ದೇಶದ ಪ್ರಮುಖ ಕಾಲೇಜು ಸಂಬಂಧಿ ಆಪ್ ಆಗಿರುವ ಆಪ್ಲಿ (Appli) ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಉನ್ನತ ಶಿಕ್ಷಣದ ಬಗ್ಗೆ ಹಲವು ತರಹದ ಸಲಹೆ, ಮಾರ್ಗದರ್ಶನಗಳನ್ನು ನೀಡಲು ಮುಂದಾಗಿದೆ.
ಈಗಾಗಲೇ ಅಪ್ಲಿಯಲ್ಲಿ ದಾಖಲಾತಿ ಸೌಲಭ್ಯವನ್ನು ಸಕ್ರಿಯಗೊಳಿಸಲಾಗಿದೆ. ಇದು ವಿದ್ಯಾರ್ಥಿಗಳನ್ನು ಒಳಗೊಂಡು ಪೋಷಕರಿಗೆ ಕಾಲೇಜುಗಳನ್ನು ಕಂಡುಕೊಳ್ಳಲು ಮತ್ತು ಆಯ್ಕೆಯ ಕಾಲೇಜುಗಳನ್ನು ಅಂತಿಮಗೊಳಿಸಲು ಈ ಆಪ್ ಸಹಕಾರಿಯಾಗಲಿದೆ.
ಮುಖ್ಯವಾಗಿ ವಿವಿಧ ಪದವಿಗಳ ಕೋರ್ಸ್ ಗಳು ಸೇರಿದಂತೆ ಐಚ್ಚಿಕ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬವುದಾಗಿರುತ್ತದೆ. ವಿದ್ಯಾರ್ಥಿಗಳು ಸರಿಯಾದ ಕಾಲೇಜುಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಆ ಆಪ್ ನೀಡುತ್ತದೆ. ಯಾವ ಉದ್ದೇಶದಿಂದ ಆಯ್ಕೆ ಮಾಡಿಕೊಂಡಲ್ಲಿ ಮುಂದಿನ ದಿನಗಳಲ್ಲಿ ಅನುಕೂಲವಾಗುತ್ತದೆ ಎಂಬ ಸಾಕಷ್ಟು ವಿವರಣೆಗಳನ್ನು ನೀಡುವುದಲ್ಲದೆ, ಹೆಚ್ಚಿನ ಅನುಕೂಲವನ್ನು ಈ ಆಪ್ ಒದಗಿಸಲಿದೆ ಎಂದು ಆಪ್ಲಿಯ ಸಂಸ್ಥಾಪಕ ಮತ್ತು ಸಿಇಓ “ನಂಜುಂಡ ಪ್ರಸಾದ್” ರವರು ತಿಳಿಸಿದ್ದಾರೆ.
Appli App ಒಂದು ಶಿಕ್ಷಣ ಸಹಾಯಕ ಮೊಬೈಲ್ ಅಪ್ಲಿಕೇಶನ್ ಆಗಿದ್ದು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವವರಿಗೆ ಉಪಯುಕ್ತವಾಗಿರುತ್ತದೆ.
Appli Appನ ಪ್ರಮುಖ ಉದ್ದೇಶಗಳು :
- ಆನ್ಲೈನ್ ಅಧ್ಯಯನ: ಪಾಠಗಳು, ನೋಟ್ಸ್, ವೀಡಿಯೊ ಲೆಕ್ಚರ್ಗಳು
- ಪರೀಕ್ಷಾ ತಯಾರಿ: ಮಾದರಿ ಪ್ರಶ್ನೆಪತ್ರಿಕೆಗಳು, ಕ್ವಿಜ್ಗಳು
- ಶಿಕ್ಷಣ ಮಾಹಿತಿ: ಕೋರ್ಸ್ಗಳು, ಪ್ರವೇಶ ಮಾಹಿತಿ, ವಿದ್ಯಾರ್ಥಿವೇತನ ವಿವರಗಳು
- ಡಿಜಿಟಲ್ ಲರ್ನಿಂಗ್: ಮೊಬೈಲ್ ಮೂಲಕ ಎಲ್ಲೆಂದರಲ್ಲಿ ಕಲಿಕೆ
Appli Appನ ಪ್ರಮುಖ ವೈಶಿಷ್ಟ್ಯಗಳು :
- ಸರಳ ಹಾಗೂ ಬಳಕೆದಾರ ಸ್ನೇಹಿ ವಿನ್ಯಾಸ
- ವಿವಿಧ ತರಗತಿಗಳು/ವಿಷಯಗಳಿಗೆ ವಿಷಯ
- ಉಚಿತ ಹಾಗೂ ಪೇಯ್ಡ್ ಅಧ್ಯಯನ ಸಾಮಗ್ರಿ
- ಪ್ರಗತಿ ಟ್ರ್ಯಾಕಿಂಗ್ (ಕೆಲವು ಆವೃತ್ತಿಗಳಲ್ಲಿ)
ಯಾರಿಗೆ ಉಪಯುಕ್ತ?
- ಶಾಲಾ ವಿದ್ಯಾರ್ಥಿಗಳು
- ಕಾಲೇಜು ವಿದ್ಯಾರ್ಥಿಗಳು
- ಸ್ಪರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳು (PSI, FDA, SDA, ಬ್ಯಾಂಕ್, SSC ಮುಂತಾದವು)
- ಶಿಕ್ಷಕರು
Appli App ಬಳಸುವ ವಿಧಾನ :
- Google Play Store ನಿಂದ Appli App ಡೌನ್ಲೋಡ್ ಮಾಡಿ
- ಮೊಬೈಲ್ ನಂಬರ್/ಇಮೇಲ್ ಮೂಲಕ ನೋಂದಣಿ ಮಾಡಿ
- ಬೇಕಾದ ಕೋರ್ಸ್ ಅಥವಾ ವಿಷಯವನ್ನು ಆಯ್ಕೆ ಮಾಡಿ
- ಅಧ್ಯಯನ ಆರಂಭಿಸಿ