ರಾಜ್ಯದಲ್ಲಿ ಪ್ರತಿ ವರ್ಷ 22 ಸಾವಿರಕ್ಕೂ ಹೆಚ್ಚು ರೋಗಿಗಳು ಕ್ಯಾನ್ಸರ್ ಪತ್ತೆ ಆಗುತ್ತಿದೆ. ಸುಮಾರು 3.5 ಲಕ್ಷದಿಂದ 4 ಲಕ್ಷದವರೆಗೆ ಫಾಲೋ ಅಪ್ ಚಿಕಿತ್ಸೆಗಾಗಿ ಒಳಗಾಗಿರುವ ಕುರಿತು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ತಿಳಿಸಿದೆ.
ವಿಶಿಷ್ಟತೆಯಿಂದ ಏಕತೆ 2026 ನೇ ಸಾಲಿನ ಕ್ಯಾನ್ಸರ್ ದಿನದ ಘೋಷಣೆಯಾಗಿದೆ. ಕ್ಯಾನ್ಸರ್ ಒಂದು ರೋಗ ಮಾತ್ರವಲ್ಲದೆ ಅದು ವ್ಯಕ್ತಿಗತ ಅನುಭವವಾಗಿರುತ್ತದೆ. ಪ್ರತಿಯೊಬ್ಬ ರೋಗಿಯ ಅಗತ್ಯತೆಗಳನ್ನು ವಿಭಿನ್ನವಾಗಿದ್ದು, ಚಿಕಿತ್ಸೆಯಲ್ಲಿ ಮಾನವೀಯತೆ, ಸಹಾನುಭೂತಿ ಮತ್ತು ವ್ಯಕ್ತಿಕೃತ ಅವಶ್ಯಕತೆ ಮುಖ್ಯವಾಗಿದ್ದು, ರೋಗಿಗಳು, ಪಾಲಕರು, ವೈದ್ಯರು, ಸಂಶೋಧಕರು ಮತ್ತು ಸಮಾಜದ ಎಲ್ಲರೂ ಒಟ್ಟಿಗೆ ಕ್ಯಾನ್ಸರ್ ವಿರುದ್ಧ ಕೆಲಸ ಮಾಡಿದರೆ ಕ್ಯಾನ್ಸರ್ ಅನ್ನು ಗೆಲ್ಲಬಹುದಾಗಿದೆ.
ಫೆಬ್ರವರಿ 4 ರಂದು ಸರಕಾರ ಮತ್ತು ಇತರ ಸಂಘ ಸಂಸ್ಥೆಗಳು ಅನೇಕ ಜಾಗೃತಿ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದು, ಕ್ಯಾನ್ಸರ್ ಬಗ್ಗೆ ಮತ್ತು ಮುನ್ನೆಚ್ಚರಿಕೆ ಕುರಿತು ಅರಿವು ಮೂಡಿಸಲಾಗುತ್ತಿದೆ. ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ ರಾಜ್ಯಾದ್ಯಂತ ಕ್ಯಾನ್ಸರ್ ತಪಾಸಣಾ ಶಿಬಿರ ಹಾಗೂ ಜಾಗೃತಿ ಅಭಿಯಾನ ನಡೆಸುತ್ತಿದೆ.
ಭಾರತದಲ್ಲಿ 37.5 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಅದರಲ್ಲಿ ಎರಡು 2.5 ಲಕ್ಷ ಪ್ರಕರಣಗಳು ಕರ್ನಾಟಕದಲ್ಲಿ ಪತ್ತೆಯಾಗಿವೆ. ರಾಜ್ಯದಲ್ಲಿ 89,125 ಹೊಸ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಿ ಪುರುಷರಲ್ಲಿ ಶ್ವಾಸಕೋಶ, ಹೊಟ್ಟೆ ಪ್ರಾಸ್ಟೇಟ್ ಮತ್ತು ಅನ್ನನಾಳದ ಕ್ಯಾನ್ಸರ್ ಮತ್ತು ಮಹಿಳೆಯರಲ್ಲಿ ಸ್ತನ,ಗರ್ಭಕಂಠ, ಅಂಡಾಶಯ ಕ್ಯಾನ್ಸರ್ ಪ್ರಧಾನವಾಗಿದೆ.
ಜಾಗೃತಿ ಜಾಥಾ ಇಂದು.
ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ವತಿಯಿಂದ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಸಂಸ್ಥೆಯ ಆವರಣದಿಂದ ಲಾಲ್ ಬಾಗ್ ವರೆಗೆ ಬೃಹತ್ ಜಾಥಾ ಹಮ್ಮಿಕೊಂಡಿದೆ. ಚಲನಚಿತ್ರ ನಟ ಮತ್ತು ನಿರ್ದೇಶಕ ಶರಣ, ವಿಧಾನ ಪರಿಷತ್ ಸದಸ್ಯ ಉಮಾಶ್ರೀ, ಬೆಂಗಳೂರು ದಕ್ಷಿಣ ಉಪಪೊಲೀಸ್ ಆಯುಕ್ತ ಲೋಕೇಶ್ ಬಿ ಜಗಲಾಸರ್, ಕಲಾವಿದ ರಮೇಶ್ ಭಟ್ ಅವರು ಭಾಗವಹಿಸಲಿದ್ದಾರೆ.
ಸುಮಾರು 500 ಕ್ಕೂ ಹೆಚ್ಚು ಮಂದಿ ಜಾಥಾದಲ್ಲಿ ಭಾಗವಹಿಸಲಿದ್ದಾರೆ. ಜಾಥಾದಲ್ಲಿ ಸಾರ್ವಜನಿಕರಿಗೆ ಕ್ಯಾನ್ಸರ್ ಬಗ್ಗೆ ಅರಿವು ಮೂಡುತ್ತದೆ. ಇದು ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ ಡಾ ಟಿ. ನವೀನ್ ಅವರು ತಿಳಿಸಿದ್ದಾರೆ.
ಕ್ಯಾನ್ಸರ್ (Cancer) ಬಗ್ಗೆ ಮಾಹಿತಿ :
ಕ್ಯಾನ್ಸರ್ ಎಂಬುದು ದೇಹದ ಕೆಲವು ಕೋಶಗಳು ನಿಯಂತ್ರಣವಿಲ್ಲದೆ ಅತಿಯಾಗಿ ಬೆಳೆಯುವ ರೋಗ. ಈ ಅಸಹಜ ಕೋಶಗಳು ದೇಹದ ಇತರ ಅಂಗಗಳಿಗೆ ಹರಡಬಹುದು (ಮೆಟಾಸ್ಟಾಸಿಸ್).
ಕ್ಯಾನ್ಸರ್ನ ವಿಧಗಳು:
- ಸ್ತನ ಕ್ಯಾನ್ಸರ್ (Breast Cancer)
- ಶ್ವಾಸಕೋಶ ಕ್ಯಾನ್ಸರ್ (Lung Cancer)
- ಮೌತ್/ಬಾಯಿ ಕ್ಯಾನ್ಸರ್
- ಗರ್ಭಕಂಠ ಕ್ಯಾನ್ಸರ್ (Cervical Cancer)
- ರಕ್ತ ಕ್ಯಾನ್ಸರ್ (Leukemia)
- ಪ್ರೋಸ್ಟೇಟ್ ಕ್ಯಾನ್ಸರ್
ಕ್ಯಾನ್ಸರ್ಗೆ ಕಾರಣಗಳು:
- ಧೂಮಪಾನ ಮತ್ತು ಮದ್ಯಪಾನ
- ತಂಬಾಕು ಸೇವನೆ
- ಅಸ್ವಸ್ಥ ಆಹಾರ ಪದ್ಧತಿ
- ವಾಯು ಮತ್ತು ಪರಿಸರ ಮಾಲಿನ್ಯ
- ಅನುವಂಶಿಕತೆ (ಕುಟುಂಬ ಇತಿಹಾಸ)
- ವೈರಸ್ ಸೋಂಕುಗಳು (HPV, Hepatitis)
ಕ್ಯಾನ್ಸರ್ನ ಲಕ್ಷಣಗಳು:
- ನಿರಂತರ ತೂಕ ಇಳಿಕೆ
- ದೀರ್ಘಕಾಲದ ದೌರ್ಬಲ್ಯ
- ಅಸಾಮಾನ್ಯ ಗುಳ್ಳೆಗಳು/ಗಂಟುಗಳು
- ನಿರಂತರ ನೋವು
- ಗಾಯಗಳು ಗುಣವಾಗದಿರುವುದು
- ರಕ್ತಸ್ರಾವ (ಕಾರಣವಿಲ್ಲದೆ)
ಈ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ಕ್ಯಾನ್ಸರ್ ಪತ್ತೆ (Diagnosis):
- ರಕ್ತ ಪರೀಕ್ಷೆ
- ಬಯೋಪ್ಸಿ (Biopsy)
- CT ಸ್ಕ್ಯಾನ್, MRI, PET ಸ್ಕ್ಯಾನ್
- X-Ray
ಕ್ಯಾನ್ಸರ್ ಚಿಕಿತ್ಸೆ:
- ಶಸ್ತ್ರಚಿಕಿತ್ಸೆ (Surgery)
- ಕೀಮೋಥೆರಪಿ (Chemotherapy)
- ರೇಡಿಯೇಷನ್ ಥೆರಪಿ (Radiation Therapy)
- ಇಮ್ಯುನೋಥೆರಪಿ (Immunotherapy)
- ಟಾರ್ಗೆಟ್ ಥೆರಪಿ
ಕ್ಯಾನ್ಸರ್ ತಡೆಗಟ್ಟುವ ಕ್ರಮಗಳು:
- ತಂಬಾಕು ಮತ್ತು ಮದ್ಯಪಾನದಿಂದ ದೂರವಿರು
- ಆರೋಗ್ಯಕರ ಆಹಾರ ಸೇವಿಸು
- ನಿಯಮಿತ ವ್ಯಾಯಾಮ
- ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ
- ಲಸಿಕೆಗಳು (HPV, Hepatitis B).