ಸಸ್ಯಗಳ ಉಸಿರಾಡುತ್ತವೆ ಎನ್ನುವುದನ್ನು ವಿಶ್ವಕ್ಕೆ ತಿಳಿಸಿದ್ದು ಭಾರತೀಯ ವಿಜ್ಞಾನಿ ಜಗದೀಶ್ ಚಂದ್ರಬೋಸ್. ಅವು ಹೇಗೆ ಉಸಿರಾಡುತ್ತವೆ ಎಂದು ನೇರವಾಗಿ ನೋಡುವ ಸಾಧನವನ್ನು ಅಮೆರಿಕಾದ “ಇಲಿನಾಯ್ಸ್ ಅಬಾರ್ನ ಶಾಂಪೇನ್ ವಿ ವಿ ” ಕಂಡು ಹಿಡಿದಿದೆ. ಇದಕ್ಕೆ ಸ್ಟೊಮ್ಯಾಟ ಇನ್ ಸೈಟ್ ಎಂದು ಹೆಸರಿಡಲಾಗಿದೆ.
ಸಸ್ಯಗಳ ಎಲೆಗಳಲ್ಲಿ ಅತಿಸೂಷ್ಮವಾಗಿ ರಂದ್ರವಿರುತ್ತದೆ, ಇದರ ಮೂಲಕ ಸಸ್ಯಗಳು ಉಸಿರಾಡುತ್ತವೆ. ಇದನ್ನು ನೇರವಾಗಿ ನೋಡುವಂತಹ ಸಾಧನ ಇದೀಗ ಸಿದ್ಧವಾಗಿದೆ.
ವಿಶ್ವದಲ್ಲೇ ಮೊದಲ ಭಾರಿ ಇಂತಹದ್ದೊಂದು ಅಪೂರ್ವ ಸಂಶೋಧನೆ ನಡೆದಿದೆ, ಸಸ್ಯಗಳು ಇಂಗಾಲವನ್ನು ಒಳಗೆಳೆದುಕೊಂಡು ಆಮ್ಲಜನಕವನ್ನು ಹೊರಬಿಡುತ್ತದೆ. ನೀರನ್ನು ಒಳಕ್ಕೆಳೆದುಕೊಳ್ಳಲು ಅವಕ್ಕಿರುವ ಕಿರುರಂಧ್ರಗಳನ್ನು ಈ ಸಾಧನದ ಮೂಲಕ ನಾವು ನೋಡಬಹುದು.
ಸಸ್ಯಗಳ ಉಸಿರಾಟ ಎಂದರೇನು?
ಸಸ್ಯಗಳು ಆಹಾರದಿಂದ ಶಕ್ತಿಯನ್ನು ಪಡೆಯುವ ಪ್ರಕ್ರಿಯೆಯನ್ನು ಉಸಿರಾಟ ಎಂದು ಕರೆಯಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಸಸ್ಯಗಳು ಗ್ಲೂಕೋಸ್ನ್ನು ಆಮ್ಲಜನಕದ ಸಹಾಯದಿಂದ ಅಥವಾ ಇಲ್ಲದೇ ವಿಭಜಿಸಿ ಶಕ್ತಿಯನ್ನು ಉತ್ಪಾದಿಸುತ್ತವೆ.
ಉಸಿರಾಟದ ಅಗತ್ಯತೆ :
- ಸಸ್ಯಗಳ ಬೆಳವಣಿಗೆಗೆ ಶಕ್ತಿ ಬೇಕು
- ಹೊಸ ಕೋಶಗಳ ನಿರ್ಮಾಣಕ್ಕೆ
- ಸಾರಿಗೆ, ಸಂಶ್ಲೇಷಣೆ ಮತ್ತು ನಿರ್ವಹಣಾ ಕಾರ್ಯಗಳಿಗೆ
ಉಸಿರಾಟದ ವಿಧಗಳು :
- ಆಮ್ಲಜನಕ ಉಸಿರಾಟ (Aerobic Respiration)
- ಆಮ್ಲಜನಕ ಇರುವ ಸ್ಥಿತಿಯಲ್ಲಿ ನಡೆಯುತ್ತದೆ
- ಗ್ಲೂಕೋಸ್ → ಕಾರ್ಬನ್ ಡೈಆಕ್ಸೈಡ್ + ನೀರು + ಶಕ್ತಿ
- ಹೆಚ್ಚು ಶಕ್ತಿ ಉತ್ಪಾದಿಸುತ್ತದೆ
- ಅನಾಯಸ ಉಸಿರಾಟ (Anaerobic Respiration)
- ಆಮ್ಲಜನಕ ಇಲ್ಲದ ಸ್ಥಿತಿಯಲ್ಲಿ ನಡೆಯುತ್ತದೆ
- ಗ್ಲೂಕೋಸ್ → ಆಲ್ಕೊಹಾಲ್ / ಲ್ಯಾಕ್ಟಿಕ್ ಆಸಿಡ್ + ಕಡಿಮೆ ಶಕ್ತಿ
- ಸಾಮಾನ್ಯವಾಗಿ ಬೀಜಗಳ ಮೊಳೆಯುವಾಗ ಅಥವಾ ಜಲಾವೃತ ಸ್ಥಿತಿಯಲ್ಲಿ
ಉಸಿರಾಟ ನಡೆಯುವ ಭಾಗಗಳು :
- ಎಲೆಗಳು – ರಂಧ್ರಗಳ ಮೂಲಕ (ಸ್ಟೋಮಾಟಾ)
- ಕಾಂಡ – ಲೆಂಟಿಸೆಲ್ಗಳ ಮೂಲಕ
- ಬೇರುಗಳು – ಮಣ್ಣಿನ ಗಾಳಿಯಿಂದ
ಉಸಿರಾಟ ಮತ್ತು ಪ್ರಕಾಶಸಂಶ್ಲೇಷಣೆಯ ವ್ಯತ್ಯಾಸ :
| ಉಸಿರಾಟ | ಪ್ರಕಾಶಸಂಶ್ಲೇಷಣೆ |
| ಶಕ್ತಿ ಬಿಡುಗಡೆ | ಶಕ್ತಿ ಸಂಗ್ರಹ |
| ಹಗಲು-ರಾತ್ರಿ ನಡೆಯುತ್ತದೆ | ಹಗಲು ಮಾತ್ರ |
| ಆಮ್ಲಜನಕ ಬಳಸುತ್ತದೆ | ಆಮ್ಲಜನಕ ಬಿಡುಗಡೆ |
ಮಹತ್ವ :
- ಸಸ್ಯಗಳ ಜೀವನ ಕ್ರಿಯೆಗಳಿಗೆ ಶಕ್ತಿ ನೀಡುತ್ತದೆ
- ಜೀವಚಕ್ರ ನಿರ್ವಹಣೆಗೆ ಅಗತ್ಯ
- ಪರಿಸರ ಸಮತೋಲನಕ್ಕೆ ಸಹಕಾರಿ