Telegram Join My Telegram WhatsApp Join My WhatsApp

PM ಕಿಸಾನ್ ಯೋಜನೆ ಫಲಾನುಭವಿಗಳಿಗೆ ಸಿಹಿಸುದ್ದಿ.

PM Modi releases ₹18,000 crore in 21st PM-KISAN instalment to 9 crore  farmers
ಫೆಬ್ರವರಿ  1 ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್ ನಲ್ಲಿ ರೈತರಿಗಾಗಿ ಭರ್ಜರಿ ಕೊಡುಗೆ ಸಿಗುವ ನಿರೀಕ್ಷೆ ಇದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೀಡಲಾಗುವ ವಾರ್ಷಿಕ ಹಣಕಾಸು ನೆರವನ್ನ.ಪ್ರಸ್ತುತ ಇರುವ 6000 ರೂಪಾಯಿಯಿಂದ.₹10,000 ಗೆ ಏರಿಸುವ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದಿದೆ ಎಂದು ತಿಳಿಸಲಾಗಿದೆ.

ಜನವರಿ 29 ರಂದು ಮಂಡನೆಯಾಗಲಿರುವ.ಆರ್ಥಿಕ ಸಮೀಕ್ಷೆ ಯೋಜನೆಯ ವಿಸ್ತರಣೆ ಮತ್ತು ಅದರ ಆರ್ಥಿಕ ಹೊರೆಯ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲುವ ನಿರೀಕ್ಷೆ ಇದೆ.

ಹಾಗಾದರೆ?ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ.ವಿಶೇಷತೆ ಏನು?

PM ಕಿಸಾನ್ ಯೋಜನೆ : ಕೇಂದ್ರ ಸರ್ಕಾರದ ರೈತರ ಕಲ್ಯಾಣ ಯೋಜನೆಯಾಗಿದೆ. ಸಣ್ಣ ಮತ್ತು ಅಂಚಿನ ರೈತರಿಗೆ ಆರ್ಥಿಕ ಸಹಾಯ ನೀಡುವುದು ಇದರ ಮುಖ್ಯ ಉದ್ದೇಶ.

🌾 ಯೋಜನೆಯ ಉದ್ದೇಶ :

ರೈತರಿಗೆ ಕೃಷಿ ವೆಚ್ಚಗಳನ್ನು ನಿಭಾಯಿಸಲು ಸಹಾಯ ಮಾಡುವುದಕ್ಕಾಗಿ ವರ್ಷಕ್ಕೆ ಹಣಕಾಸು ನೆರವು ನೀಡುವುದು.

ಪ್ರಸ್ತುತ ಸಹಾಯಧನದ ವಿವರ :

  • ಪ್ರತಿ ಅರ್ಹ ರೈತರಿಗೆ ವರ್ಷಕ್ಕೆ ₹6,000

  • ಈ ಹಣವನ್ನು ₹2,000 ರಂತೆ 3 ಕಂತುಗಳಲ್ಲಿ

  • ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ (DBT)

👨‍🌾 ಯಾರು ಅರ್ಹರು?

  • ಭಾರತದ ನಾಗರಿಕರಾದ ರೈತರು

  • ಸ್ವಂತ ಕೃಷಿ ಭೂಮಿ ಹೊಂದಿರುವ ಸಣ್ಣ ಮತ್ತು ಅಂಚಿನ ರೈತರು

  • ಕುಟುಂಬದ ಹೆಸರಿನಲ್ಲಿ ಕೃಷಿ ಜಮೀನು ದಾಖಲೆ ಇರಬೇಕು

ಯಾರು ಅರ್ಹರಲ್ಲ?

  • ಆದಾಯ ತೆರಿಗೆ ಪಾವತಿಸುವವರು

  • ಸರ್ಕಾರಿ ನೌಕರರು (Group A/B)

  • ವೈದ್ಯರು, ಇಂಜಿನಿಯರ್‌ಗಳು, ವಕೀಲರು, CA ಮುಂತಾದ ವೃತ್ತಿಪರರು

  • ನಿವೃತ್ತಿಯಲ್ಲಿ ಹೆಚ್ಚಿನ ಪಿಂಚಣಿ ಪಡೆಯುವವರು

📝 ಅಗತ್ಯ ದಾಖಲೆಗಳು

  • ಆಧಾರ್ ಕಾರ್ಡ್

  • ಬ್ಯಾಂಕ್ ಪಾಸ್‌ಬುಕ್

  • ಭೂಮಿ ದಾಖಲೆಗಳು (RTC / ಪಹಣಿ)

  • ಮೊಬೈಲ್ ಸಂಖ್ಯೆ

ಅರ್ಜಿ ಸಲ್ಲಿಸುವ ವಿಧಾನ

  1. https://pmkisan.gov.in ವೆಬ್‌ಸೈಟ್‌ಗೆ ಭೇಟಿ ನೀಡಿ
  2. New Farmer Registration ಮೇಲೆ ಕ್ಲಿಕ್ ಮಾಡಿ
  3. ಅಗತ್ಯ ಮಾಹಿತಿಗಳನ್ನು ತುಂಬಿ ಅರ್ಜಿ ಸಲ್ಲಿಸಿ
    ಅಥವಾ
    👉 ಸಮೀಪದ CSC ಕೇಂದ್ರ ಅಥವಾ ಗ್ರಾಮ ಪಂಚಾಯತ್ ಮೂಲಕ ಅರ್ಜಿ ಹಾಕಬಹುದು

📲 ಕಂತು ಸ್ಥಿತಿ ಪರಿಶೀಲನೆ

  • ವೆಬ್‌ಸೈಟ್‌ನಲ್ಲಿ Beneficiary Status ಆಯ್ಕೆ ಮಾಡಿ
  • ಆಧಾರ್ ಸಂಖ್ಯೆ / ಬ್ಯಾಂಕ್ ಖಾತೆ / ಮೊಬೈಲ್ ಸಂಖ್ಯೆಯಿಂದ ಪರಿಶೀಲಿಸಬಹುದು