ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಎಂಜಿನಿಯರಿಂಗ್ ಕಾಲೇಜುಗಳು, ಪಾಲಿಟೆಕ್ನಿಕ್ಗಳು ಹಾಗೂ ಯುವಿಸಿಇ ರಲ್ಲಿ 2000 ಬೋಧಕ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಉನ್ನತ ಶಿಕ್ಷಣ ಇಲಾಖೆ ಬುಧವಾರ ಆದೇಶ ಹೊರಡಿಸಿದೆ.
ಪ್ರಥಮ ದರ್ಜೆ ಕಾಲೇಜುಗಳ 826 ಸಹಾಯಕ ಪ್ರಾಧ್ಯಾಪಕರು, ಪಾಲಿಟೆಕ್ನಿಕ್ 941 ಉಪನ್ಯಾಸಕರು, ಇಂಜಿನಿಯರಿಂಗ್ ಕಾಲೇಜುಗಳ 186 ಸಹಾಯಕ ಪ್ರಾಧ್ಯಾಪಕರು ಹಾಗೂ ಯುವಿಸಿಇ ಯಲ್ಲಿ 47 ಬೋಧಕ ಹುದ್ದೆಗಳನ್ನ ಸರ್ಕಾರದ ನಿಯಮಾನುಸಾರ ಭರ್ತಿ ಮಾಡಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕಾಲಕಾಲಕ್ಕೆ ಅನ್ವಯವಾಗುವ ಮೀಸಲಾತಿ ನಿಯಮಗಳನ್ನ ಕಡ್ಡಾಯವಾಗಿ ಪಾಲಿಸಬೇಕು. ಕಲ್ಯಾಣ ಕರ್ನಾಟಕದ ಮೀಸಲಿರುವ ಹುದ್ದೆಗಳನ್ನು ನಿಯಮಾನುಸಾರ ವರ್ಗಿಕರಿಸಬೇಕು. ನೇಮಕಾತಿ ನಿಯಮಗಳನ್ವಯ ಅಗತ್ಯ ವಿದ್ಯಾರ್ಥಿ ಹಾಗೂ ನೇಮಕಾತಿ ನಿಯಮಗಳನ್ನ ಪಾಲಿಸಬೇಕು ಎಂದು ಸೂಚಿಸಲಾಗಿದೆ.