ಗಗನಯಾತ್ರಿ ಸುನಿತಾ ವಿಲಿಯಮ್ಸ ಅವರು 27 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಮೂರು ಬಾರಿ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿ ಹಲವು ದಾಖಲೆ ಸೃಷ್ಟಿಸಿದ್ದ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅಮೆರಿಕದ ನಾಸಾದಿಂದ ನಿವೃತ್ತಿಯಾಗಿದ್ದಾರೆ.
1987 ರಲ್ಲಿ ಅಮೇರಿಕಾದ ನೌಕಾಪಡೆ ಸೇರಿ ಅಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದ ಸುನೀತ 1998 ರಲ್ಲಿ ನಾಸಾಗೆ ಸೇರ್ಪಡೆಯಾಗಿದ್ದರು. ಬಳಿಕ 27 ವರ್ಷದಲ್ಲಿ ಮೂರು ಬಾರಿ ISS ಗೆ ಪ್ರಯಾಣ ಕೈಗೊಂಡಿದ್ದ ಸುನೀತ ಈ ವೇಳೆ ಬಾಹ್ಯಾಕಾಶದಲ್ಲಿ ಒಟ್ಟು 687 ದಿನಗಳ ಕಳೆದಿದ್ದರು. ಜೊತೆಗೆ 62 ಗಂಟೆ 6 ನಿಮಿಷಗಳ ಕಾಲ ಬಾಹ್ಯಾಕಾಶ ನಡಿಗೆ ಮಾಡಿದ್ದಾರೆ.ಅಲ್ಲಿ ಮ್ಯಾರಥಾನ್ ಓಡಿದ ಮೊದಲ ಮಹಿಳೆ ಎಂಬ ದಾಖಲೆಯೂ ಇವರಿಗಿದೆ.
ಸುನೀತ ಮೊದಲ ಬಾರಿ 2006 ಡಿಸೆಂಬರ್ ನಲ್ಲಿ ಡಿಸ್ಕವರಿ ಬಾಹ್ಯಾಕಾಶ ನೌಕೆಯಲ್ಲಿ ತೆರಳಿದರು. ಬಳಿಕ 2024 ರ ಜೂನ್ ನಲ್ಲಿ ಸಹ ಗಗನಯಾತ್ರಿ ಬುಚ್ ವಿಲ್ಮೋರ್ ಜೊತೆಗೆ ಸುನಿತ ಮತ್ತೆ ಬಾಹ್ಯಾಕಾಶಕ್ಕೆ ತೆರಳಿದರು. ಸುನೀತರವರ ಕೊನೆಯ ಬಾಹ್ಯಾಕಾಶ ಪ್ರಯಾಣ ಸಾಕಷ್ಟು ಆತಂಕ ಸೃಷ್ಟಿಸಿತ್ತು. 2024 ರ ಜೂನ್ ನಲ್ಲಿ ಎಂಟು ದಿನಗಳ ಮಿಷನ್ ಗೆಂದು ISS ಗೆ ತೆರಳಿದ್ದ ಸುನಿತಾ ಮತ್ತು ಬುಚ್ ಅವರು ಸ್ಟಾರ್‌ಲೈನರ್ ಗಗನ ನೌಕೆಯಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಯಿಂದಾಗಿ 286 ದಿನಗಳ ಕಾಲ ಅಲ್ಲೇ ಉಳಿಯಬೇಕಾಯಿತು.
ಗುಜರಾತ್ ಮೂಲದ ದೀಪಕ್ ಪಾಂಡ್ಯ.ಮತ್ತು ಸ್ಲೊವೇನಿಯಾದ ಮೂಲದ ಉರ್ಸುಲಿನ್ ಬೊನ್ನಿ ದಂಪತಿಗೆ ಸೆಪ್ಟೆಂಬರ್ 19, 1965 ರಲ್ಲಿ ಜನಿಸಿದ ಸುನಿತಾ ವಿಲಿಯಮ್ಸ್ ಬಾಹ್ಯಾಕಾಶದ ಬಗ್ಗೆ ಬಾಲ್ಯದಿಂದಲೇ ಒಲವು ಹೊಂದಿದ್ದವರು.
ಅಮೆರಿಕ ನೌಕಾ ಪಡೆಯಲ್ಲಿ ಕ್ಯಾಪ್ಟನ್ ಆಗಿದ್ದ ಸುನಿತ ಈ ಅವಧಿಯಲ್ಲಿ 4000 ಕ್ಕೂ ಹೆಚ್ಚು ಗಂಟೆಗಳ ಕಾಲ 40 ವಿವಿಧ ವಿಮಾನ.ಕ್ಯಾಪ್ಟನ್ ಚಲಾಯಿಸಿದ ಸುದೀರ್ಘ ಅನುಭವ ಹೊಂದಿದ್ದಾರೆ.
ಸುನೀತಾ ವಿಲಿಯಮ್ಸ್ (Sunita Williams) ಅವರ ಬಗ್ಗೆ ಸಂಪೂರ್ಣ ಮಾಹಿತಿ :
ಪೂರ್ಣ ಹೆಸರು: ಸುನೀತಾ ಲಿನ್ ವಿಲಿಯಮ್ಸ್
ಜನನ: 19 ಸೆಪ್ಟೆಂಬರ್ 1965
ಜನನ ಸ್ಥಳ: ಯೂಕ್ಲಿಡ್, ಒಹಿಯೋ, ಅಮೆರಿಕ
ಪೌರತ್ವ: ಅಮೆರಿಕ
ವೃತ್ತಿ: ನಾಸಾ ಅಂತರಿಕ್ಷಯಾತ್ರಿ, ಅಮೆರಿಕ ನೌಕಾಪಡೆಯ ಅಧಿಕಾರಿ
ಕುಟುಂಬ ಹಿನ್ನೆಲೆ :
- ತಂದೆ: ದೀಪಕ್ ಪಾಂಡೆ ವಿಲಿಯಮ್ಸ್ (ಭಾರತೀಯ ಮೂಲ – ಗುಜರಾತ್)
- ತಾಯಿ: ಬೋನಿ ಪಾಂಡೆ
- ಸುನೀತಾ ವಿಲಿಯಮ್ಸ್ ಅವರಿಗೆ ಭಾರತೀಯ ಮೂಲದ ತಂದೆ ಇರುವುದರಿಂದ ಭಾರತಕ್ಕೆ ವಿಶೇಷ ಸಂಬಂಧವಿದೆ.
ಶಿಕ್ಷಣ :
- ಬ್ಯಾಚುಲರ್ ಪದವಿ: ನೌಕಾ ವಿಜ್ಞಾನ (U.S. Naval Academy)
- ಮಾಸ್ಟರ್ ಪದವಿ: ಇಂಜಿನಿಯರಿಂಗ್ ಮ್ಯಾನೇಜ್‌ಮೆಂಟ್
ಅಂತರಿಕ್ಷ ಸಾಧನೆಗಳು :
- ನಾಸಾ ಅಂತರಿಕ್ಷಯಾತ್ರೆಗೆ ಆಯ್ಕೆ: 1998
- ಅಂತರಿಕ್ಷದಲ್ಲಿ ಕಳೆದ ಒಟ್ಟು ಸಮಯ: 300 ದಿನಗಳಿಗಿಂತ ಹೆಚ್ಚು
- ಅಂತರಿಕ್ಷ ನಡಿಗೆಗಳು (Spacewalks): 7 ಬಾರಿ
- ಅಂತರಿಕ್ಷ ನಡಿಗೆಯಲ್ಲಿ ಕಳೆದ ಸಮಯ: ಸುಮಾರು 50 ಗಂಟೆಗಳು
ಪ್ರಮುಖ ಮಿಷನ್‌ಗಳು :
- ಎಕ್ಸ್‌ಪಿಡಿಷನ್ 14 & 15 (2006–2007)
- ಎಕ್ಸ್‌ಪಿಡಿಷನ್ 32 & 33 (2012) – ಅಂತರಿಕ್ಷ ಕೇಂದ್ರದ ಕಮಾಂಡರ್ ಆಗಿದ್ದ ಎರಡನೇ ಮಹಿಳೆ
ವಿಶೇಷ ದಾಖಲೆಗಳು :
- ಅಂತರಿಕ್ಷದಲ್ಲಿ ಮ್ಯಾರಥಾನ್ ಓಡಿದ ಮೊದಲ ವ್ಯಕ್ತಿ
- ಮಹಿಳಾ ಅಂತರಿಕ್ಷಯಾತ್ರಿಗಳಲ್ಲಿ ಹೆಚ್ಚು ಸಮಯ ಅಂತರಿಕ್ಷ ನಡಿಗೆ ಮಾಡಿದವರಲ್ಲಿ ಒಬ್ಬರು
- ವಿಜ್ಞಾನ ಮತ್ತು ಧೈರ್ಯದ ಪ್ರತೀಕ
ಆಸಕ್ತಿಗಳು :
- ಯೋಗ
- ಓಟ
- ಈಜು
ಭಾರತಕ್ಕೆ ಸಂಬಂಧ :
- ಸುನೀತಾ ವಿಲಿಯಮ್ಸ್ ಹಲವು ಬಾರಿ ಭಾರತಕ್ಕೆ ಭೇಟಿ ನೀಡಿದ್ದಾರೆ.
- ಯುವಕರಿಗೆ ವಿಜ್ಞಾನ ಮತ್ತು ಅಂತರಿಕ್ಷ ಕ್ಷೇತ್ರದಲ್ಲಿ ಪ್ರೇರಣೆಯಾಗಿದ್ದಾರೆ.