ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಡಿಜಿಟಲ್ ಕ್ರಾಂತಿಗೆ ಸಾಕ್ಷಿಯಾಗುತ್ತಿರುವ ಇ-ಆಫೀಸ್ ಜಾರಿಯಲ್ಲಿ ಕಲಬುರ್ಗಿ ಜಿಲ್ಲೆ ರಾಜ್ಯದಲ್ಲೆ ಮೊದಲ ಸ್ಥಾನ ಪಡೆದು ಗಮನ ಸೆಳೆದಿದೆ, ಕಚೇರಿ ಕಾರ್ಯವಿಧಾನಗಳಲ್ಲಿ ಪಾರದರ್ಶಕತೆ, ವೇಗ ಮತ್ತು ಜವಾಬ್ದಾರಿಯನ್ನು ಹೆಚ್ಚಿಸುವ ಉದ್ದೇಶದಿಂದ ಜಾರಿಗೊಂಡಿರುವ ಇ-ಆಫೀಸ್ ವ್ಯವಸ್ಥೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವ ಜಿಲ್ಲೆಗಳ ಪಟ್ಟಿಯಲ್ಲಿ ಕಲಬುರಗಿ ಅಗ್ರಸ್ಥಾನದಲ್ಲಿದೆ.
ಸಾಂಪ್ರದಾಯಿಕ ಕಾಗದ ಆಧಾರಿತ ಕಡತ ವ್ಯವಸ್ಥೆಯಲ್ಲಿ ವಿಳಂಬ, ಕಡತ ನಷ್ಟ ಹಾಗೂ ಅಪ್ರಾಮಾಣಿಕತೆಗೆ ಅವಕಾಶವಿದ್ದರೆ, ಇ-ಆಫೀಸ್ ವ್ಯವಸ್ಥೆ ಅವುಗಳಿಗೆ ಸ್ಪಷ್ಟ ಕಡಿವಾಣ ಹಾಕಿದೆ. ಕಡತ ಚಲನವಲನ, ಅನುಮೋದನೆ, ವಿಲೇವಾರಿ ಎಲ್ಲವೂ ಆನ್ ಲೈನ್ ಮೂಲಕ ನಡೆಯುತ್ತಿರುವುದರಿಂದ ಸಮಯ ಉಳಿತಾಯದ ಜೊತೆಗೆ ಸಾರ್ವಜನಿಕ ಸೇವೆಗಳ ವಿತರಣೆಯೂ ವೇಗಗೊಂಡಿದೆ, ಇದರಿಂದ ಜನಸಾಮಾನ್ಯರಿಗೆ ಕಚೇರಿಗಳ ಸುತ್ತಾಟ ತಪ್ಪಿ, ಆಡಳಿತ ವ್ಯವಸ್ಥೆ ಲಭ್ಯವಾಗುತ್ತಿದೆ.
ಟಾಪ್ ಟೆನ್ ನಲ್ಲಿ ಕಲ್ಯಾಣದ 4 ಜಿಲ್ಲೆಗಳು :
ರಾಜ್ಯದ 2025 ರ ಜಿಲ್ಲಾ ಪಂಚಾಯತ್ ಇ-ಕಡತ ಬಳಕೆಯ ಟಾಪ್ 10
ಪಟ್ಟಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಕಲಬುರಗಿ, ಬೀದರ್, ಯಾದಗಿರಿ, ಮತ್ತು ಕೊಪ್ಪಳ ಜಿಲ್ಲೆಗಳು ಸ್ಥಾನ ಪಡೆದಿವೆ.
e-Office ಎನ್ನುವುದು ಸರ್ಕಾರದ ಕಚೇರಿಗಳಲ್ಲಿ ಕಡತಗಳ (files) ನಿರ್ವಹಣೆಯನ್ನು ಡಿಜಿಟಲ್ ರೀತಿಯಲ್ಲಿ ನಡೆಸುವ ವ್ಯವಸ್ಥೆಯಾಗಿದೆ. ಕಾಗದ ರಹಿತ (Paperless) ಆಡಳಿತವನ್ನು ಸಾಧಿಸುವುದು ಇದರ ಮುಖ್ಯ ಉದ್ದೇಶ.
ಕಲಬುರಗಿ ಜಿಲ್ಲೆ ವಿಶೇಷತೆ :
- ಕರ್ನಾಟಕ ರಾಜ್ಯದಲ್ಲಿ e-Office ವ್ಯವಸ್ಥೆಯ ಪರಿಣಾಮಕಾರಿ ಅನುಷ್ಠಾನದಲ್ಲಿ ಕಲಬುರಗಿ ಜಿಲ್ಲೆ ನಂಬರ್–1 ಸ್ಥಾನ ಪಡೆದಿದೆ.
- ಜಿಲ್ಲಾಡಳಿತ, ತಾಲ್ಲೂಕು ಕಚೇರಿಗಳು ಹಾಗೂ ಇತರ ಸರ್ಕಾರಿ ಇಲಾಖೆಗಳು e-Office ಅನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿವೆ.
- ಕಡತ ವಿಲೇವಾರಿ ವೇಗ, ಪಾರದರ್ಶಕತೆ ಮತ್ತು ಸಮಯ ಉಳಿತಾಯದಲ್ಲಿ ಕಲಬುರಗಿ ಮುಂಚೂಣಿಯಲ್ಲಿದೆ.
e-Office ಮೂಲಕ ಆಗುವ ಪ್ರಯೋಜನಗಳು :
- ಕಾಗದರಹಿತ ಆಡಳಿತ
- ಕಡತ ವಿಲೇವಾರಿಯಲ್ಲಿ ವೇಗ
- ಪಾರದರ್ಶಕತೆ ಹೆಚ್ಚಳ
- ಆಡಳಿತ ವೆಚ್ಚದಲ್ಲಿ ಉಳಿತಾಯ
- ಕಡತಗಳ ಸುರಕ್ಷಿತ ಡಿಜಿಟಲ್ ಸಂಗ್ರಹ
e-Office ಬಳಸುವ ಕಚೇರಿಗಳು :
- ಜಿಲ್ಲಾಧಿಕಾರಿ ಕಚೇರಿ
- ತಾಲ್ಲೂಕು ಕಚೇರಿಗಳು
- ಪಂಚಾಯತ್ ರಾಜ್ ಇಲಾಖೆ
- ವಿವಿಧ ಸರ್ಕಾರಿ ಇಲಾಖೆ ಕಚೇರಿಗಳು
ಸರ್ಕಾರದ ಉದ್ದೇಶ :
- ಡಿಜಿಟಲ್ ಇಂಡಿಯಾ ಯೋಜನೆಯ ಭಾಗವಾಗಿ
- ನಾಗರಿಕರಿಗೆ ವೇಗವಾದ ಮತ್ತು ಪರಿಣಾಮಕಾರಿ ಸೇವೆ
- ಆಡಳಿತ ವ್ಯವಸ್ಥೆಯನ್ನು ಆಧುನೀಕರಣಗೊಳಿಸುವುದು