Telegram Join My Telegram WhatsApp Join My WhatsApp

ಸರಕಾರಿ ನೌಕರರಿಗೆ ಶಾಕ್ ಕೊಟ್ಟ ರಾಜ್ಯ ಸರಕಾರ.

ಖಾದಿ ಉದ್ಯಮಕ್ಕೆ ಉತ್ತೇಜನ ನೀಡುವ ಹಾಗೂ ಖಾದಿ ಬಟ್ಟೆಗೆ ಹೆಚ್ಚಿನ ಅವಕಾಶ ನೀಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರ್ಕಾರದ ಮಹತ್ವದ ತೀರ್ಮಾನವನ್ನು ಕೈಗೊಂಡಿದ್ದು, ಸರಕಾರಿ ನೌಕರರು ಇನ್ನು ಮುಂದೆ ತಿಂಗಳಿಗೆ ಒಂದು ಬಾರಿ ಕಡ್ಡಾಯವಾಗಿ ಖಾದಿ ಬಟ್ಟೆಯನ್ನು ಧರಿಸಬೇಕು ಎಂದು ಆದೇಶ ಹೊರಡಿಸಿದೆ. 

ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಪ್ರತಿ ತಿಂಗಳ ಮೊದಲ ಶನಿವಾರದೊಂದು ಎಲ್ಲ ಸರ್ಕಾರಿ ನೌಕರರು ಕಡ್ಡಾಯವಾಗಿ ಖಾದಿ ಉಡುಪು ಧರಿಸಬೇಕು. ಈ ನಿಯಮ ಸರ್ಕಾರಿ ಸೌಮ್ಯದ ನಿಗಮ ಮಂಡಳಿ ಪ್ರಾಧಿಕಾರ ಮತ್ತು ಅನುದಾನಿತ ಸಂಸ್ಥೆಗಳಿಗೂ ಅನ್ವಯಿಸಲಿದೆ. ಅಧಿಕಾರಿಗಳು, ಸಿಬ್ಬಂದಿಗಳು ಧರಿಸುವ ಬಟ್ಟೆಗೂ “ಡ್ರೆಸ್‌ಕೋಡ್“ ಸರ್ಕಾರ ರೂಪಿಸಿದೆ. 

ಸಭೆಯಲ್ಲಿ ಉಡುಪಿನ ವಿನ್ಯಾಸದ ಬಗ್ಗೆಯೂ ಸ್ಪಷ್ಟತೆ ನೀಡಲಾಗಿದೆ. ಪುರುಷ ನೌಕರರು ಖಾದಿ ಶರ್ಟ್ ಪ್ಯಾಂಟ್ ಅಥವಾ ಓವರ್ ಕೋಟ್ ಧರಿಸಬೇಕು.

ಖಾದಿ ಬಟ್ಟೆ ಎಂದರೆ ಏನು?

ಖಾದಿ ಎಂಬುದು ಕೈಯಿಂದ ನೂಲಿಟ್ಟು, ಕೈಮಗ್ಗದಲ್ಲಿ ನೆಯಲಾಗುವ ಬಟ್ಟೆ. ಇದನ್ನು ಸಂಪೂರ್ಣವಾಗಿ ಸ್ವದೇಶಿ ವಿಧಾನದಲ್ಲಿ ತಯಾರಿಸಲಾಗುತ್ತದೆ.

ಖಾದಿ ಬಟ್ಟೆಯ ಇತಿಹಾಸ :

  • ಖಾದಿ ಚಳವಳಿ ಮಹಾತ್ಮ ಗಾಂಧೀಜಿ ಅವರಿಂದ ಪ್ರಾರಂಭವಾಯಿತು.

  • ಬ್ರಿಟಿಷ್ ಕಾಲದಲ್ಲಿ ವಿದೇಶಿ ಬಟ್ಟೆಗಳಿಗೆ ಪರ್ಯಾಯವಾಗಿ ಖಾದಿಯನ್ನು ಬಳಸುವಂತೆ ಜನರನ್ನು ಪ್ರೇರೇಪಿಸಿದರು.

  • ಇದು ಸ್ವದೇಶಿ ಚಳವಳಿಯ ಪ್ರಮುಖ ಸಂಕೇತವಾಗಿತ್ತು.

ಖಾದಿ ಬಟ್ಟೆಯ ವೈಶಿಷ್ಟ್ಯಗಳು :

  • ಕೈಯಿಂದ ತಯಾರಿಸುವ ಬಟ್ಟೆ

  • ಪರಿಸರ ಸ್ನೇಹಿ

  • ಬೇಸಿಗೆಯಲ್ಲಿ ತಂಪು, ಚಳಿಗಾಲದಲ್ಲಿ ಬೆಚ್ಚಗೆ

  • ದೀರ್ಘಕಾಲ ಬಳಕೆ ಸಾಧ್ಯ

  • ಚರ್ಮಕ್ಕೆ ಹಾನಿಕಾರಕವಲ್ಲ

ಖಾದಿ ಬಟ್ಟೆಯಿಂದ ತಯಾರಿಸುವ ವಸ್ತುಗಳು :

  • ಶರ್ಟ್, ಪ್ಯಾಂಟ್

  • ಸೀರೆ, ಧೋತಿ

  • ಕುರ್ಚಾ, ಪೈಜಾಮಾ

  • ಶಾಲು, ಟವಲ್, ಬೆಡ್‌ಶೀಟ್

ಖಾದಿಯ ಮಹತ್ವ :

  • ಗ್ರಾಮೀಣ ಜನರಿಗೆ ಉದ್ಯೋಗ

  • ಸ್ವದೇಶಿ ಉತ್ಪಾದನೆಗೆ ಉತ್ತೇಜನ

  • ಆರ್ಥಿಕ ಸ್ವಾವಲಂಬನೆಗೆ ಸಹಾಯಕ

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (KVIC) :

  • ಖಾದಿ ಉತ್ಪಾದನೆ ಮತ್ತು ಮಾರಾಟವನ್ನು ಉತ್ತೇಜಿಸುವ ಕೇಂದ್ರ ಸರ್ಕಾರದ ಸಂಸ್ಥೆ

  • ಗ್ರಾಮೀಣ ಉದ್ಯಮಗಳಿಗೆ ಬೆಂಬಲ ನೀಡುತ್ತದೆ

ಸಮಾರೋಪ :

ಖಾದಿ ಬಟ್ಟೆ ನಮ್ಮ ಸಂಸ್ಕೃತಿ, ಸ್ವಾವಲಂಬನೆ ಮತ್ತು ದೇಶಭಕ್ತಿಯ ಪ್ರತೀಕವಾಗಿದೆ. ಇಂದಿನ ದಿನಗಳಲ್ಲಿ ಫ್ಯಾಷನ್ ಕ್ಷೇತ್ರದಲ್ಲಿಯೂ ಖಾದಿಗೆ ಹೆಚ್ಚಿನ ಮಹತ್ವ ದೊರೆಯುತ್ತಿದೆ.