ಮಹತ್ವದ ಭೌಗೋಳಿಕ ರಾಜಕೀಯ ಬೆಳವಣಿಗೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕ ಅಧಿಕೃತವಾಗಿ ಹೊರಬಂದಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚನೆಯಂತೆ ಸದಸ್ಯತ್ವವನ್ನ ಹಿಂಪಡೆಯಲಾಗಿದೆ.
ಆರೋಗ್ಯ ಇಲಾಖೆ ಹಾಗೂ ವಿದೇಶಾಂಗ ಇಲಾಖೆ ಜಂಟಿಯಾಗಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕ ಹೊರಬಂದ ವಿಷಯವನ್ನು ಪ್ರಕಟಿಸಿವೆ. ಸದಸ್ಯತ್ವ ಜಿನಿವಾದಲ್ಲಿರುವ ಆರೋಗ್ಯ ಸಂಸ್ಥೆಯ ಕೇಂದ್ರ ಚರ್ಚೆಯಲ್ಲಿದ್ದ ಅಮೆರಿಕದ ರಾಷ್ಟ್ರ ಧ್ವಜವನ್ನ ತೆರವುಗೊಳಿಸಲಾಗಿದೆ.
ಕಳೆದ ವರ್ಷ ಜನವರಿ 20 ರಂದು ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದ ಡೊನಾಲ್ಡ್ ಟ್ರಂಪ್, ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬಂದು ನಿರ್ಧಾರ ಪ್ರಕಟಿಸಿದರು. ಹಣಕಾಸು ನೆರವು ನಿಲ್ಲಿಸುವ ಜೊತೆಗೆ ದೇಶದ ಸಿಬ್ಬಂದಿಯನ್ನು ಹಿಂತೆಗೆದುಕೊಂಡಿದ್ದರು. ರೋಗಗಳ ಕಣ್ಗಾವಲು ಮತ್ತು ನಿರ್ಣಾಯಕ ಆರೋಗ್ಯ ಸವಾಲುಗಳ ಅಂತ ವಿಷಯವಾಗಿ ಇತರೆ ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಸಹಕಾರಕ್ಕೆ ಅಮೆರಿಕ ಆದ್ಯತೆ ನೀಡುತ್ತದೆ. ಅದರ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ವೀಕ್ಷಕನಾಗಿ ಮುಂದುವರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕ ಹೊರಬಂದಿದೆ. WHO ನಲ್ಲಿದ್ದ ತನ್ನ ಸದಸ್ಯತ್ವವನ್ನು ಅಮೆರಿಕ ಅಧಿಕೃತವಾಗಿ ರದ್ದುಗೊಳಿಸಿದೆ.
ಅಮೆರಿಕ ನಿರ್ಧಾರದ ಬಳಿಕ ಜಿನೇವಾದಲ್ಲಿರುವ ಕಚೇರಿಯಲ್ಲಿ ಅಮೆರಿಕದ ಧ್ವಜವನ್ನು ತೆರವು ಮಾಡಲಾಗಿದೆ. ಚೀನಾದ ವುಹಾನ್‌ನಲ್ಲಿ ಉದ್ಭವಿಸಿದ COVID 19 ಸಾಂಕ್ರಾಮಿಕ ರೋಗವನ್ನು ತಪ್ಪಾಗಿ ನಿರ್ವಹಿಸಿದ್ದಲ್ಲದೆ, ಸುಧಾರಣೆಗಳನ್ನು ಕೈಗೊಳ್ಳಲು ವಿಫಲವಾಗಿದೆ ಎಂದು ಅಮೆರಿಕ ಆರೋಪಿಸಿತ್ತು.
2024 ಮತ್ತು 2025 ರ WHO ಸದಸ್ಯತ್ವ ಶುಲ್ಕದಲ್ಲಿ ಅಮೆರಿಕ ಇನ್ನೂ ಸುಮಾರು 260 ಮಿಲಿಯನ್ ಡಾಲರ್ ಗಳನ್ನು ಬಾಕಿ ಉಳಿಸಿಕೊಂಡಿದೆ. ಬಾಕಿಗಳನ್ನು ಪಾವತಿಸದೆ ಅಮೆರಿಕದ ಈ ಬೇರ್ಪಡಿಕೆ ಸಾಧ್ಯವಿಲ್ಲ ಎಂದು ಅದರ ನಿರ್ಧಾರ ಬಳಿಕ WHO ವಕ್ತಾರರು ತಿಳಿಸಿದ್ದಾರೆ.
WHO ಸದಸ್ಯ ರಾಷ್ಟ್ರಗಳ ಅಲ್ಲಿ ಅನುಸೂಚಿತ ರಾಜಕೀಯ ಪ್ರಭಾವದಿಂದ ಸ್ವತಂತ್ರವನ್ನು ಪ್ರದರ್ಶಿಸುವಲ್ಲಿ ಅಸಮರ್ಥತೆಯಿಂದಾಗಿ ಅಮೆರಿಕ ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರ ಬಂದಿದೆ ಎಂದು ಅಮೆರಿಕದ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆ ಮತ್ತು ಅಮೆರಿಕದ ವಿದೇಶಾಂಗ ಇಲಾಖೆ ಘೋಷಿಸಿದೆ.
ಸದಸ್ಯತ್ವ ಪಡೆದ ಅಮೇರಿಕಾದ ತಿರುಗೇಟು ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ 2024 ಮತ್ತು 2025ರ ಎರಡು ವರ್ಷದ ಸದಸ್ಯತ್ವ ಶುಲ್ಕ 260 ದಶಲಕ್ಷ ಡಾಲರ್ ಪಾವತಿಸುವಂತೆ ಸೂಚಿಸಿದೆ. ಬಾಕಿ ಉಳಿದಿರುವ ಶುಲ್ಕಗಳನ್ನು ಪಾವತಿಸದೆ ಸಂಸ್ಥೆಯಿಂದ ಸಂಪೂರ್ಣ ಹೊರಹೋಗಲು ಸಾಧ್ಯವಿಲ್ಲ ಎಂದು ಆರೋಗ್ಯ ಸಂಸ್ಥೆ ವಕ್ತಾರರು ತಿಳಿಸಿದ್ದಾರೆ.
COVID ನಿರ್ವಹಣೆಯಲ್ಲಿ ವಿಫಲವಾದ ಆರೋಗ್ಯ ಸಂಸ್ಥೆಯಿಂದ ಬಾರಿಕ್ಕೆ ದೊಡ್ಡ ಮಟ್ಟದ ಆರ್ಥಿಕ ನಷ್ಟವಾಗಿದೆ. ಹೀಗಾಗಿ ವಿಶ್ವ ಸಂಸ್ಥೆಗೆ ನೀಡಬೇಕಿರುವ ಎಲ್ಲ ರೀತಿಯ ಧನಸಹಾಯ ನೆರವು ನಿಲ್ಲಿಸಲಾಗಿದೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಕಳೆದ ವರ್ಷ ಜನವರಿಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕಾದ ಯೋಜನೆಯನ್ನು ಘೋಷಿಸಿದ್ದರು. ವರ್ಷಪೂರ್ತಿ ನಡೆದ ಪ್ರಕ್ರಿಯೆಯಲ್ಲಿ ಅಮೇರಿಕವು WHOಗೆ ಹಣಕಾಸು ಒದಗಿಸುವುದನ್ನು ನಿಲ್ಲಿಸಿತು. ಅಲ್ಲದೆ WHOನಿಂದ ತನ್ನ ಎಲ್ಲ ಸಿಬ್ಬಂದಿಗಳನ್ನು ಹಿಂತೆಗೆದುಕೊಂಡಿತು.
ಅಮೆರಿಕದ ಆರೋಪವೇನು?
ಜಾಗತಿಕ ಆರೋಗ್ಯ ಸಂಸ್ಥೆ COVID-19 ಸಂಕ್ರಾಮಿಕ ರೋಗವನ್ನು ನಿರ್ವಹಿಸುವಲ್ಲಿ ವಿಫಲವಾಗಿದೆ. ಪ್ರಸ್ತುತ ಅಗತ್ಯತೆಗೆ ಅನುಗುಣವಾಗಿ ಸುಧಾರಣೆ ಕ್ರಮಗಳನ್ನು ಕೈಗೊಳ್ಳಲು ವಿಫಲವಾಗಿದೆ ಎಂಬುದು ಅಮೆರಿಕದ ಆರೋಪ.
ಅಮೆರಿಕಾ ಬಗ್ಗೆ ಮಾಹಿತಿ :
ಅಮೆರಿಕಾ ಅಥವಾ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ (USA) ಉತ್ತರ ಅಮೆರಿಕಾ ಖಂಡದಲ್ಲಿರುವ ವಿಶ್ವದ ಪ್ರಮುಖ ದೇಶಗಳಲ್ಲಿ ಒಂದು.
ಭೌಗೋಳಿಕ ಸ್ಥಿತಿ :
- ಖಂಡ: ಉತ್ತರ ಅಮೆರಿಕಾ
- ನೆರೆ ದೇಶಗಳು: ಕೆನಡಾ (ಉತ್ತರ), ಮೆಕ್ಸಿಕೋ (ದಕ್ಷಿಣ)
- ಮಹಾಸಾಗರಗಳು: ಅಟ್ಲಾಂಟಿಕ್ ಮಹಾಸಾಗರ (ಪೂರ್ವ), ಪೆಸಿಫಿಕ್ ಮಹಾಸಾಗರ (ಪಶ್ಚಿಮ)
ರಾಜಧಾನಿ :
- ವಾಷಿಂಗ್ಟನ್ ಡಿ.ಸಿ.
ಪ್ರಮುಖ ನಗರಗಳು :
- ನ್ಯೂಯಾರ್ಕ್
- ಲಾಸ್ ಏಂಜಲೀಸ್
- ಚಿಕಾಗೋ
- ಸ್ಯಾನ್ ಫ್ರಾನ್ಸಿಸ್ಕೊ
- ಹ್ಯೂಸ್ಟನ್
ಜನಸಂಖ್ಯೆ :
- ಸುಮಾರು 33 ಕೋಟಿ ಜನರು
- ವಿವಿಧ ಜಾತಿ, ಧರ್ಮ, ಭಾಷೆಗಳ ಜನರು ವಾಸಿಸುತ್ತಾರೆ
ಭಾಷೆ :
- ಅಧಿಕೃತ ಭಾಷೆ: ಇಲ್ಲ
- ಹೆಚ್ಚು ಬಳಕೆಯ ಭಾಷೆ: ಇಂಗ್ಲಿಷ್
ಧ್ವಜ :
- 13 ಪಟ್ಟಿಗಳು (13 ಕಾಲೋನಿಗಳ ಸಂಕೇತ)
- 50 ನಕ್ಷತ್ರಗಳು (50 ರಾಜ್ಯಗಳ ಸಂಕೇತ)
ಆಡಳಿತ ವ್ಯವಸ್ಥೆ :
- ಸಂಘೀಯ ಗಣರಾಜ್ಯ
- ರಾಷ್ಟ್ರಪತಿ ಆಡಳಿತ ವ್ಯವಸ್ಥೆ
ರಾಷ್ಟ್ರಪತಿ :
- ಅಮೆರಿಕಾ ದೇಶದ ಆಡಳಿತ ಮುಖ್ಯಸ್ಥರು ರಾಷ್ಟ್ರಪತಿ
ಕರೆನ್ಸಿ :
- ಡಾಲರ್ ($)
ಶಿಕ್ಷಣ ಮತ್ತು ತಂತ್ರಜ್ಞಾನ :
- ಹಾರ್ವರ್ಡ್, MIT, ಸ್ಟ್ಯಾಂಫರ್ಡ್ ಮುಂತಾದ ಪ್ರಸಿದ್ಧ ವಿಶ್ವವಿದ್ಯಾಲಯಗಳು
- ತಂತ್ರಜ್ಞಾನ, ಬಾಹ್ಯಾಕಾಶ, ವೈದ್ಯಕೀಯ ಕ್ಷೇತ್ರಗಳಲ್ಲಿ ಮುಂಚೂಣಿ ದೇಶ
ವಿಜ್ಞಾನ ಮತ್ತು ರಕ್ಷಣಾ ಕ್ಷೇತ್ರ :
- NASA – ಬಾಹ್ಯಾಕಾಶ ಸಂಶೋಧನಾ ಸಂಸ್ಥೆ
- ವಿಶ್ವದ ಅತ್ಯಂತ ಶಕ್ತಿಶಾಲಿ ಸೇನೆಗಳಲ್ಲಿ ಒಂದು
ಅಂತಾರಾಷ್ಟ್ರೀಯ ಪ್ರಭಾವ :
- ಯುಎನ್, ನ್ಯಾಟೋ, ಜಿ–7 ಮುಂತಾದ ಸಂಘಟನೆಗಳಲ್ಲಿ ಪ್ರಮುಖ ಪಾತ್ರ
ವಿಶ್ವ ಆರೋಗ್ಯ ಸಂಸ್ಥೆ (WHO) ಬಗ್ಗೆ ಮಾಹಿತಿ :
WHO (World Health Organization) ಅಂದರೆ ವಿಶ್ವ ಆರೋಗ್ಯ ಸಂಸ್ಥೆ. ಇದು ಜಗತ್ತಿನ ಜನರ ಆರೋಗ್ಯವನ್ನು ರಕ್ಷಿಸುವ ಮತ್ತು ಸುಧಾರಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುವ ಅಂತರರಾಷ್ಟ್ರೀಯ ಸಂಸ್ಥೆ.
ಸ್ಥಾಪನೆ :
- ಸ್ಥಾಪನೆ ದಿನಾಂಕ: 7 ಏಪ್ರಿಲ್ 1948
- ಮುಖ್ಯ ಕಚೇರಿ: ಜಿನೀವಾ, ಸ್ವಿಟ್ಜರ್ಲ್ಯಾಂಡ್
- ಸ್ಥಾಪನಾ ದಿನವನ್ನು ಪ್ರತಿವರ್ಷ ವಿಶ್ವ ಆರೋಗ್ಯ ದಿನ (World Health Day) ಆಗಿ ಆಚರಿಸಲಾಗುತ್ತದೆ.
ಸದಸ್ಯ ರಾಷ್ಟ್ರಗಳು :
- WHOಗೆ 194 ದೇಶಗಳು ಸದಸ್ಯರಾಗಿವೆ.
- ಭಾರತವೂ WHOಯ ಸದಸ್ಯ ರಾಷ್ಟ್ರವಾಗಿದೆ.
WHOಯ ಮುಖ್ಯ ಉದ್ದೇಶಗಳು :
- ಜನರ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ
- ರೋಗ ನಿಯಂತ್ರಣ ಮತ್ತು ತಡೆ (ಕೋವಿಡ್-19, ಪೋಲಿಯೊ, ಮಲೇರಿಯಾ ಇತ್ಯಾದಿ)
- ಆರೋಗ್ಯ ನೀತಿ ಮಾರ್ಗದರ್ಶನ ನೀಡುವುದು
- ತಾಯಿ ಮತ್ತು ಮಕ್ಕಳ ಆರೋಗ್ಯ ಸುಧಾರಣೆ
- ಪೌಷ್ಟಿಕ ಆಹಾರ ಮತ್ತು ಸ್ವಚ್ಛತೆ ಕುರಿತು ಜಾಗೃತಿ
WHOಯ ಪ್ರಮುಖ ಕಾರ್ಯಗಳು :
- ಜಾಗತಿಕ ಮಟ್ಟದಲ್ಲಿ ಆರೋಗ್ಯ ಸಂಶೋಧನೆ
- ರೋಗಗಳ ಕುರಿತು ಮಾಹಿತಿ ಸಂಗ್ರಹ ಮತ್ತು ವಿಶ್ಲೇಷಣೆ
- ಔಷಧಿ ಮತ್ತು ಲಸಿಕೆಗಳ ಸುರಕ್ಷತೆ ಕುರಿತು ಮಾರ್ಗಸೂಚಿ
- ತುರ್ತು ಆರೋಗ್ಯ ಪರಿಸ್ಥಿತಿಗಳಲ್ಲಿ ಸಹಾಯ
ಭಾರತದಲ್ಲಿ WHO :
- ಭಾರತದಲ್ಲಿ WHO ಹಲವಾರು ಆರೋಗ್ಯ ಯೋಜನೆಗಳಿಗೆ ಸಹಕಾರ ನೀಡುತ್ತಿದೆ.
- ರಾಷ್ಟ್ರೀಯ ಆರೋಗ್ಯ ಮಿಷನ್, ಲಸಿಕಾ ಕಾರ್ಯಕ್ರಮಗಳಿಗೆ ಮಾರ್ಗದರ್ಶನ.