ಹೊಸದಾಗಿ ಮದುವೆಯಾದವರು ಮದುವೆಯ ನಂತರ ಒಂದು ಮಗು ಬರ್ತಾ ಇದೆ ಅಂದ್ರೆ ಖುಷಿನೇ ಬೇರೆ. ಆದರೆ ಆ ಖುಷಿಯ ಜೊತೆಗೆ ಬರುವ ಆಸ್ಪತ್ರೆ ಬಿಲ್ ನೋಡಿದರೆ ಎಂಥವರಿಗಾದರು ಎದೆ ನಡಿಗಿಸುತ್ತೆ.
ಏಕೆಂದರೆ ಭಾರತದಲ್ಲಿ ಪ್ರತಿ ಐದರಲ್ಲಿ ಒಂದು ಡೆಲಿವರಿ ಸಿಸೀರೆಯಾನ್ ಆಗುತ್ತಿದೆ. ಹಾಸ್ಪಿಟಲ್ ಲೆಕ್ಕ ತಗೊಂಡರೇ ಪ್ರತಿ ಎರಡರಲ್ಲಿ ಒಂದು ಡೆಲಿವರಿ ಸಿಸೀರೆಯಾನ್ ಸಿಗುತ್ತದೆ. ಒಂದು ನಾರ್ಮಲ್ ಡೆಲಿವರಿಗೂ ಮತ್ತು ಒಂದು ಸಿಸೀರೆಯಾನ್ ಡೆಲಿವರಿಗೂ ಲಕ್ಷಾಂತರ ರೂಪಾಯಿಗಳ ವ್ಯತ್ಯಾಸ ಇರುತ್ತೆ. ಕೈಯಲ್ಲಿ ಲಕ್ಷ ಲಕ್ಷ ಇಟ್ಕೊಳ್ಳಿಲ್ಲ ಅಂದ್ರೆ ಮಗುವನ್ನ ಖುಷಿಯಾಗಿ ಮನೆಗೆ ಕರಕೊಂಡು ಹೋಗೋಕೆ ಒದ್ದಾಡೋ ಪರಿಸ್ಥಿತಿ ಬರಬಹುದು.
ಈಗ ತಂದೆ ತಾಯಿ ಆಗ್ತಿರೋ ಕಪಲ್ ತುಂಬಾ ಹುಷಾರಾಗಿದ್ದಾರೆ. ಈಗ ಬಂದ ಈ ಮನಿ ಕಂಟ್ರೋಲ್ ರಿಪೋರ್ಟ್ ನೋಡಿ ಭಾರತದಲ್ಲಿಯ ಯಂಗ್ ಕಪಲ್ ಈಗ ಮೆಟರ್ನಿಟಿ ಇನ್ಶೂರೆನ್ಸ್ (ಮಾತೃತ್ವ ಆರೋಗ್ಯ ವಿಮೆ)ಗೆ ಮುಗಿಬೀಳ್ತಿದ್ದಾರೆ. 2025ರಲ್ಲಿ ಮೆಟರ್ನಿಟಿ ಇನ್ಸೂರೆನ್ಸ್ ತಗೊಂಡ ಸಂಖ್ಯೆ ಸುಮಾರು 180% ಜಾಸ್ತಿ ಆಗಿದೆ. ಅಲ್ಲಿ ಡಬಲ್ ಆಗಿದೆ.
ಏನಿದು ಮೆಟರ್ನಿಟಿ ಹೆಲ್ತ್ ಇನ್ಸೂರೆನ್ಸ್ :
ಮೊದಲು ಬರೋದೇ ಮೆಟರ್ನಿಟಿ ಎಸ್ಪಿಯನ್ಸ್, ಡೆಲಿವರಿ, ಸ್ಕ್ಯಾನಿಂಗ್, ಡೆಲಿವರಿ ಆದನಂತರ ಎಲ್ಲ ನಿಭಾಯಿಸೋದು ಇದೆ ಮೆಟರ್ನಿಟಿ ಹೆಲ್ತ್ ಇನ್ಶೂರೆನ್ಸ್.
ಮಗು ಭೂಮಿಗೆ ಬರೋಕು ಮುಂಚೆ ಇನ್ಶೂರೆನ್ಸ್ ಕಂಪನಿಗಳು ಪೋಷಕರಿಗೆ ಶಾಕ್ ಕೊಡಬಹುದು. ನಿಮ್ಮ ಪಾಲಿಸಿ ಇದನ್ನು ಕವರ್ ಮಾಡಲ್ಲ. ನೀವು ಕಟ್ಟಿ ಅಂತ ಹೇಳಬಹುದು. ಹಾಗಾಗಬಾರದು ಅಂದ್ರೆ ಮುಂದಿನ ವಿಷಯದ ಬಗ್ಗೆ ಗಮನ ಇರಲಿ.
ಈ ಮೆಟರ್ನಿಟಿ ಪೋಲೀಸಿಯನ್ನು ತಗೊಂಡ ತಕ್ಷಣ ಕ್ಲೇಮ್ ಮಾಡೋಕಾಗಲ್ಲ. ಸಾಮಾನ್ಯವಾಗಿ ಇಂತಹ ಪ್ಲಾನ್ ಗಳಲ್ಲಿ ಕನಿಷ್ಠ ಒಂಬತ್ತು ತಿಂಗಳಿಂದ ಹಿಡಿದು ನಾಲ್ಕು ವರ್ಷಗಳವರೆಗೂ ವೈಟಿಂಗ್ ಪೀರಿಯಡ್ ಇರುತ್ತ. ನೀವು ಮಗು ಪ್ಲಾನ್ ಮಾಡೋಕು ಮುಂಚೆನೇ ಎಷ್ಟು ಬೇಗ ಆಗುತ್ತೋ ಅಷ್ಟು ಬೇಗ ಪಾಲಿಸಿ ತಗೋಬೇಕು,
ಸಬ್ ಲಿಮಿಟ್– ನಿಮ್ಮ ಹತ್ತಿರ 10,00,000 ಪಾಲಿಸಿ ಇರಬಹುದು. ಆದರೆ ಕಂಪನಿಯಿಂದ ರೂಲ್ಸ್ ಮೆಟರ್ನಿಟಿಗೆ ನಾವು ಕೊಡೋದು ಕೇವಲ ೫೦೦೦೦ ರೂಪಾಯಿ ಮಾತ್ರ, ಉಳಿದ ಲಕ್ಷಾಂತರ ರೂಪಾಯಿ ಬಿಲ್ ಏನಾದರು ಬರೋ ಸಂದರ್ಭ ಬಂದ್ರೆ ಅದನ್ನ ನೀವೇ ಕಟ್ಟಬೇಕು. ಸಬ್-ಲಿಮಿಟ್ ಕಮ್ಮಿ ಇರೋ ಪ್ಲಾನ್ ನ ಅವಾಯ್ಡ್ ಮಾಡಬೇಕು.
ಮಾತೃತ್ವ ಆರೋಗ್ಯ ವಿಮೆ (Maternity Health Insurance) :
ಮಾತೃತ್ವ ಆರೋಗ್ಯ ವಿಮೆ ಎಂದರೆ ಗರ್ಭಧಾರಣೆ, ಹೆರಿಗೆ ಹಾಗೂ ಹೆರಿಗೆ ನಂತರ ತಾಯಿ ಮತ್ತು ಮಗುಗೆ ಸಂಬಂಧಿಸಿದ ವೈದ್ಯಕೀಯ ಖರ್ಚುಗಳನ್ನು ಕವರ್ ಮಾಡುವ ಆರೋಗ್ಯ ವಿಮೆ.
ಈ ವಿಮೆಯಲ್ಲಿ ಒಳಗೊಂಡಿರುವ ಸೌಲಭ್ಯಗಳು :
- ಗರ್ಭಧಾರಣೆ ಸಮಯದ ಆಸ್ಪತ್ರೆ ಖರ್ಚು
- ಸಾಮಾನ್ಯ ಹೆರಿಗೆ (Normal Delivery)
- ಸಿಸೇರಿಯನ್ ಹೆರಿಗೆ (C-Section)
- ಹೆರಿಗೆಗೂ ಮುನ್ನ ಮತ್ತು ನಂತರದ ಚಿಕಿತ್ಸೆ
- ನವಜಾತ ಶಿಶುವಿನ ಆರೈಕೆ (ಕೆಲವು ಪಾಲಿಸಿಗಳಲ್ಲಿ)
- ಗರ್ಭಧಾರಣೆಗೆ ಸಂಬಂಧಿಸಿದ ಪರೀಕ್ಷೆಗಳು
ನಿರೀಕ್ಷಾ ಅವಧಿ (Waiting Period) :
- ಹೆಚ್ಚಿನ ವಿಮೆಗಳಲ್ಲಿ 9 ತಿಂಗಳು ರಿಂದ 4 ವರ್ಷಗಳವರೆಗೆ ನಿರೀಕ್ಷಾ ಅವಧಿ ಇರುತ್ತದೆ
- ಪಾಲಿಸಿ ತೆಗೆದುಕೊಂಡ ತಕ್ಷಣ ಮಾತೃತ್ವ ವೆಚ್ಚ ಕ್ಲೈಮ್ ಮಾಡಲು ಸಾಧ್ಯವಿಲ್ಲ
ವಿಮಾ ಮೊತ್ತ (Coverage Amount) :
- ಸಾಮಾನ್ಯವಾಗಿ ₹25,000 ರಿಂದ ₹2 ಲಕ್ಷ ಅಥವಾ ಅದಕ್ಕಿಂತ ಹೆಚ್ಚು
- ಪಾಲಿಸಿ ಪ್ರಕಾರ ಮತ್ತು ಕಂಪನಿ ಪ್ರಕಾರ ವ್ಯತ್ಯಾಸ ಇರುತ್ತದೆ
ಯಾರು ಈ ವಿಮೆ ಪಡೆಯಬಹುದು?
- 18 ರಿಂದ 45 ವರ್ಷದ ಮಹಿಳೆಯರು
- ವೈಯಕ್ತಿಕ ಆರೋಗ್ಯ ವಿಮೆ ಅಥವಾ ಕುಟುಂಬ ಫ್ಲೋಟರ್ ಪಾಲಿಸಿಯಲ್ಲಿ ಲಭ್ಯ
ಗಮನಿಸಬೇಕಾದ ಅಂಶಗಳು :
- ಈಗಾಗಲೇ ಗರ್ಭಿಣಿಯಾಗಿದ್ದರೆ ಹೆಚ್ಚಿನ ವಿಮೆಗಳು ಕವರ್ ನೀಡುವುದಿಲ್ಲ
- ಪಾಲಿಸಿಯ ಷರತ್ತುಗಳನ್ನು ಚೆನ್ನಾಗಿ ಓದಬೇಕು
- ಉಪಮಿತಿಗಳು (Sub-limits) ಇರಬಹುದು
ಸರ್ಕಾರದ ಮಾತೃತ್ವ ಯೋಜನೆಗಳು :
- ಜನನಿ ಸುರಕ್ಷಾ ಯೋಜನೆ (JSY)
- ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ (PMMVY)
ಇವು ಸರ್ಕಾರದಿಂದ ಹಣಕಾಸು ಸಹಾಯ ನೀಡುವ ಯೋಜನೆಗಳು
ಮಾತೃತ್ವ ವಿಮೆಯ ಲಾಭ :
- ಹೆಚ್ಚಿನ ಆಸ್ಪತ್ರೆ ವೆಚ್ಚದ ಚಿಂತೆಯಿಂದ ಮುಕ್ತಿ
- ತಾಯಿ ಮತ್ತು ಮಗುವಿಗೆ ಉತ್ತಮ ಆರೈಕೆ
- ಆರ್ಥಿಕ ಭದ್ರತೆ.