
ರಿಷಬ್ ಶೆಟ್ಟಿ ನಟನೆಯ ಕಾಂತಾರ ಮತ್ತು ಎ ಲೆಜೆಂಡ್ ಚಾಪ್ಟರ್-1 ಕನ್ನಡ ಸೇರಿ ಬಹುಭಾಷೆಗಳಲ್ಲಿ ಬಿಡುಗಡೆಯಾಗಿದ್ದ ಅನಿಮೇಟೆಡ್ ಚಿತ್ರ ಮಹಾವತಾರ ನರಸಿಂಹ ಸೇರಿ ನಾಲ್ಕು ಭಾರತೀಯ ಚಿತ್ರಗಳು 2026ರ ವಿಶ್ವದ ಪ್ರತಿಷ್ಠಿತ ಚಲನಚಿತ್ರ ಪ್ರಶಸ್ತಿ ಆಸ್ಕರ್ ಪ್ರಶಸ್ತಿ ರೇಸ್ನಲ್ಲಿ ಸ್ಥಾನ ಪಡೆದಿವೆ.
201 ಚಲನಚಿತ್ರಗಳ ಪಟ್ಟಿಯನ್ನು 98 ನೇ ಅಕಾಡೆಮಿ ಪ್ರಶಸ್ತಿಯ ಉತ್ತಮ ಚಲನಚಿತ್ರ ವಿಭಾಗದಲ್ಲಿ. ಆಸ್ಕರ್ ಪ್ರಶಸ್ತಿಗೆ ಚಿತ್ರಗಳನ್ನು ಆಯ್ಕೆಮಾಡುವ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಹಾಟ್ ಅಂಡ್ ಸೈನ್ಸ್. ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ವಿವಿಧ ವಿಭಾಗಗಳಲ್ಲೂ ಭಾರತದ ಚಿತ್ರಗಳು :
ಒಟ್ಟು 317 ಚಲನಚಿತ್ರಗಳು, 98 ನೇ ಅಕಾಡೆಮಿ ಪ್ರಶಸ್ತಿಗೆ ಸ್ಪರ್ಧಿಸಲು ಅರ್ಹವಾಗಿವೆ. 201 ಚಿತ್ರಗಳು ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಸ್ಪರ್ಧಿಸಲಿವೆ.
ನಿರಾಜ್ ನಿರ್ದೇಶನದ ಹಿಂದಿಯ ಹೋo ಬೌಂಡ್ ಅತ್ಯುತ್ತಮ ಅಂತರಾಷ್ಟ್ರೀಯ ಪಿಕ್ಚರ್ ಸ್ಪರ್ಧೆಗೆ ಲಗ್ಗೆ ಇಟ್ಟಿದೆ. ಇದರ ಜೊತೆಗೆ ದಶಾವತಾರ (ಮರಾಠಿ), ಗೆವಿ (ತಮಿಳು), ಹ್ಯೂಮನ್ಸ್ ಇನ್ ದಿ ಲೂಪ್, ಮಹಾಮಂತ್ರ- ದಿ ಗ್ರೇಟ್. ಚಾoಟ್, ಸಿನಿಮಾಗಳು ಬೇರೆ ಬೇರೆ ವಿಭಾಗಗಳಲ್ಲಿ ಪ್ರಶಸ್ತಿಗಾಗಿ ಸ್ಪರ್ಧಿಸುತ್ತವೆ.
ಸ್ಪರ್ಧೆ ಹೇಗೆ?
ಮಾರ್ಚ್ 15, 98 ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು. 24 ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಪ್ರಕಟಿಸಲಾಗುತ್ತದೆ. ಇದರಲ್ಲಿ ಅತ್ಯುತ್ತಮ ಚಲನಚಿತ್ರ ಘೋಷಣೆಗೆ 10 ನಾಮನಿರ್ದೇಶನ ಬೇಕಾಗುತ್ತದೆ. ಉಳಿದ ವಿಭಾಗಗಳಿಗೆ. 5 ನಾಮನಿರ್ದೇಶನಗಳು ಸಾಕು.
19 ಸಿನಿಮಾ ವಿಭಾಗಗಳಲ್ಲಿನ ಅರ್ಹ ಸದಸ್ಯರು ಆಸ್ಕರ್ ಗೆ ನಾಮನಿರ್ದೇಶನಗಳನ್ನು ಮಾಡುತ್ತಾರೆ. ಆಸ್ಕರ್ ಮತದಾನದ ಎಲ್ಲ ಸುತ್ತುಗಳನ್ನ ರಹಸ್ಯ ಆನ್ಲೈನ್ ಮತದಾನದ ಮೂಲಕ ನಡೆಸಲಾಗುತ್ತದೆ.
ಹೊಂಬಾಳೆ ಫಿಲ್ಮಗೆ 2 ಗರಿ :
ಮಹಾವತಾರ ನರಸಿಂಹ ಚಿತ್ರವನ್ನ ಅಶ್ವಿನ್ ಕುಮಾರ್ ನಿರ್ದೇಶಿಸಿದ್ದು. ಜಯಪೂರ್ಣದಾಸ್ ಕತೆ ಬರೆದಿದ್ದಾರೆ. ಕ್ಲೀಮ್ ಪ್ರೊಡಕ್ಷನ್ ನಿರ್ಮಿಸಿದ್ದು ಮತ್ತು ಹೊಂಬಾಳೆ ಫಿಲಂಸ್ ಪ್ರಸ್ತುತಪಡಿಸಿದೆ. ಇನ್ನು ಕಾಂತಾರವನ್ನು ರಿಷಬ್ ಶೆಟ್ಟಿ ನಿರ್ಮಿಸಿದ್ದು, ಹೊಂಬಾಳೆ ನಿರ್ಮಾಣ ಮಾಡಿದೆ.
ಆಸ್ಕರ್ ಪ್ರಶಸ್ತಿಯ ವಿವರಗಳು :
ಹಿಂದಿ ಕನ್ನಡ ಲಾಂಗ್ವೇಜ್ ಅಕಾಡೆಮಿ ಪ್ರಶಸ್ತಿ ಎಂದು ಕರೆಯಲ್ಪಡುವ ಚಲನಚಿತ್ರೋದ್ಯಮದ ಅತ್ಯುತ್ತಮ ಸಾಧಕರಿಗೆ ನೀಡಲಾಗುವ ಒಂದು ಪ್ರಮುಖ ಗೌರವ. ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಅಂಡ್ ಸೈನ್ಸ್ AMPAS ಈ ಪ್ರಶಸ್ತಿಯನ್ನು ನೀಡುತ್ತದೆ, ಮತ್ತು ಇದು ಅತ್ಯುತ್ತಮ ನಟ, ನಟಿ, ನಿರ್ದೇಶಕ, ಚಿತ್ರ ನಿರ್ಮಾಣ ಹೀಗೆ ಅನಿಮೇಟೆಡ್ ಚಿತ್ರ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಒಳಗೊಂಡಿದೆ.
ಪರಿಚಯ :
1927 ರಲ್ಲಿ ಸ್ಥಾಪನೆಯಾದ. AMPAS ಸಂಸ್ಥೆಯಿಂದ ನೀಡಲಾಗುತ್ತದೆ. ಇದು ಚಲನಚಿತ್ರ ಪ್ರತಿಭೆಗಳ ಗುರುತಿಸುತ್ತದೆ.
ಮೊದಲ ಸಮಾರಂಭ :
ಮೇ 16. 1929 ರಲ್ಲಿ ಹಾಲಿವುಡ್ ನಲ್ಲಿ ನಡೆಯಿತು.
ವಿಭಾಗಗಳು :
ಪ್ರಸ್ತುತ 24 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಅತ್ಯುತ್ತಮ ನಟ, ಅತ್ಯುತ್ತಮ ನಟಿ. ಅತ್ಯುತ್ತಮ ಚಿತ್ರ, ಅತ್ಯುತ್ತಮ ಚಿತ್ರಕಥೆ. ಅತ್ಯುತ್ತಮ ಅನಿಮೇಟೆಡ್ ಚಿತ್ರ ಇತ್ಯಾದಿಗಳು ಸೇರಿವೆ.
ಪ್ರಶಸ್ತಿ :
ಈ ಪ್ರಶಸ್ತಿಯನ್ನ “ಆಸ್ಕರ್” ಎಂದು ಕರೆಯಲಾಗುತ್ತದೆ ಮತ್ತು ಚಲನಚಿತ್ರೋದ್ಯಮದ ಉನ್ನತ ಗೌರವಗಳಲ್ಲಿ ಒಂದಾಗಿದೆ.
ಹೆಚ್ಚಿನ ಮಾಹಿತಿ :
ಇತ್ತೀಚೆಗೆ RRR ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್ ಲಭಿಸಿತ್ತು.