ರಾಜ್ಯದಲ್ಲಿ ಸೈಬರ್ ಅಪರಾಧಗಳ ಹಾವಳಿ ಬೆನ್ನಲ್ಲೇ ನಾಗರಿಕರಲ್ಲಿ ಜಾಗೃತಿ ಕೂಡ ಮೂಡುತ್ತದೆ. ಕಳೆದ ನಾಲ್ಕು ವರ್ಷಗಳ ಅಂಕಿ ಅಂಶಗಳನ್ನ ಗಮನಿಸಿದರೆ, ರಾಷ್ತ್ರೀಯ ಸೈಬರ್ ಕ್ರೈಂ ಸಹಾಯವಾಣಿ ಸಂಖ್ಯೆ 1930ಕ್ಕೆ ಬರುವ ಕರೆಗಳ ಸಂಖ್ಯೆ ಬರೋಬ್ಬರಿ 24 ಲಕ್ಷಕ್ಕೆ ಏರಿಕೆಯಾಗಿದೆ.
2022ರಲ್ಲಿ ಕೇವಲ 1.3 ಲಕ್ಷದಷ್ಟಿದ್ದ ಕರೆಗಳ ಸಂಖ್ಯೆ, 2025ರ ವೇಳೆಗೆ ದಾಖಲೆ ಮಟ್ಟ ತಲುಪಿರುವುದು ಸಾರ್ವಜನಿಕರಲ್ಲಿನ ಎಚ್ಚರಿಕೆಯನ್ನು ಪ್ರತಿಬಿಂಬಿಸುತ್ತದೆ.
ಸೈಬರ್ ವಂಚನೆಗೆ ಒಳಗಾದ ತಕ್ಷಣದ ಸಮಯವನ್ನು ಗೋಲ್ಡನ್ ಆವರ್ ಎಂದು ಕರೆಯಲಾಗುತ್ತದೆ. ವಂಚನೆ ನಡೆದ 60 ರಿಂದ 90 ನಿಮಿಷಗಳ ಒಳಗೆ 1930 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದರೆ, ವಂಚಕರು ನಿಮ್ಮ ಹಣವನ್ನು ವಿತ್ ಡ್ರಾ ಮಾಡುವ ಮೊದಲೇ ಅವರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲು ಪೊಲೀಸರಿಗೆ ಹೆಚ್ಚಿನ ಅವಕಾಶವಿರುತ್ತದೆ.
ಈ ಕುರಿತು ಮಾಹಿತಿ ನೀಡಿದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ. ಸಲಿಂ ಡಿಸೆಂಬರ್ 2021 ರಿಂದ ಈ ಸಹಾಯವಾಣಿ ಕಾರ್ಯನಿರ್ವಯಿಸುತ್ತದೆ. ವಂಚನೆಗೊಳಗಾದವರು ಕೂಡಲೇ ಕರೆ ಮಾಡಿ ದಾಖಲೆಗಳನ್ನು ಹಂಚಿಕೊಂಡರೆ ಹಣ ವಾಪಾಸ್ ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ವಿಳಂಬ ಮಾಡಿದರೆ ಆರೋಪಿಗಳು ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿಬಿಡುತ್ತಾರೆ ಎಂದು ಎಚ್ಚರಿಸಿದ್ದಾರೆ.
ಇತೀಚಿಗೆ ನಡೆದ ಇಮೇಲ್ ಸ್ಪೋಪಿಂಗ್ ವಂಚನೆಯೊಂದರಲ್ಲಿ ಸಂತ್ರಸ್ಥರು ಕೇವಲ 15-20 ನಿಮಿಷಗಳಲ್ಲಿ 1930ಗೆ ಕರೆ ಮಾಡಿದ್ದರಿಂದ, ಪೊಲೀಸರು ಸಂಪೂರ್ಣ 2.2 ಕೋಟಿ ರೂಪಾಯಿಗಳನ್ನು ಮರಳಿ ಪಡೆಯಲು ಸಾಧ್ಯವಾಗಿದೆ ಎಂದು ಡಿಸಿಪಿ ರಾಜಾ ಇಮಾಮ್ ಕಾಸಿಮ್ ತಿಳಿಸಿದ್ದಾರೆ. 2025ರಲ್ಲಿ ಒಟ್ಟು 436 ಕೋಟಿ ರೂಪಾಯಿಗಳನ್ನ ಫ್ರೀಜ್ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವಂಚನೆಗೆ ಒಳಗಾದರೆ ಏನು ಮಾಡಬೇಕು?
- ವಂಚನೆ ನಡೆದ ತಕ್ಷಣ 1930 ಉಚಿತ ಸಹಾಯವಾಣಿ ಕರೆ ಮಾಡಿ.
- ಒಂದು ವೇಳೆ ಕರೆ ಲಭ್ಯವಿಲ್ಲದಿದ್ದರೆ www.cybercrime.gov.in ಮೂಲಕ ದೂರು ದಾಖಲಿಸಿ.
- ಇದು ದಿನದ 24 ಗಂಟೆಯೂ ಲಭ್ಯವಿದ್ದು, ಹಣದ ವರ್ಗಾವಣೆಯ ವಿವರಗಳನ್ನ ಸಿದ್ಧವಾಗಿಟ್ಟುಕೊಳ್ಳಿ.
- ನಿಮ್ಮ ಜಾಗೃತಿಯ ಸೈಬರ್ ವಂಚಕರಿಗೆ ಇರುವ ದೊಡ್ಡ ಅಸ್ತ್ರ.
- ಸಮಯ ವ್ಯರ್ಥ ಮಾಡದೆ ದೂರು ನೀಡುವುದರಿಂದ ಮಾತ್ರ ನಿಮ್ಮ ಹಣ ಸುರಕ್ಷಿತವಾಗಿರಲು ಸಾಧ್ಯ.
ಸೈಬರ್ ಕ್ರೈಂ ಎಂದರೇನು?
ಕಂಪ್ಯೂಟರ್, ಮೊಬೈಲ್, ಇಂಟರ್ನೆಟ್ ಅಥವಾ ಡಿಜಿಟಲ್ ತಂತ್ರಜ್ಞಾನ ಬಳಸಿ ನಡೆಯುವ ಅಪರಾಧಗಳನ್ನು ಸೈಬರ್ ಅಪರಾಧ ಎಂದು ಕರೆಯಲಾಗುತ್ತದೆ.
ಸೈಬರ್ ಅಪರಾಧಗಳ ಪ್ರಮುಖ ವಿಧಗಳು :
-
ಆನ್ಲೈನ್ ವಂಚನೆ (Online Fraud)
ಬ್ಯಾಂಕ್, UPI, OTP, ಲಿಂಕ್ಗಳ ಮೂಲಕ ಹಣ ಕಳ್ಳತನ. -
ಹ್ಯಾಕಿಂಗ್ (Hacking)
ಇಮೇಲ್, ಸೋಶಿಯಲ್ ಮೀಡಿಯಾ ಅಥವಾ ವೆಬ್ಸೈಟ್ ಖಾತೆಗಳನ್ನು ಅಕ್ರಮವಾಗಿ ಪ್ರವೇಶಿಸುವುದು. -
ಫಿಶಿಂಗ್ (Phishing)
ನಕಲಿ ಇಮೇಲ್/ಮೆಸೇಜ್ ಕಳುಹಿಸಿ ವೈಯಕ್ತಿಕ ಮಾಹಿತಿ ಪಡೆದುಕೊಳ್ಳುವುದು. -
ಐಡೆಂಟಿಟಿ ಕಳ್ಳತನ (Identity Theft)
ನಿಮ್ಮ ಹೆಸರು, ಆಧಾರ್, ಪ್ಯಾನ್, ಬ್ಯಾಂಕ್ ವಿವರಗಳನ್ನು ದುರುಪಯೋಗ ಮಾಡುವುದು. -
ಸೈಬರ್ ಬುಲ್ಲಿಯಿಂಗ್ / ಕಿರುಕುಳ
ಸೋಶಿಯಲ್ ಮೀಡಿಯಾದಲ್ಲಿ ಬೆದರಿಕೆ, ಅವಮಾನ, ನಿಂದನೆ. -
ನಕಲಿ ವೆಬ್ಸೈಟ್ಗಳು ಮತ್ತು ಆಪ್ಗಳು
ನಕಲಿ ಆ್ಯಪ್ಗಳ ಮೂಲಕ ಹಣ ಅಥವಾ ಡೇಟಾ ಕಳ್ಳತನ.
ಸೈಬರ್ ಅಪರಾಧದಿಂದ ರಕ್ಷಣೆ ಹೇಗೆ?
-
OTP, ಪಿನ್, ಪಾಸ್ವರ್ಡ್ ಯಾರಿಗೂ ಹೇಳಬೇಡಿ
-
ಅನುಮಾನಾಸ್ಪದ ಲಿಂಕ್ಗಳ ಮೇಲೆ ಕ್ಲಿಕ್ ಮಾಡಬೇಡಿ
-
ಬಲವಾದ ಪಾಸ್ವರ್ಡ್ ಬಳಸಿ
-
ಅನಧಿಕೃತ ಆ್ಯಪ್ಗಳನ್ನು ಇನ್ಸ್ಟಾಲ್ ಮಾಡಬೇಡಿ
-
ಸಾರ್ವಜನಿಕ Wi-Fi ನಲ್ಲಿ ಬ್ಯಾಂಕಿಂಗ್ ಕೆಲಸ ಮಾಡಬೇಡಿ
ಸೈಬರ್ ಅಪರಾಧ ದೂರು ಹೇಗೆ ನೀಡಬೇಕು?
-
ರಾಷ್ಟ್ರೀಯ ಸೈಬರ್ ಕ್ರೈಂ ಸಹಾಯವಾಣಿ: 1930
-
ಆನ್ಲೈನ್ ದೂರು ವೆಬ್ಸೈಟ್: cybercrime.gov.in
-
ಹತ್ತಿರದ ಪೊಲೀಸ್ ಠಾಣೆಯಲ್ಲಿ ಕೂಡ ದೂರು ನೀಡಬಹುದು.