ಫೆಬ್ರವರಿ 9 ರಿಂದ 13 ರವರೆಗೆ ನಡೆಯಲಿರುವ ಅಂತಾರಾಷ್ಟ್ರೀಯ ಕಾರ್ಯಾಗಾರ ಮತ್ತು ತರಬೇತಿ ಕಾರ್ಯಕ್ರಮವನ್ನ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಹಾಗೂ ಅಂತರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್ ಸಂಯುಕ್ತವಾಗಿ ಆಯೋಜಿಸಲಾಗಿದೆ.
ಇದು ಭಾರತದ ಮೊದಲಬಾರಿಗೆ ನಡೆಯುತ್ತಿರುವ ಬಿಗ್ ಕ್ಯಾಟ್ ಅಲಯನ್ಸ್ ಶೃಂಗಸಭೆ ಆಗಿದ್ದು, ದಕ್ಷಿಣ ಭಾರತದ ವನ್ಯಜೀವಿ ಸಂರಕ್ಷಣೆ ಕುರಿತು ಜಾಗತಿಕ ಗಮನ ಸೆಳೆಯುವ ಉದ್ದೇಶ ಹೊಂದಿದೆ.
ಭಾರತ ವಿಶ್ವದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿದ್ದು, ಚಿರತೆ, ಹಿಮ ಚಿರತೆ ಸೇರಿದಂತೆ ಬಿಗ್ ಕ್ಯಾಟ್ ಗಳ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆಧುನಿಕ ತಂತ್ರಜ್ಞಾನ ಬಳಕೆ, ಅಂತರ್ ರಾಜ್ಯ ಹಾಗೂ ಅಂತರ್ ರಾಷ್ಟ್ರೀಯ ಸಹಕಾರ ಮತ್ತು ಉತ್ತಮ ಕಾರ್ಯ ಪದ್ಧತಿಗಳ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಯಲಿದೆ. ಇದೊಂದು ಅರಣ್ಯ ನಿವಾಸಿಗಳ ಪುನರ್ವಸತಿ ಹುಲಿ ವಾಸಸ್ಥಾನಗಳಲ್ಲಿ ಅಭಿವೃದ್ಧಿ ಯೋಜನೆಗಳ ನಿಯಂತ್ರಣ ಹಾಗೂ ಸ್ವತಂತ್ರ ವಿಮರ್ಶೆಗಳಿಗೆ ಅವಕಾಶ ನೀಡಬೇಕೆಂಬ ಅಭಿಪ್ರಾಯ ತಜ್ಞರಿಂದ ವ್ಯಕ್ತವಾಗಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ತಮ್ಮ 9ನೇ ಕೇಂದ್ರ ಬಜೆಟ್ ನಲ್ಲಿ ಗ್ಲೋಬಲ್ ಬಿಗ್ ಕ್ಯಾಟ್ ಅಲಯನ್ಸ್ ಯೋಜನೆ ಘೋಷಿಸಿದ ಬೆನ್ನಲ್ಲೇ ಈ ವರ್ಷದ ಅಂತಾರಾಷ್ಟ್ರೀಯ ಹುಲಿ ಶೃಂಗ ಸಭೆಯನ್ನ ಕರ್ನಾಟಕದಲ್ಲಿ ಆಯೋಜಿಸಿದ್ದಗಳಲ್ಲಿ ಸಿದ್ಧತೆಗಳು ಜೋರಾಗಿವೆ.
ಈ ಕಾರ್ಯಕ್ರಮಕ್ಕೆ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳನ್ನ ಆಯ್ಕೆ ಮಾಡಿರುವುದು ವಿಶೇಷವಾಗಿದೆ. ಇದೇ ಫೆಬ್ರವರಿ 9 ರಿಂದ ಶುರುವಾಗಲಿದ್ದು, ಐದು ದಿನಗಳ ಕಾಲ ನಡೆಯಲಿದೆ. 18 ದೇಶಗಳು ಭಾಗಿಯಾಗುತ್ತಿವೆ.
ಬಂಡೀಪುರದಲ್ಲಿ ಮೊದಲೆರಡು ದಿನ ಹುಲಿಗಳ ಕಾರ್ಯಗಾರ.
18 ದೇಶಗಳ ಪ್ರತಿನಿಧಿಗಳು ಹಾಗು ದೇಶದ ಎಲ್ಲ ರಾಜ್ಯಗಳ ಅಧಿಕಾರಿಗಳು ಮೊದಲ 2 ದಿನ ಬಂಡೀಪುರದಲ್ಲಿ ನಡೆಯುವ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲಿದ್ದು, ಫೆಬ್ರವರಿ, 11 ಮತ್ತು 12 ರಂದು. ನಾಗರಹೊಳೆಯಲ್ಲಿ ಕಾರ್ಯಕ್ರಮ ನಡೆಯಲಿದೆ. 2023 ರಲ್ಲಿ ಮೈಸೂರಿನಲ್ಲಿ ಹುಲಿ ಗಣತಿ ವರದಿ ಬಿಡುಗಡೆ ವೇಳೆ ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಯನ್ನು ಘೋಷಿಸಿದ್ದರು.
ಹುಲಿ ಗಣತಿ ಬಗ್ಗೆ ಮಾಹಿತಿ:
ಹುಲಿ ಗಣತಿ ಎಂದರೇನು?
ಹುಲಿ ಗಣತಿ ಎಂಬುದು ದೇಶದಲ್ಲಿರುವ ಹುಲಿಗಳ ಸಂಖ್ಯೆಯನ್ನು ವೈಜ್ಞಾನಿಕವಾಗಿ ಲೆಕ್ಕಹಾಕುವ ಪ್ರಕ್ರಿಯೆ. ಭಾರತದಲ್ಲಿ ಈ ಗಣತಿಯನ್ನು ಪ್ರತಿ 4 ವರ್ಷಕ್ಕೊಮ್ಮೆ ನಡೆಸಲಾಗುತ್ತದೆ.
ಉದ್ದೇಶಗಳು:
- ಹುಲಿಗಳ ನಿಖರ ಸಂಖ್ಯೆಯನ್ನು ತಿಳಿದುಕೊಳ್ಳುವುದು
- ಅವುಗಳ ವಾಸಸ್ಥಳ (ಅರಣ್ಯ) ಸಂರಕ್ಷಣೆ
- ಅಕ್ರಮ ಬೇಟೆ ತಡೆಯಲು ಕ್ರಮಗಳು
- ಜೀವ ವೈವಿಧ್ಯ ಸಂರಕ್ಷಣೆ
ಭಾರತದಲ್ಲಿ ಹುಲಿ ಗಣತಿ ಆರಂಭ:
- 1973ರಲ್ಲಿ ಪ್ರಾಜೆಕ್ಟ್ ಟೈಗರ್ (Project Tiger) ಯೋಜನೆಯಡಿ ಆರಂಭವಾಯಿತು
- ಈ ಕಾರ್ಯವನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಮತ್ತು ಭಾರತೀಯ ವನ್ಯಜೀವಿ ಸಂಸ್ಥೆ (WII) ನಡೆಸುತ್ತವೆ
ಹುಲಿ ಗಣತಿ ವಿಧಾನಗಳು:
- ಕ್ಯಾಮೆರಾ ಟ್ರ್ಯಾಪ್‌ಗಳು
- ಕಾಲು ಗುರುತುಗಳ ಪರಿಶೀಲನೆ
- ಮಲ (DNA) ವಿಶ್ಲೇಷಣೆ
- ಅರಣ್ಯ ಸಿಬ್ಬಂದಿ ಹಾಗೂ ತಜ್ಞರ ನೇರ ವೀಕ್ಷಣೆ
ಭಾರತದ ಹುಲಿ ಸಂಖ್ಯೆ (ಇತ್ತೀಚಿನ ಅಂದಾಜು):
- ಭಾರತವು ಜಗತ್ತಿನ ಸುಮಾರು 70% ಹುಲಿಗಳಿಗೆ ಆಶ್ರಯವಾಗಿದೆ
- ಕರ್ನಾಟಕ, ಮಧ್ಯಪ್ರದೇಶ, ಉತ್ತರಾಖಂಡ ಮೊದಲಾದ ರಾಜ್ಯಗಳಲ್ಲಿ ಹೆಚ್ಚಿನ ಹುಲಿಗಳಿವೆ
ಕರ್ನಾಟಕದಲ್ಲಿ ಹುಲಿ ಗಣತಿ:
- ನಾಗರಹೊಳೆ, ಬಂಡೀಪುರ, ಬಿಳಿಗಿರಿರಂಗನಾಥ ಸ್ವಾಮಿ (BRT), ಕಾಳಿ ಅಭಯಾರಣ್ಯಗಳು ಪ್ರಮುಖ ಕೇಂದ್ರಗಳು
- ಕರ್ನಾಟಕವು ಹುಲಿ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿದೆ
ಹುಲಿ ಗಣತಿಯ ಮಹತ್ವ:
- ಪರಿಸರ ಸಮತೋಲನ ಕಾಯ್ದುಕೊಳ್ಳಲು
- ಅರಣ್ಯ ಆರೋಗ್ಯ ಸೂಚಕವಾಗಿ ಹುಲಿ
- ಮುಂದಿನ ಪೀಳಿಗೆಗಾಗಿ ವನ್ಯಜೀವಿ ಸಂರಕ್ಷಣೆ.