Telegram Join My Telegram WhatsApp Join My WhatsApp

ಜಿ.ಬಿ.ಎಸ್. ಪೀಡಿತರಿಗೆ ಸರ್ಕಾರದಿಂದ ನೆರವು.

ಕರ್ನಾಟಕ ರಾಜ್ಯದಲ್ಲಿ ಗಿಲೆನ್-ಬಾರಿ ಸಿಂಡ್ರೋಮ್(ಜಿಬಿಎಸ್) ಕಾಯಿಲೆಯಿಂದ  ಬಳಲುತ್ತಿರುವ ರೋಗಿಗಳಿಗೆ ದುಬಾರಿ ಚಿಕಿತ್ಸೆಯನ್ನು ಕೈಗೆಟುಕುವಂತೆ ಮಾಡುವ ಮೂಲಕ ನೆರವಾಗಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ಈ ಕಾಯಿಲೆಯ ಚಿಕಿತ್ಸೆಯಲ್ಲಿ ಅತ್ಯಂತ ಪ್ರಮುಖವೂ ಮತ್ತು ದುಬಾರಿಯಾದ.ಇಂಟರ್ವ್ಯೂಸ್.ಇಮ್ಮುನೋ ಗ್ಲೋಬ್ಯುಲಿನ್ ಚಿಕಿತ್ಸೆಯನ್ನ ಈಗ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ವ್ಯಾಪ್ತಿಗೆ ತರಲಾಗಿದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಲಕ್ಷಾಂತರ ರೂಪಾಯಿಗಳ ಚಿಕಿತ್ಸಾ ವೆಚ್ಚದ ಭಾರ ತಪ್ಪಲಿದೆ.

ಗಿಲೆನ್-ಬಾರಿ ಸಿಂಡ್ರೊಮ್ ಎಂಬುದು ಒಂದು ಅಪರೂಪದ ಮತ್ತು ಗಂಭೀರವಾದ ಆಟೋ ಇಮ್ಯೂನ್ ಕಾಯಿಲೆಯಾಗಿದ್ದು ಇದರಲ್ಲಿ ದೇಹದ ರೋಗನಿರೋಧಕ ವ್ಯವಸ್ಥೆಯು ತಪ್ಪಾಗಿ ತನ್ನದೇ ಆದ ನರಮಂಡಲದ ಮೇಲೆ ದಾಳಿ ಮಾಡುತ್ತದೆ. ಇದು ಸಾಮಾನ್ಯವಾಗಿ ಹೊಟ್ಟೆಯ ಸೋಂಕು ಅಥವಾ ಉಸಿರಾಟದ ಕಾಯಿಲೆ ನಂತರ ಪ್ರಾರಂಭವಾಗುತ್ತದೆ.

ಈ ಕಾಯಿಲೆಯು ಕಾಲುಗಳಲ್ಲಿ ಮರಗಟ್ಟುವಿಕೆ ಮತ್ತು ದೌರ್ಜನ್ಯದೊಂದಿಗೆ ಶುರುವಾಗಿ ಶೀಘ್ರವಾಗಿ ದೇಹದ ಮೇಲ್ಭಾಗಕ್ಕೆ ಇರುತ್ತದೆ. ಇದು ಸ್ಥಾಯಿಗಳ ಪಾರ್ಶ್ವವಾಯು ಹಾಗು ಉಸಿರಾಟದ ತೊಂದರೆಗೆ ಕಾರಣವಾಗುವ ತುರ್ತು ವೈದ್ಯಕೀಯ ಪರಿಸ್ಥಿತಿಯಾಗಿದೆ. ಸರಿಯಾದ ಸಮಯದಲ್ಲಿ ಪ್ಲಾಸ್ಮಾಎಕ್ಸ್ಚೇಂಜ್ ಚಿಕಿತ್ಸೆ ನೀಡುವ ಮೂಲಕ ಹೆಚ್ಚಿನ ರೋಗಿಗಳನ್ನು ಗುಣಪಡಿಸಬಹುದಾಗಿದೆ. 

ರಾಜ್ಯ ಸರ್ಕಾರದ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಈಗ ಗಿಲೆನ್-ಬಾರಿ ಸಿಂಡ್ರೋಮ್ ಚಿಕಿತ್ಸೆಗೆ ಬಳಸುವ ಅತ್ಯಂತ ದುಬಾರಿ ಐವಿಐಜಿ  ಥೆರಪಿನ ಸೇರಿಸಲಾಗಿದ್ದು, ಪ್ರತಿ ರೋಗಿಗೆ ಗರಿಷ್ಠ 2,00,000 ರೂಪಾಯಿವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ. 

ಈ ಯೋಜನೆಯಡಿ ಐವಿಐಜಿ  ಔಷಧಿಯ ದರವನ್ನ ಪ್ರತಿ ಗ್ರಾಂಗೆ ₹2000 ಎಂದು ನಿಗದಿಪಡಿಸಲಾಗಿದೆ ಮತ್ತು ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ಲಭ್ಯವಿದ್ದರೆ ಎಪಿಎಲ್ ಕಾರ್ಡ್ ಹೊಂದಿದವರಿಗೆ ಸಹ ಪಾವತಿ ಆಧಾರದ ಮೇಲೆ ಶೇಕಡಾ 30 ರಷ್ಟು ರಿಯಾಯಿತಿ ಸಿಗಲಿದೆ. 

ಜಿಬಿಎಸ್  ಚಿಕಿತ್ಸೆಗೆ ಸಾಮಾನ್ಯವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಇದರಿಂದ ೫ ರಿಂದ ೧೦ ಲಕ್ಷ.ರೂಪಾಯಿಗಳ ವರೆಗೆ ವೆಚ್ಚವಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ವಾರ್ಷಿಕ ₹10,00,00,000 ಬಜೆಟ್ ಮೀಸಲಿಟ್ಟು ಚಿಕಿತ್ಸೆಯನ್ನು ಜನಸಾಮಾನ್ಯರಿಗೆ ಲಭ್ಯವಾಗುವಂತೆ ಮಾಡಿದೆ.

ಚಿಕಿತ್ಸೆ ಪಡೆಯಲು ಮಾರ್ಗಸೂಚಿ : 

ರೋಗಿಗಳು ಮೊದಲು ತಮ್ಮ ಹತ್ತಿರದ ಸರ್ಕಾರಿ ಆರೋಗ್ಯ ಸಂಸ್ಥೆ, ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ನೊಂದಿಗೆ ಭೇಟಿ ನೀಡಬೇಕು. ಆಸ್ಪತ್ರೆಯಲ್ಲಿ ಆಧಾರ್ ಕಾರ್ಡ್ ದೃಢೀಕರಣದ ಮೂಲಕ ರೋಗಿಯ ಯೋಜನೆಗೆ ನೊಂದಾಯಿಸಲಾಗುತ್ತದೆ ಮತ್ತು ಅವರಿಗೆ ಒಂದು ವಿಶಿಷ್ಟವಾದ ಎಬಿಆರ್ ಕೆ  ಕಾರ್ಡು ನ್ನು ನೀಡಲಾಗುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ರೋಗ ಪರೀಕ್ಷೆ ಮಾಡಿಸಿಕೊಳ್ಳಬೇಕು. ಒಂದು ವೇಳೆ ಅಲ್ಲಿಗೆ ಚಿಕಿತ್ಸೆಗೆ ಅಗತ್ಯವಿರುವ ಸೌಲಭ್ಯಗಳು ಇಲ್ಲದಿದ್ದರೆ ವೈದ್ಯರು ನೋಂದಾಯಿತ ಖಾಸಗಿ ಆಸ್ಪತ್ರೆಗೆ ಹೋಗಲು ರೆಫರಲ್ ಪತ್ರ ನೀಡುತ್ತಾರೆ. ರೆಫರಲ್ ಪತ್ರ ಮತ್ತು ಎಬಿಆರ್ ಕೆ ಕಾರ್ಡ್ ಬಳಸಿ ರೋಗಿಯು ನಿಗದಿಪಡಿಸಿದ ಆಸ್ಪತ್ರೆಗಳಲ್ಲಿ ನಗದುರಹಿತ ಚಿಕಿತ್ಸೆ ಪಡೆಯಬಹುದು. ರೋಗಿಯ ಸ್ಥಿತಿ ಗಂಭೀರವಾಗಿದ್ದರೆ ರೆಫರಲ್ ಪತ್ರದ ಅಗತ್ಯವಿಲ್ಲದೆ. ನೇರವಾಗಿ ಯಾವುದೇ ನೋಂದಾಯಿತ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲು ಅವಕಾಶವಿದೆ. 

ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಸೇರ್ಪಡೆ ಮಾಡಲಾಗಿದೆ. ಐವಿಐಜಿ ಔಷಧಿಯ ದರ ಪ್ರತಿ ಗ್ರಾಂಗೆ 2000 ನಿಗದಿ ಮಾಡಲಾಗಿದೆ. ರೋಗಿಯ ದೇಹದ ತೂಕಕ್ಕೆ ಅನುಗುಣವಾಗಿ ಚಿಕಿತ್ಸೆ.₹10,00,00,000 ಬಜೆಟ್‌ನಲ್ಲಿ ಮೀಸಲಿಡಲಾಗಿದೆ.

GBS ಸಿಂಡ್ರೋಮ್ ಎಂದರೇನು?

ಗಿಲ್ಲಿಯನ್–ಬಾರೆ ಸಿಂಡ್ರೋಮ್ (GBS) ಒಂದು ಅಪರೂಪದ ಆದರೆ ಗಂಭೀರವಾದ ನರವ್ಯವಸ್ಥೆಯ ರೋಗ. ಇದರಲ್ಲಿ ದೇಹದ ರೋಗನಿರೋಧಕ ವ್ಯವಸ್ಥೆ ತಪ್ಪಾಗಿ ಸ್ವಂತ ನರಗಳ ಮೇಲೆ ದಾಳಿ ಮಾಡುತ್ತದೆ.

GBS ಸಿಂಡ್ರೋಮ್‌ನ ಕಾರಣಗಳು :

ಸ್ಪಷ್ಟ ಕಾರಣ ಯಾವಾಗಲೂ ಗೊತ್ತಾಗುವುದಿಲ್ಲ. ಆದರೆ ಸಾಮಾನ್ಯವಾಗಿ:

  • ವೈರಲ್ ಅಥವಾ ಬ್ಯಾಕ್ಟೀರಿಯಾ ಸೋಂಕಿನ ನಂತರ
    (ಜ್ವರ, ಜಲದೋಷ, ಅಜೀರ್ಣ, COVID-19 ಮುಂತಾದವು)

  • ಅಪರೂಪವಾಗಿ ಲಸಿಕೆ ಪಡೆದ ನಂತರ

  • ಶಸ್ತ್ರಚಿಕಿತ್ಸೆಯ ಬಳಿಕ

GBS ಸಿಂಡ್ರೋಮ್‌ನ ಲಕ್ಷಣಗಳು :

ಲಕ್ಷಣಗಳು ಸಾಮಾನ್ಯವಾಗಿ ಕಾಲಿನಿಂದ ಆರಂಭವಾಗಿ ಮೇಲಕ್ಕೆ ಹರಡುತ್ತವೆ:

  • ಕಾಲುಗಳಲ್ಲಿ ಜುಮ್ಮೆನೆ, ಸುಮ್ಮನೆ ಭಾವನೆ

  • ಕಾಲು ಮತ್ತು ಕೈಗಳಲ್ಲಿ ಬಲಹೀನತೆ

  • ನಡೆಯಲು ಕಷ್ಟ

  • ಕೈಕಾಲುಗಳಲ್ಲಿ ಅಚಲತೆ

  • ಮುಖದ ಸ್ನಾಯುಗಳಲ್ಲಿ ದುರ್ಬಲತೆ

  • ಮಾತನಾಡಲು ಅಥವಾ ನುಂಗಲು ತೊಂದರೆ

  • ಗಂಭೀರ ಸ್ಥಿತಿಯಲ್ಲಿ ಉಸಿರಾಟದ ತೊಂದರೆ

GBS ಸಿಂಡ್ರೋಮ್ ಎಷ್ಟು ಅಪಾಯಕಾರಿ?

  • ಇದು ತುರ್ತು ಚಿಕಿತ್ಸೆ ಅಗತ್ಯವಿರುವ ರೋಗ

  • ಸಮಯಕ್ಕೆ ಚಿಕಿತ್ಸೆ ಪಡೆದರೆ ಹೆಚ್ಚಿನವರು ಸಂಪೂರ್ಣವಾಗಿ ಗುಣಮುಖರಾಗುತ್ತಾರೆ

  • ಚಿಕಿತ್ಸೆ ವಿಳಂಬವಾದರೆ ಅಪಾಯ ಹೆಚ್ಚಾಗಬಹುದು

GBS ಸಿಂಡ್ರೋಮ್‌ನ ಚಿಕಿತ್ಸೆ :

ಪ್ರಮುಖವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ:

  • IVIG ಚಿಕಿತ್ಸೆ (ರೋಗನಿರೋಧಕ ಪ್ರತಿಕ್ರಿಯೆ ಕಡಿಮೆ ಮಾಡಲು)

  • ಪ್ಲಾಸ್ಮಾಫೆರಿಸಿಸ್ (ರಕ್ತ ಶುದ್ಧೀಕರಣ)

  • ಉಸಿರಾಟ ಸಹಾಯ (ಅಗತ್ಯವಿದ್ದರೆ)

  • ಫಿಸಿಯೋಥೆರಪಿ

GBS ಸಿಂಡ್ರೋಮ್ ತಡೆಗಟ್ಟಬಹುದೇ?
  • ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ

  • ಸೋಂಕುಗಳ ನಂತರ ಕಾಣಿಸುವ ಲಕ್ಷಣಗಳನ್ನು ನಿರ್ಲಕ್ಷಿಸಬಾರದು

  • ಕೈಕಾಲುಗಳಲ್ಲಿ ಅಚಾನಕ್ ದುರ್ಬಲತೆ ಕಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು

ಮುಖ್ಯ ಸಂದೇಶ :

ಕೈಕಾಲುಗಳಲ್ಲಿ ಅಚಾನಕ್ ಬಲಹೀನತೆ ಅಥವಾ ಜುಮ್ಮೆನೆ ಇದ್ದರೆ
ತಕ್ಷಣ ಆಸ್ಪತ್ರೆ ಹೋಗುವುದು ಅತ್ಯಂತ ಮುಖ್ಯ.