2024-25 ರಲ್ಲಿ ನಡೆದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ವಿಶ್ವದ ಅತಿ ದೊಡ್ಡ ಪಕ್ಷ ಬಿಜೆಪಿ ಅತಿ ಹೆಚ್ಚು ಖರ್ಚು ಮಾಡಿದೆ.
ಈ ವೇಳೆ ಬಿಜೆಪಿ 3,335,36 ಕೋಟಿ ರು ಖರ್ಚು ಮಾಡಿದೆ. ಕಾಂಗ್ರೆಸ್ 896,26 ಕೋಟಿ ವ್ಯಯಿಸಿದೆ. ಬಿಜೆಪಿಯ ಖರ್ಚು ಕಾಂಗ್ರೆಸ್ಗಿಂತ 3.75 ಪಟ್ಟು ಹೆಚ್ಚಿದೆ. ಬಿಜೆಪಿ 2019-20ರ ಲೋಕಸಭಾ ಮತ್ತು ಏಳು ವಿಧಾನಸಭಾ ಚುನಾವಣೆಗೆ ವಹಿಸಿದ 1,352.92 ಕೋಟಿ ರೂಪಾಯಿಗಿಂತ ಸುಮಾರು ಎರಡೂವರೆ ಪಟ್ಟು ಹೆಚ್ಚಾಗಿದೆ ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಆಡಿಟ್ ವರದಿಯಲ್ಲಿ ಉಲ್ಲೇಖವಾಗಿದೆ.
ಬಿಜೆಪಿ ಒಟ್ಟು 3,774.58 ಕೋಟಿ ರೂ ಗಳಲ್ಲಿ 2,257.05 ಕೋಟಿ ರೂಗಳನ್ನ ಜಾಹೀರಾತು ಮತ್ತು ಪ್ರಚಾರಕ್ಕೆಂದೇ ವ್ಯಹಿಸಿದೆ ಎಂದು ವರದಿ ಹೇಳಿದೆ.
ಭಾರತದ ಚುನಾವಣಾ ಆಯೋಗ (Election Commission of India) :
ಭಾರತದ ಚುನಾವಣಾ ಆಯೋಗವು ದೇಶದಲ್ಲಿ ನಡೆಯುವ ಎಲ್ಲಾ ಚುನಾವಣೆಗಳನ್ನು ಸ್ವತಂತ್ರ, ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿ ನಡೆಸುವ ಜವಾಬ್ದಾರಿಯಿರುವ ಸಂವಿಧಾನಾತ್ಮಕ ಸಂಸ್ಥೆಯಾಗಿದೆ.
ಸ್ಥಾಪನೆ :
- ಸ್ಥಾಪನೆಯ ದಿನಾಂಕ: 25 ಜನವರಿ 1950
- ಸಂವಿಧಾನಾತ್ಮಕ ಸ್ಥಾನ: ಭಾರತೀಯ ಸಂವಿಧಾನದ ಕಲಂ 324
ಮುಖ್ಯ ಕಚೇರಿ :
- ನವದೆಹಲಿ
ಸಂರಚನೆ :
ಚುನಾವಣಾ ಆಯೋಗವು ಸಾಮಾನ್ಯವಾಗಿ :
- 1 ಮುಖ್ಯ ಚುನಾವಣಾ ಆಯುಕ್ತ (Chief Election Commissioner)
- 2 ಚುನಾವಣಾ ಆಯುಕ್ತರು (Election Commissioners)
ಇವರನ್ನೊಳಗೊಂಡಿರುತ್ತದೆ.
ಪ್ರಮುಖ ಕರ್ತವ್ಯಗಳು :
- ಲೋಕಸಭೆ ಚುನಾವಣೆಗಳು
- ರಾಜ್ಯ ವಿಧಾನಸಭೆ ಚುನಾವಣೆಗಳು
- ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆಗಳು
- ರಾಜಕೀಯ ಪಕ್ಷಗಳ ಮಾನ್ಯತೆ
- ಮಾದರಿ ನಡವಳಿ ಸಂಹಿತೆ (Model Code of Conduct) ಜಾರಿ
- ಮತದಾರರ ಪಟ್ಟಿಯ ತಯಾರಿ ಮತ್ತು ನವೀಕರಣ
- ಇವಿಎಂ ಮತ್ತು ವಿವಿಪ್ಯಾಟ್ ಬಳಕೆಯ ಮೇಲ್ವಿಚಾರಣೆ
ಸ್ವತಂತ್ರತೆ :
- ಚುನಾವಣಾ ಆಯೋಗವು ಸರ್ಕಾರದ ಹಸ್ತಕ್ಷೇಪವಿಲ್ಲದೆ ಕಾರ್ಯನಿರ್ವಹಿಸುವ ಸ್ವತಂತ್ರ ಸಂಸ್ಥೆ
- ಮುಖ್ಯ ಚುನಾವಣಾ ಆಯುಕ್ತರನ್ನು ಸುಲಭವಾಗಿ ಪದಚ್ಯುತಿಗೊಳಿಸಲು ಸಾಧ್ಯವಿಲ್ಲ
ರಾಷ್ಟ್ರೀಯ ಮತದಾರರ ದಿನ :
- 25 ಜನವರಿ – ರಾಷ್ಟ್ರೀಯ ಮತದಾರರ ದಿನವಾಗಿ ಆಚರಿಸಲಾಗುತ್ತದೆ
ಮಹತ್ವ :
- ಪ್ರಜಾಪ್ರಭುತ್ವದ ಮೂಲಸ್ತಂಭ
- ಜನರ ಮತದಾನದ ಹಕ್ಕನ್ನು ರಕ್ಷಿಸುವ ಸಂಸ್ಥೆ
- ನ್ಯಾಯಯುತ ಚುನಾವಣೆಗಳ ಮೂಲಕ ಜನಶಾಸನವನ್ನು ಬಲಪಡಿಸುತ್ತದೆ.