ಪರಿಸರ ಸ್ನೇಹಿ ಕ್ರಮಗಳನ್ನು ಅಳವಡಿಸಿಕೊಳ್ಳುವ ಸಲುವಾಗಿ ಇನ್ನು ಮುಂದೆ ಸರ್ಕಾರಿ ಕಚೇರಿ ಮತ್ತು ಸರ್ಕಾರಿ ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿ ಬಳಸೋದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಕಚೇರಿ, ವಿಧಾನಸಭೆ, ವಿಧಾನಪರಿಷತ್,ಲೋಕ ಸೇವಾ ಆಯೋಗ, ಲೋಕ ಭವನ ಎಲ್ಲ ವಿಶ್ವವಿದ್ಯಾಲಯಗಳು ನವದೆಹಲಿಯ ಕರ್ನಾಟಕ ಭವನ ಸೇರಿದಂತೆ ಎಲ್ಲ ಸರ್ಕಾರಗಳಿಗೂ ಅನ್ವಯಿಸಿಸುತ್ತಲೇ ಹೊರಬಿದ್ದಿದೆ.
ನಂದಿನಿ ತಿನಿಸು ಕಡ್ಡಾಯ:
ಬಾಟಲಿ ಬದಲಿಗೆ ಪರಿಸರ ಸ್ನೇಹಿ ಪರಿಕರಣಗಳನ್ನು ಬಳಕೆ ಮಾಡುವಂತೆ ಹಾಗೂ ಸರ್ಕಾರದ ಎಲ್ಲ ಕಚೇರಿ ಮತ್ತು ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಕೆಎಂಎಫ್ ನಂದಿನಿ ತಿನಿಸುಗಳನ್ನ ಬಳಸುವಂತೆಯೂ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ತುರ್ತು ಆದೇಶ ಹೊರಡಿಸಿದೆ.
ಈ ಹಿಂದೆಯೂ ಇಂತಹದ್ದೇ ಸುತ್ತೋಲೆ ಸರ್ಕಾರದಿಂದ ಹೊರಬಿದ್ದಿದ್ದರು. ಬಹುತೇಕ ಇಲಾಖೆಯ ಕಚೇರಿಗಳು ಬಾಟಲಿ ನೀರಿಗೆ ಮೊರೆ ಹೋಗಿದ್ದವು. ಜೊತೆಗೆ ವಿಧಾನಸೌಧದ ಮಂತ್ರಿಗಳ ಕಚೇರಿಯಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿಗಳು ರಾರಾಜಿಸಿದ್ದವು. ಇದೀಗ ಮತ್ತೊಮ್ಮೆ ಆದೇಶ ಹೊರಬಿದ್ದಿದೆ. ವಿಧಾನಮಂಡಲದ ಅಧಿವೇಶನವೂ ನಡೆಯುತ್ತಿದೆ. ಹಾಗಾಗಿ ಈ ಬಾರಿಯಾದರೂ ಇದು ಪಾಲನೆಗೆ ಆಗುತ್ತದೆ ಎನ್ನುವ ಕುತೂಹಲ ಮೂಡಿದೆ.
ಪ್ಲಾಸ್ಟಿಕ್ ನೀರಿನ ಬಾಟಲಿಗಳ ಅಪಾಯಗಳು (Disadvantages) ಇಲ್ಲಿವೆ 👇
1. ಪರಿಸರ ಮಾಲಿನ್ಯ:
ಪ್ಲಾಸ್ಟಿಕ್ ಬಾಟಲಿಗಳು ಬೇಗ ನಾಶವಾಗುವುದಿಲ್ಲ. ಅವು ನೆಲ, ನೀರು ಮತ್ತು ಸಮುದ್ರವನ್ನು ದೂಷಿಸುತ್ತವೆ.
2. ಜಲಜೀವಿಗಳಿಗೆ ಅಪಾಯ:
ಪ್ಲಾಸ್ಟಿಕ್ ಕಸದ ಕಾರಣ ಮೀನುಗಳು ಮತ್ತು ಇತರ ಜಲಜೀವಿಗಳು ಸಾವಿಗೀಡಾಗುತ್ತವೆ.
3. ಆರೋಗ್ಯಕ್ಕೆ ಹಾನಿ:
ಪ್ಲಾಸ್ಟಿಕ್ ಬಾಟಲಿಗಳಲ್ಲಿ BPA ಮುಂತಾದ ರಾಸಾಯನಿಕಗಳು ಇರುತ್ತವೆ. ಬಿಸಿ ನೀರು ಅಥವಾ ಹೆಚ್ಚು ಸಮಯ ಬಳಸಿದರೆ, ಅವು ನೀರಿನಲ್ಲಿ ಬೆರೆತು ಆರೋಗ್ಯಕ್ಕೆ ಹಾನಿ ಮಾಡಬಹುದು.
4. ಮರುಬಳಕೆ ಕಷ್ಟ:
ಎಲ್ಲಾ ಪ್ಲಾಸ್ಟಿಕ್ ಬಾಟಲಿಗಳನ್ನು ಸರಿಯಾಗಿ ಮರುಬಳಕೆ ಮಾಡಲಾಗುವುದಿಲ್ಲ. ಇದರಿಂದ ಕಸದ ಪ್ರಮಾಣ ಹೆಚ್ಚಾಗುತ್ತದೆ.
5. ತಾಪಮಾನಕ್ಕೆ ಅಪಾಯ:
ಪ್ಲಾಸ್ಟಿಕ್ ಬಾಟಲಿಗಳನ್ನು ಬಿಸಿಲಲ್ಲಿ ಇಟ್ಟರೆ, ವಿಷಕಾರಿ ಅಂಶಗಳು ನೀರಿನಲ್ಲಿ ಸೇರಬಹುದು.
6. ದೀರ್ಘಕಾಲದಲ್ಲಿ ವೆಚ್ಚ ಹೆಚ್ಚು:
ಒಂದೇ ಬಾರಿಗೆ ಬಳಸುವ ಪ್ಲಾಸ್ಟಿಕ್ ಬಾಟಲಿಗಳನ್ನು ಮರುಮರು ಖರೀದಿಸುವುದು ಹಣದ ವ್ಯರ್ಥ.