ಕರ್ನಾಟಕ ರಾಜ್ಯದ 980 ಗ್ರಾಮ ಪಂಚಾಯತಿಗಳಲ್ಲಿ “ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ” (ಪಿಡಿಒ) ಹುದ್ದೆಗಳು ಖಾಲಿ ಇವೆ. ಇದರಿಂದ ಜನಸಾಮಾನ್ಯರಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ.
ರಾಜ್ಯದಲ್ಲಿ ಒಟ್ಟು 5953 ಗ್ರಾಮ ಪಂಚಾಯತಿಗಳಿದ್ದು, ಗ್ರಾಮೀಣ ಪ್ರದೇಶದ ಜನರಿಗೆ ಕುಡಿಯುವ ನೀರು, ರಸ್ತೆ, ಬೀದಿ ದೀಪ, ವಸತಿ, ಪಿಂಚಣಿ, ಕೃಷಿ, ಮಹಿಳಾ ಸಬಲೀಕರಣ, ಸ್ವಚ್ಛ ಭಾರತ್ ಮಿಷನ್, ಡಿಜಿಟಲ್ ಸೇವೆಗಳು ಸೇರಿದಂತೆ ವಿವಿಧ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿಗಳು ಕೆಲಸ ಮಾಡುತ್ತವೆ.
ಗ್ರಾಮ ಪಂಚಾಯತಿಗಳಲ್ಲಿ ಪಿಡಿಒಗಳ ಕೊರತೆಯಿಂದ ಬಹುತೇಕ ಕೆಲಸಗಳಿಗೆ ಹಿನ್ನಡೆಯಾಗಿದೆ. ಅಲ್ಲದೆ ಜನರ ಸಮಸ್ಯೆ ಆಲಿಸುವ ನಿಟ್ಟಿನಲ್ಲೂ ಸಮರ್ಪಕ ವ್ಯವಸ್ಥೆ ಇಲ್ಲದಂತಾಗಿದೆ. ಇನ್ನೂ ಕೆಲ ಪಿಡಿಒಗಳಿಗೆ 2-3 ಪಂಚಾಯಿತಿಗಳ ಹೆಚ್ಚುವರಿ ಜವಾಬ್ದಾರಿ ನೀಡಿದ್ದು, ಅವರಿಗೂ ಒತ್ತಡವಾಗುತಿದೆ. ಈ ನಿಟ್ಟಿನಲ್ಲಿ ಸರಕಾರ ಆದಷ್ಟು ಬೇಗ ಪಿಡಿಒಗಾಳ ನೇಮಕಕ್ಕೆ ಅದ್ಯಾತೆ ನೀಡಬೇಕಿದೆ ಎಂಬ ಆಗ್ರಹ ಕೇಳಿಬರುತ್ತಿದೆ.
PDO ಎಂದರೆ ಏನು?
PDO (Panchayat Development Officer) ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕೆಲಸ ಮಾಡುವ ಅಧಿಕಾರಿ. ಗ್ರಾಮ ಪಂಚಾಯತ್‌ನ ಆಡಳಿತ, ಅಭಿವೃದ್ಧಿ ಯೋಜನೆಗಳು ಹಾಗೂ ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕೆ PDO ಜವಾಬ್ದಾರರಾಗಿರುತ್ತಾರೆ.
PDO ಅವರ ಪ್ರಮುಖ ಕೆಲಸಗಳು :
-
ಗ್ರಾಮ ಪಂಚಾಯತ್‌ನ ಆಡಳಿತ ಮತ್ತು ನಿರ್ವಹಣೆ
-
ಗ್ರಾಮ ಅಭಿವೃದ್ಧಿ ಯೋಜನೆಗಳು (ರಸ್ತೆ, ನೀರು, ಸ್ವಚ್ಛತೆ, ಬೀದಿ ದೀಪಗಳು)
- ಸರ್ಕಾರಿ ಯೋಜನೆಗಳ ಅನುಷ್ಠಾನ
(MGNREGA, ಸ್ವಚ್ಛ ಭಾರತ ಮಿಷನ್, ಪಿಎಂ ಆವಾಸ್ ಇತ್ಯಾದಿ)
- ಪಂಚಾಯತ್ ಸಭೆ, ಗ್ರಾಮ ಸಭೆ ನಡೆಸುವುದು
- ಆದಾಯ–ವೆಚ್ಚ ಲೆಕ್ಕಪತ್ರಗಳು ಮತ್ತು ದಾಖಲೆ ಸಂಗ್ರಹ
- ಜನನ–ಮರಣ ಪ್ರಮಾಣಪತ್ರಗಳ ಪ್ರಕ್ರಿಯೆ ಮೇಲ್ವಿಚಾರಣೆ
-
ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು
ಅರ್ಹತೆ (Eligibility)
- ಯಾವುದೇ ವಿಷಯದಲ್ಲಿ ಪದವಿ (Degree)
- ಕನ್ನಡ ಭಾಷಾ ಜ್ಞಾನ ಅಗತ್ಯ
- ವಯೋಮಿತಿ: ಸಾಮಾನ್ಯವಾಗಿ 18–35 ವರ್ಷ (ವರ್ಗಾವಾರಿಯಾಗಿ ರಿಯಾಯಿತಿ)
ನೇಮಕಾತಿ ಪ್ರಕ್ರಿಯೆ :
- KPSC (ಕರ್ನಾಟಕ ಲೋಕಸೇವಾ ಆಯೋಗ) ಮೂಲಕ
- ಲಿಖಿತ ಪರೀಕ್ಷೆ + ದಾಖಲೆ ಪರಿಶೀಲನೆ
ವೇತನ :
- ಸುಮಾರು ₹29,200 – ₹54,400 (Pay Matrix Level–5) + ಭತ್ಯೆಗಳು
ಕೆಲಸದ ಸ್ಥಳ :
- ಗ್ರಾಮ ಪಂಚಾಯತ್ ಕಚೇರಿ, ಕರ್ನಾಟಕದ ವಿವಿಧ ಜಿಲ್ಲೆಗಳು