಾತ್ ನಲ್ಲಿ ಲಭ್ಯವಿರುವ ಮೂರು ವರ್ಷದಲ್ಲಿ ದೇಶವ್ಯಾಪ್ತಿ ಲಭ್ಯವಾಗಲಿದೆ ಎಂದು ಅಮಿತ್ ಶಾ ತಿಳಿಸಿದರು.

“ಸಾರಥಿಯೆ ಮಾಲಿಕ” ಎಂಬ ಆಶಯದಲ್ಲಿ ಚಾಲನೆ ನೀಡಲಾಗಿರುವ ಈ ಟ್ಯಾಕ್ಸಿ ಸೇವೆಗೆ ಅಮೂಲ್ ,ನಾಫೆಡ್ ನಬಾರ್ಡ್, ಕ್ರಿಪ್ಟೋ ಸೇರಿದಂತೆ ದೇಶದ ಎಂಟು ಪ್ರಮುಖ ಸಹಕಾರ ಸಂಘಗಳು ಪ್ರವರ್ತಕರಾಗಿರುವಲಿವೆ. ಇದರಲ್ಲಿ ಕಾರು, ಆಟೊ, ಬೈಕ್ ಸೇವೆ ಲಭ್ಯವಿರಲಿದೆ.

ಈ ಸೇವೆ ಅಡಿ ಸಂಗ್ರಹವಾದ ಹಣದಲ್ಲಿ ಶೇ 80.ರಷ್ಟು ಚಾಲಕರಿಗೆ ಮತ್ತು ಶೇಕಡಾ 20 ರಷ್ಟು ಹಣ ಸೇವೆ ನಿರ್ವಹಿಸುವ ವ್ಯಕ್ತವಾಗಿ ಪ್ಲಾಟ್‌ಫಾರ್ಮ್‌ಗೆ ಹೋಗಲಿದೆ.

ಬೇಡಿಕೆ ಹೆಚ್ಚಿರುವ ಸಮಯದಲ್ಲಿ ಖಾಸಗಿ ಕ್ಯಾಬ್ ಕಂಪನಿಗಳು ವಿಧಿಸುವ ಸರ್ಜ್ ಪ್ರೈಸಿಂಗ್ ಇರುವುದಿಲ್ಲ. ಜೊತೆಗೆ ಚಾಲಕರಿಗೆ 5,00,000 ರೂ ಅಪಘಾತ ವಿಮೆ ಹಾಗು ಅಷ್ಟೇ ಮೊತ್ತದ ಕುಟುಂಬ ಆರೋಗ್ಯ ವಿಮೆ ಸಿಗಲಿದೆ. 

ಉತ್ತಮ ಸ್ಪಂದನೆ.

ಏಳು ತಿಂಗಳಿನಿಂದ ಪ್ರಾಯೋಗಿಕ ಸೇವೆ ನೀಡುತ್ತಿರುವ ಭಾರತ ಟ್ಯಾಕ್ಸಿಯಲ್ಲಿ ಈಗಾಗಲೇ 3,00,000 ಚಾಲಕರು ಹೆಸರು ನೋಂದಾಯಿಸಿಕೊಂಡಿದ್ದಾರೆ. 10 ಸಾವಿರಕ್ಕೂ ಅಧಿಕ ಮಂದಿ ಪ್ರಯಾಣಿಸಿದ್ದಾರೆ.

ಭಾರತದ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಅಮಿತ್ ಶಾ ಅವರು ಸಹಕಾರಿ ಕ್ಷೇತ್ರವನ್ನು ಬಲಪಡಿಸುವ ಉದ್ದೇಶದಿಂದ “ಸಹಕಾರಿ ಟ್ಯಾಕ್ಸಿ (Sahakar Taxi)” ಎಂಬ ಹೊಸ ಕಲ್ಪನೆಯನ್ನು ಪರಿಚಯಿಸಿದ್ದಾರೆ.

ಸಹಕಾರಿ ಟ್ಯಾಕ್ಸಿ ಎಂದರೇನು?

ಸಹಕಾರಿ ಟ್ಯಾಕ್ಸಿ ಎಂಬುದು ಚಾಲಕರೇ ಮಾಲೀಕರಾಗಿರುವ ಸಹಕಾರಿ ಮಾದರಿಯ ಟ್ಯಾಕ್ಸಿ ಸೇವೆ. ಇದರಲ್ಲಿ ಖಾಸಗಿ ಕಂಪನಿಗಳ ಬದಲು ಚಾಲಕರ ಸಹಕಾರಿ ಸಂಘಗಳು ಟ್ಯಾಕ್ಸಿ ಸೇವೆಯನ್ನು ನಡೆಸುತ್ತವೆ.

ಯೋಜನೆಯ ಮುಖ್ಯ ಉದ್ದೇಶಗಳು:

  • ಟ್ಯಾಕ್ಸಿ ಚಾಲಕರಿಗೆ ನೇರ ಆದಾಯ

  • ಮಧ್ಯವರ್ತಿಗಳ (ಕಮಿಷನ್) ಶೋಷಣೆ ತಪ್ಪಿಸುವುದು

  • ಸಹಕಾರಿ ಚಳವಳಿಯನ್ನು ಬಲಪಡಿಸುವುದು

  • ಚಾಲಕರ ಆರ್ಥಿಕ ಸ್ಥಿರತೆ ಹೆಚ್ಚಿಸುವುದು.

ಸಹಕಾರಿ ಟ್ಯಾಕ್ಸಿಯ ಪ್ರಮುಖ ಲಕ್ಷಣಗಳು:

  • ಚಾಲಕರೇ ಸಹಕಾರಿ ಸಂಘದ ಸದಸ್ಯರು

  • ಲಾಭ ನೇರವಾಗಿ ಚಾಲಕರಿಗೆ ಹಂಚಿಕೆ

  • ಕಡಿಮೆ ಕಮಿಷನ್ ಅಥವಾ ಇಲ್ಲದ ಕಮಿಷನ್ ವ್ಯವಸ್ಥೆ

  • ಸರ್ಕಾರದ ಬೆಂಬಲ ಮತ್ತು ಮಾರ್ಗದರ್ಶನ

ಅಮಿತ್ ಶಾ ಅವರ ಪಾತ್ರ:

  • ಸಹಕಾರಿ ಸಚಿವಾಲಯದ ಮೂಲಕ ಯೋಜನೆಗೆ ರೂಪುರೇಷೆ

  • ಸಹಕಾರಿ ಕ್ಷೇತ್ರವನ್ನು ದೇಶವ್ಯಾಪಿಯಾಗಿ ವಿಸ್ತರಿಸುವ ದೃಷ್ಟಿ

  • “ಸಹಕಾರದಿಂದ ಸಮೃದ್ಧಿ” ಎಂಬ ಧ್ಯೇಯದ ಅನುಷ್ಠಾನ

ಯೋಜನೆಯ ಲಾಭಗಳು:

  • ಟ್ಯಾಕ್ಸಿ ಚಾಲಕರ ಜೀವನಮಟ್ಟ ಸುಧಾರಣೆ

  • ಸ್ಥಳೀಯ ಉದ್ಯೋಗ ಸೃಷ್ಟಿ

  • ಸ್ವಾವಲಂಬಿ ಭಾರತಕ್ಕೆ ಬೆಂಬಲ.