Telegram Join My Telegram WhatsApp Join My WhatsApp

ನೀವು ಮಾಂಸಾಹಾರಿನಾ? ಹಾಗಿದ್ದರೆ ಇದನ್ನು ಒಮ್ಮೆ ಓದಿ.

ಕೆಲವು ಮಾನವರು ಮಾಂಸಹಾರವನ್ನು ಇಷ್ಟಪಡುತ್ತಾರೆ, ಆದರೆ ಅದನ್ನು ಅತಿಯಾಗಿ ಸೇವಿಸುವುದರಿಂದ ಆರೋಗ್ಯದಲ್ಲಾಗುವ ಅನಾರೋಗ್ಯದಾದ ಬಗ್ಗೆ ಗಮನವಿರುವುದಿಲ್ಲ. ಇದರಿಂದ ಹಲವಾರು ಬಗೆಯ ಕಾಯಿಲೆ ಉಂಟಾಗಿ ಮಾನವನು ಮರಣ ಹೊಂದುವ ಸಾಧ್ಯತೆ ಹೆಚ್ಚಾಗಿದೆ.

ಈಗಿನ ಕಾಲದಲ್ಲಿ ಆಹಾರ ಪದ್ದತಿಯು ಅತಿ ಹೆಚ್ಚು ಮಾಂಸಹಾರವೇ ಆಗಿದೆ. ಹಾಗು ಮಾನವನು ಹಬ್ಬ ಹರಿದಿನ ಹಾಗೂ ಮನೆಯ ಶುಭ ಮತ್ತು ಇತರೆ ಕಾರ್ಯಗಳಿಗೆ ಮಾಂಸಾಹಾರವನ್ನು ಹೆಚ್ಚಾಗಿ ಬಳಸುತ್ತಿದ್ದಾನೆ.

ಜೊತೆಗೆ ಈಗಿನ ಯುವ ಪೀಳಿಗೆಯೋ ತನ್ನ ಸ್ನೇಹಿತರ ಹುಟ್ಟುಹಬ್ಬ ಮತ್ತು ಇತರ ಪಾರ್ಟಿ ಫಂಕ್ಷನ್‌ಗಳಿಗೆ ಮಾಂಸಾಹಾರವನ್ನು ಹೆಚ್ಚಾಗಿ ತಿನ್ನುತ್ತಿದ್ದಾರೆ.ಇರುತ್ತದೆ. ಹಾಗಾಗಿ ಮಾಂಸಾಹಾರ ಸೇವಿಸುವ ಸಂಖ್ಯೆ ಹೆಚ್ಚಾಗಿತ್ತು. ಅದರ ಬೆಲೆಯು ಹೆಚ್ಚಾಗಿದೆ. ಆದರೆ ಅತಿಯಾಗಿ ಮಾಂಸಾಹಾರ ಸೇವಿಸಿ. ಇದರಿಂದ ಮನುಷ್ಯನ ದೇಹದಲ್ಲಿ ದುಷ್ಪರಿಣಾಮ. ಉಂಟಾಗುವ ಬಗ್ಗೆ ಮನುಷ್ಯರಿಗೆ ಅರಿವಿಲ್ಲ. 

ಅತಿಯಾದ ಮಾಂಸಾಹಾರ ತಿನ್ನುವುದರಿಂದ ಆಗುವ ಆರೋಗ್ಯ ಸಮಸ್ಯೆಗಳು : 

  • ಮಾನವನು ಅತಿಯಾದ ಮಾಂಸಾಹಾರ ಸೇವಿಸುವುದರಿಂದ ಕಡಿಮೆ ಸಮಯದಲ್ಲಿ ಅತಿ ಬೇಗನೆ ತೂಕ ಹೆಚ್ಚಾಗುತ್ತದೆ.
  • ಮಾನವನ ದೇಹದ ಜೀರ್ಣಕ್ರಿಯೆಯು ಮಂದಗತಿಯಲ್ಲಿ ನಡೆಯುತ್ತಿದೆ ಮತ್ತು ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ.
  • ಅತಿಯಾದ ಮಾಂಸ ಸೇವಿಸುವುದರಿಂದ ಮಾನವನ ದೇಹದಲ್ಲಿ ಕೆಟ್ಟ ಕೊಬ್ಬು ಹೆಚ್ಚಾಗಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತವೆ.
  • ಮಾನವನ ದೇಹದಲ್ಲಿ ರಕ್ತಸಂಚಲನ ಕಡಿಮೆಯಾಗಿ ರಕ್ತ ಹೆಪ್ಪುಗಟ್ಟುವಿಕೆ ಹೆಚ್ಚಾಗುತ್ತದೆ. ಈ ಕಾಯಿಲೆಯನ್ನ ಥ್ರೊಂಬೊಸಿಸ್ ಕಾಯಿಲೆ ಎನ್ನುತ್ತಾರೆ.
  • ಮಾನವನಲ್ಲಿ ಮೂತ್ರಪಿಂಡದ ಸಮಸ್ಯೆ ಉಂಟಾಗುತ್ತದೆ. ಇದರಿಂದ ಸಿರಂ ಕ್ರಿಯೇಟಿವ್ ಹೆಚ್ಚಾಗಿ ಮೂತ್ರ ಪಿಂಡ ಹಾಳಾಗುತ್ತದೆ.
  • ಅತಿಯಾಗಿ ಮಾಂಸ ಸೇವಿಸುವುದರಿಂದ ಕೊಬ್ಬುಸಹಿತ ಪಿತ್ತಕೋಶ ಉಂಟಾಗಿ ಫ್ಯಾಟಿ ಲಿವರ್ ಹೆಚ್ಚಾಗುತ್ತದೆ.
  • ಮಾನವನು ಉಸಿರಾಡುವಾಗ ಬಾಯಿಯ ದುರ್ವಾಸನೆ ಹೆಚ್ಚಿರುತ್ತದೆ.
  • ಮಾನವನಲ್ಲಿ ಜೀರ್ಣಕ್ರಿಯೆ ಸಮಸ್ಯೆ ಹೆಚ್ಚಾಗುತ್ತದೆ.                                                                                  
  • ಆರೋಗ್ಯ ಸಮಸ್ಯೆಗಳು
    ಹೆಚ್ಚು ಮಾಂಸ ಸೇವನೆಯಿಂದ ಹೃದಯ ರೋಗ, ರಕ್ತದೊತ್ತಡ, ಕೊಲೆಸ್ಟ್ರಾಲ್ ಹೆಚ್ಚಳ ಮತ್ತು ಮಧುಮೇಹದ ಅಪಾಯ ಹೆಚ್ಚಾಗಬಹುದು.

  • ಜೀರ್ಣಕ್ರಿಯೆ ಸಮಸ್ಯೆ
    ಮಾಂಸ ಜೀರ್ಣವಾಗಲು ಹೆಚ್ಚು ಸಮಯ ಬೇಕಾಗುತ್ತದೆ. ಇದರಿಂದ ಅಜೀರ್ಣ, ಗ್ಯಾಸ್ಟ್ರಿಕ್ ಮತ್ತು ಹೊಟ್ಟೆ ನೋವು ಉಂಟಾಗಬಹುದು.

  • ತೂಕ ಹೆಚ್ಚಳ
    ಮಾಂಸದಲ್ಲಿ ಕೊಬ್ಬು ಹೆಚ್ಚು ಇರುವುದರಿಂದ ನಿಯಮಿತವಾಗಿ ಸೇವಿಸಿದರೆ ತೂಕ ಹೆಚ್ಚಾಗುವ ಸಾಧ್ಯತೆ ಇದೆ.

  • ಕ್ಯಾನ್ಸರ್ ಅಪಾಯ
    ಹೆಚ್ಚು ಕೆಂಪು ಮಾಂಸ (Red Meat) ಮತ್ತು ಪ್ರೊಸೆಸ್ಡ್ ಮಾಂಸ ಸೇವನೆ ಕೆಲವೊಂದು ಕ್ಯಾನ್ಸರ್‌ಗಳಿಗೆ ಕಾರಣವಾಗಬಹುದು.

  • ಪರಿಸರ ಹಾನಿ
    ಮಾಂಸ ಉತ್ಪಾದನೆಗೆ ಹೆಚ್ಚಿನ ನೀರು, ಆಹಾರ ಮತ್ತು ಅರಣ್ಯ ನಾಶವಾಗುತ್ತದೆ. ಇದರಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತದೆ.

  • ರಕ್ತದಲ್ಲಿ ಯೂರಿಕ್ ಆಸಿಡ್ ಹೆಚ್ಚಳ
    ಹೆಚ್ಚು ಮಾಂಸ ಸೇವನೆಯಿಂದ ಯೂರಿಕ್ ಆಸಿಡ್ ಹೆಚ್ಚಾಗಿ ಗೌಟ್ (Gout) ರೋಗ ಉಂಟಾಗಬಹುದು.

  • ಸಂಕ್ರಾಮಕ ರೋಗಗಳ ಅಪಾಯ
    ಸರಿಯಾಗಿ ಬೇಯಿಸದ ಮಾಂಸ ಸೇವನೆಯಿಂದ ಆಹಾರ ವಿಷಬಾಧೆ ಹಾಗೂ ಇತರೆ ಸೋಂಕುಗಳ ಅಪಾಯ ಇರುತ್ತದೆ.

  • ನೈತಿಕ ಮತ್ತು ಧಾರ್ಮಿಕ ಕಾರಣಗಳು
    ಕೆಲವರಿಗೆ ಪ್ರಾಣಿಹತ್ಯೆಯ ವಿರುದ್ಧ ನೈತಿಕ ಹಾಗೂ ಧಾರ್ಮಿಕ ಆಕ್ಷೇಪಣೆಗಳಿರುತ್ತವೆ.

ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು : 

  • ಮಾಂಸವನ್ನು ಚೆನ್ನಾಗಿ ಬೇಯಿಸಿ ಸೇವಿಸಬೇಕು.
  • ಕಡಿಮೆ ಕೊಬ್ಬು ಇರುವ ಮಾಂಸವನ್ನು ಸೇವಿಸಬೇಕು. (ಮೀನು, ಚಿಕ್ಕನ್,ಸಿಗಡಿ,)
  • ಸ್ಟೋರ್ ಗಳಲ್ಲಿ ಸಂಗ್ರಹಿಸಿದ ಮಾಂಸವನ್ನ ಸೇವಿಸಬಾರದು.
  • ಮಾಂಸಹಾರವನ್ನು ಸೇವಿಸಿದ ನಂತರ ಅರ್ಧ ತಾಸುಗಳ ನಂತರ ಬಿಸಿ ನೀರು ಸೇವಿಸಬೇಕು.
  • ಮಾಂಸದ ಜೊತೆ ಸಮ ಪ್ರಮಾಣದ ತರಕಾರಿ ಇರುವ ಆಹಾರವನ್ನು ಕೂಡ ಸೇವಿಸಬೇಕು.