ಎಲ್ಲ ಒಪ್ಪಂದಗಳ ತಾಯಿ ಎಂದೇ ಯುರೋಪ್‌ನ ನಾಯಕರಿಂದ ವರ್ಣಿಸಲ್ಪಟ್ಟಿರುವ ಐತಿಹಾಸಿಕ ಭಾರತ ಯುರೋಪಿಯನ್ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಬಿದ್ದಿದೆ. ಇದು ಭಾರತ -ಯುರೋಪ್ ನಡುವಿನ ವಾಣಿಜ್ಯ ವ್ಯವಹಾರದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸುವ ಸಾಧ್ಯತೆ ಇದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಭಾರತ ಹಾಗೂ ಐರೋಪ್ಯ ಒಕ್ಕೂಟ ಸೇರಿವೆಂದರೆ ಅದು ಬೃಹತ್ ಮಾರುಕಟ್ಟೆಯನ್ನು ಪ್ರತಿನಿಧಿಸುತ್ತದೆ .ಈ ಒಪ್ಪಂದವು ಸುಮಾರು ಎರಡು ಬಿಲಿಯನ್ ಜನರ ಒಟ್ಟು ಜನಸಂಖ್ಯೆಯನ್ನ ಹೊಂದಿರುವ ಎರಡು ಪ್ರಮುಖ ಆರ್ಥಿಕತೆಗಳನ್ನ ಬೆಸೆಯಲಿದೆ. ಒಟ್ಟಾಗಿ ಭಾರತ ಮತ್ತು ಜಿಟಿ ಜಿ ೨೭ ರಾಷ್ಟ್ರಗಳಿರುವ ಐರೋಪ್ಯ ಒಕ್ಕೂಟವು ವಿಶ್ವದ ಜಿಡಿಪಿಯ ಸುಮಾರು 25ರಷ್ಟು ಪಾಲನ್ನು ಹೊಂದಿದೆ.
ಜಗತ್ತಿನೆಲ್ಲೆಡೆ ಈಗ ಯುದ್ಧದ ಭೀತಿಗಳು ಆವರಿಸುತ್ತಿವೆ.ಕೆಲವು ದೇಶಗಳ ನಡುವೆ ಯುದ್ಧ ಈಗಾಗಲೇ ಆವರಿಸಿದೆ. ಹಾಗಾಗಿ ರಾಷ್ಟ್ರೀಯ ವಾದಕ್ಕಿಂತಲೂ ಮಿಗಿಲಾಗಿ ಈಗ ರಕ್ಷಣಾವಾದ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತಿದೆ ಇದು ಜಗತ್ತಿನ ಹಲವು ರಾಷ್ಟ್ರಗಳ ನಡುವೆ ಇರುವ ವ್ಯಾಪಾರ ಒಪ್ಪಂದದ ಮೇಲೂ ಪರಿಣಾಮ ಬೀರುತ್ತದೆ. ಹೀಗೆ ಹೆಚ್ಚುತ್ತಿರುವ ಜಾಗತಿಕ ರಕ್ಷಣಾವಾದ ಮತ್ತು ಬದಲಾಗುತ್ತಿರುವ ವ್ಯಾಪಾರ ಮೈತ್ರಿಗಳ ನಡುವೆ ಭಾರತ ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಮೇಲೆ ಈಗಾಗಲೇ ಕೆಟ್ಟ ಪರಿಣಾಮಗಳನ್ನ ಬೀರಿದೆ. ಹಾಗಾಗಿ ಈಗ ಐರೋಪ್ಯ ಒಕ್ಕೂಟದೊಂದಿಗೆ ಭಾರತ ಮಾಡಿಕೊಡುತ್ತಿರುವ ಆರ್ಥಿಕ ಒಪ್ಪಂದವು.
ಭಾರತದ ಯಾವ ಕ್ಷೇತ್ರಗಳಿಗೆ ಅನುಕೂಲ?
ಈ ಒಪ್ಪಂದವು ದ್ವಿಪಕ್ಷೀಯ ವ್ಯಾಪಾರದಲ್ಲಿ ಗಮನಾರ್ಹ ಬದಲಾವಣೆಗಳನ್ನು ತರುವ ನಿರೀಕ್ಷೆ ಇದೆ. ಅದು ಇದೇ ವರ್ಷವೇ ಅನುಭವಕ್ಕೆ ಬರಲಿದೆ. ಸದ್ಯಕ್ಕೆ ಈ ಒಕ್ಕೂಟದಲ್ಲಿರುವ ಯುರೋಪ ರಾಷ್ಟ್ರಗಳು ಮತ್ತು ಹಾಗು ಭಾರತದ ನಡುವಿನ ವ್ಯಾಪಾರ ವಹಿವಾಟು ಮೌಲ್ಯ ಇದು ಈಗಾಗಲೇ 2024-25ರ ವಿತ್ತೀಯ ವರ್ಷದಲ್ಲಿ ಸುಮಾರು 12,00,000 ಕೋಟಿಗಳಷ್ಟಿದೆ.ಜನವರಿ 27 ರಂದು ಏರ್ಪಡುವ ಭಾರತ – -ಇ.ಯು ಒಪ್ಪಂದ ಈ ಮೌಲ್ಯವನ್ನು ಆಗ ಅಗಾಧವಾಗಿ ಹೆಚ್ಚಿಸುವ ನಿರೀಕ್ಷೆ ಇದೆ.
ಜವಳಿ ರಫ್ತಿಗೆ ಹೆಚ್ಚು ಉತ್ತೇಜನ:
ಜವಳಿ ಉಡುಪು, ಚರ್ಮ ಮತ್ತು ರತ್ನಗಳು ಆಭರಣಗಳಂತಹ ಕಾರ್ಮಿಕ ಅವಲಂಬಿತ ಕ್ಷೇತ್ರಗಳಲ್ಲಿರುವ ಭಾರತೀಯ ಉದ್ದಿಮೆದಾರರಿಗೆ ಐರೋಪ್ಯ ರಾಷ್ಟ್ರಗಳಲ್ಲಿ ಹೊಸ ಬೇಡಿಕೆ ಸೃಷ್ಟಿಯಾಗಲಿದೆ. ಕಾರ್ಮಿಕ ಆಧಾರಿತ ಕ್ಷೇತ್ರಗಳಾದ ಜವಳಿ, ಚರ್ಮ, ಉದ್ಯೋಗ ಹಾಗು ಕುಸುರಿಕಲೆಯ ಕೇಂದ್ರಗಳಿಗೆ ಇನ್ನು ಐರೋಪ್ಯ ಒಕ್ಕೂಟದಲ್ಲಿ ಶೇಕಡ ನೂರಕ್ಕೆ ನೂರರಷ್ಟು ರಿಯಾಯಿತಿ ಸಿಗಲಿದೆ. ಭಾರತೀಯ ರಫ್ತುದಾರರು ಈ ಮಾರುಕಟ್ಟೆಗೆ ಸುಂಕ ಮುಕ್ತ ಪ್ರವೇಶ ಪ್ರವೇಶವನ್ನು ಪಡೆಯುತ್ತಾರೆ.
ಭಾರತದಿಂದ ಆಮದು ಸುಂಕ ಇಳಿಕೆ ಸಾಧ್ಯತೆ :
ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ಅಂಗವಾಗಿ ವಿದೇಶಿ ಕಾರುಗಳ ಮೇಲೆ ಆಮದು ಸುಂಕವನ್ನು ಪ್ರಸ್ತುತ ಇರುವ ಶೇಕಡ 110 ರಿಂದ ಶೇಕಡಾ 40ಕ್ಕೆ ಭಾರಿ ಪ್ರಮಾಣದಲ್ಲಿ ಇಳಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಸುಮಾರು ರೂಪಾಯಿ 16.3 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಬೆಲೆಯ ಪೆಟ್ರೋಲ್ ಮತ್ತು ಡಿಸೇಲ್ ಕಾರುಗಳಿಗೆ ಮಾತ್ರ ಈ ತೆರಿಗೆ ರಿಯಾಯಿತಿಯನ್ನ ಅನ್ವಯವಾಗಲಿದೆ. ಆದರೆ, ದೇಶಿಯ ಕಂಪನಿಗಳ ಹಿತರಕ್ಷಣೆ ಮತ್ತು ಸ್ಥಳೀಯ ಮಾರುಕಟ್ಟೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಎಲೆಕ್ಟ್ರಿಕ್ ವಾಹನಗಳ ಆರಂಭದ ಐದು ವರ್ಷಗಳವರೆಗೆ ಈ ವ್ಯಾಪ್ತಿಯಿಂದ ಹೊರಗಿಡಲು ನಿರ್ಧರಿಸಲಾಗಿದೆ.
ಆಟೊಮೊಬೈಲ್ ಮಧ್ಯ ಕ್ಷೇತ್ರದ ಮೇಲಿನ ತೆರಿಗೆ ಹಗುರ :
ಭಾರತೀಯ ಆಟೋಮೊಬೈಲ್ ಕ್ಷೇತ್ರ ಬಹುಪಾಲು ಐರೋಪ್ಯ ರಾಷ್ಟ್ರಗಳ ಮೇಲೆ ಅವಲಂಬಿತವಾಗಿದೆ. ಅಷ್ಟೇ ಅಲ್ಲದೆ ಎರಡು ರಾಷ್ಟ್ರಗಳ ನಡುವೆ ಮದ್ಯಪಾನ ಸಂಬಂಧಿತ ವ್ಯವಹಾರಗಳು ಉತ್ತಮವಾಗಿದೆ. ಸದ್ಯಕ್ಕೆ ಯುರೋಪಿಯನ್ ಆಟೊಮೊಬೈಲ್ ಬಿಡಿಭಾಗಗಳ ಮೇಲೆ ಶೇಕಡಾ 110 ರಷ್ಟು ತೆರಿಗೆ ಇದೆ. ಇದು ಶೇಕಡಾ 40ಕ್ಕೆ ಇಳಿ ಆಗುವ ಸಾಧ್ಯತೆ ಇದೆ.ಇಲ್ಲೂ ವೈನ್ / ಸ್ಪಿರಿಟ್ ಗಳ ಮೇಲೆ ಈಗಿರುವ ಶೇಕಡ 150ರಷ್ಟು ತೆರಿಗೆ ಪ್ರಮಾಣ ತಕ್ಕಮಟ್ಟಿಗೆ ಕಡಿಮೆಯಾಗುವ ಸಂಭವವಿದೆ.
ಯುರೋಪಿಯನ್ ಕಾರುಗಳು ಮತ್ತು ಭಾರತೀಯ ಕಾರುಗಳು ವ್ಯತ್ಯಾಸ :
ಸುರಕ್ಷತೆ (Safety) :
ಯುರೋಪಿಯನ್ ಕಾರುಗಳು :
-
ಅತ್ಯಂತ ಕಠಿಣ ಸುರಕ್ಷತಾ ನಿಯಮಗಳು
-
ಹೆಚ್ಚಿನ ಏರ್‌ಬ್ಯಾಗ್‌ಗಳು
-
ಯೂರೋ NCAP ನಲ್ಲಿ ಹೆಚ್ಚಿನ ಸ್ಟಾರ್ ರೇಟಿಂಗ್
ಭಾರತೀಯ ಕಾರುಗಳು :
-
ಸುರಕ್ಷತಾ ಮಾನದಂಡಗಳು ಇತ್ತೀಚೆಗೆ ಸುಧಾರಿಸುತ್ತಿವೆ
-
ಕೆಲವು ಕಡಿಮೆ ಬೆಲೆಯ ಮಾದರಿಗಳಲ್ಲಿ ಕಡಿಮೆ ಸುರಕ್ಷತಾ ಫೀಚರ್‌ಗಳು
ನಿರ್ಮಾಣ ಗುಣಮಟ್ಟ (Build Quality) :
ಯುರೋಪಿಯನ್ ಕಾರುಗಳು:
-
ಗಟ್ಟಿಯಾದ ಬಾಡಿ
-
ಹೆಚ್ಚಿನ ಸ್ಟೀಲ್ ಮತ್ತು ಅಡ್ವಾನ್ಸ್ ಮೆಟೀರಿಯಲ್ ಬಳಕೆ
ಭಾರತೀಯ ಕಾರುಗಳು:
-
ಹಗುರವಾದ ಬಾಡಿ
-
ಇಂಧನ ದಕ್ಷತೆಗೆ ಹೆಚ್ಚಿನ ಒತ್ತು
ಇಂಜಿನ್ ಮತ್ತು ಪ್ರದರ್ಶನ (Engine & Performance) :
ಯುರೋಪಿಯನ್ ಕಾರುಗಳು:
-
ಶಕ್ತಿಶಾಲಿ ಇಂಜಿನ್
-
ಉತ್ತಮ ಹ್ಯಾಂಡ್ಲಿಂಗ್ ಮತ್ತು ಸ್ಟೆಬಿಲಿಟಿ
ಭಾರತೀಯ ಕಾರುಗಳು:
-
ಮೈಲೇಜ್ ಮೇಲೆ ಹೆಚ್ಚಿನ ಗಮನ
-
ನಗರ ಮತ್ತು ಗ್ರಾಮೀಣ ರಸ್ತೆಗೆ ಸೂಕ್ತ
ಬೆಲೆ (Price) :
ಯುರೋಪಿಯನ್ ಕಾರುಗಳು:
-
ಸಾಮಾನ್ಯವಾಗಿ ದುಬಾರಿ
-
ಮೆಂಟೆನನ್ಸ್ ವೆಚ್ಚ ಹೆಚ್ಚು
ಭಾರತೀಯ ಕಾರುಗಳು:
-
ಕೈಗೆಟುಕುವ ಬೆಲೆ
-
ಕಡಿಮೆ ಮೆಂಟೆನನ್ಸ್ ವೆಚ್ಚ
ರಸ್ತೆ ಪರಿಸ್ಥಿತಿಗೆ ಹೊಂದಾಣಿಕೆ :
ಯುರೋಪಿಯನ್ ಕಾರುಗಳು:
-
ಉತ್ತಮ ರಸ್ತೆಗಳಿಗಾಗಿ ವಿನ್ಯಾಸ
-
ಕಡಿಮೆ ಗ್ರೌಂಡ್ ಕ್ಲಿಯರೆನ್ಸ್ ಇರುವ ಮಾದರಿಗಳು
ಭಾರತೀಯ ಕಾರುಗಳು:
-
ಕೆಟ್ಟ ರಸ್ತೆ, ಗುಂಡಿಗಳಿಗೆ ಹೊಂದಿಕೊಳ್ಳುವಂತೆ ವಿನ್ಯಾಸ
-
ಹೆಚ್ಚು ಗ್ರೌಂಡ್ ಕ್ಲಿಯರೆನ್ಸ್
ಉದಾಹರಣೆ ಬ್ರಾಂಡ್‌ಗಳು :
ಯುರೋಪಿಯನ್ ಕಾರುಗಳು:
BMW, Audi, Mercedes-Benz, Volkswagen, Volvo
ಭಾರತೀಯ ಕಾರುಗಳು:
Maruti Suzuki, Tata Motors, Mahindra, Hyundai India