Telegram Join My Telegram WhatsApp Join My WhatsApp

ರಫ್ತು ಸನ್ನದ್ದ ರಾಜ್ಯಗಳಲ್ಲಿ ಮಹಾರಾಷ್ಟ್ರ NO.1

ನೀತಿ ಆಯೋಗದ 4ನೇ ರಫ್ತು ಸನ್ನದ್ಧ ಸೂಚ್ಯಕ  2024 ರಲ್ಲಿ ಮಹಾರಾಷ್ಟ್ರ ಅಗ್ರಸ್ಥಾನ ಪಡೆದಿದೆ.  ಮತ್ತು ತಮಿಳನಾಡು ಮತ್ತು ಗುಜರಾತ್ ನಂತರದ ಸ್ಥಾನದಲ್ಲಿವೆ. ಎಂದು ಕೇಂದ್ರ ಸರ್ಕಾರದ ನೀತಿ ಆಯೋಗ ಬಿಡುಗಡೆ ಮಾಡಿದೆ. 

ಕರ್ನಾಟಕ No.6

ಕಳೆದ  ವರ್ಷ ತಮಿಳನಾಡು ಮೊದಲ ಸ್ಥಾನದಲ್ಲಿತ್ತು .  ನೀತಿ ಆಯೋಗವು ರಫ್ತು ಸಾಮರ್ಥ್ಯ, ನೀತಿ ಬೆಂಬಲ ಮತ್ತು ಕಾರ್ಯಕ್ಷಮತೆ ಫಲಿತಂಶಗಳನ್ನು ಆಧರಿಸಿ ರೂಪಿಸಿದೆ. ಮತ್ತು ಜಮ್ಮು ಮತ್ತು ಕಾಶ್ಮೀರ, ನಾಗಾಲ್ಯಾಂಡ್, ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ದಿಯು, ಗೋವಾ ಮತ್ತು ತ್ರಿಪುರ ನಂತರದ ಸ್ಥಾನದಲ್ಲಿವೆ  ಎಂದು ವರದಿ ತಿಳಿಸಿದೆ. 

ಸೂಚ್ಯಂಕವನ್ನು ಬಿಡುಗಡೆ ಮಾಡಿದ ನೀತಿ ಆಯೋಗದ ಸಿಇಓ ಬಿ.ವಿ.ಆರ್. ಸುಬ್ರಮಣ್ಯಂ “ಭಾರತ ತನ್ನ ಮುಕ್ತ ವ್ಯಾಪಾರ ಒಪ್ಪಂದಗಳು ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದಗಳ ಜಾಲವನ್ನು ವಿಸ್ತರಿಸುವಂತಿದೆ, ಬಲವಾದ ದೇಶೀಯ ಅಡಿಪಾಯ ಹೆಚ್ಚು ನಿರ್ಣಾಯಕವಾಗಿದೆ. ಹೊಸ ಅವಕಾಶಗಳಿಗೆ ಸ್ಪಂದಿಸುವ ಜಾಗತಿಕ ಮಾನದಂಡಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮತ್ತು ಜಿಲ್ಲೆಗಳಲ್ಲಿ ಸ್ಪರ್ಧಾತ್ಮಕತೆಯನ್ನು ನಿರ್ಮಿಸುವ ಹವಾ ಸೃಷ್ಟಿಸುವುದು ರಾಜ್ಯಗಳ ಹೊಣೆಯಾಗಿದೆ. 

ಇತ್ತೀಚಿನ ವರ್ಷಗಳಲ್ಲಿ ಹಲವಾರು ರಾಜ್ಯಗಳು ಬಲವಾದ ನೀತಿಗಳ ಮೂಲಕ ರಫ್ತು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತಿವೆ. ರಫ್ತಿಗೆ ಸಂಬಂಧಿಸಿದಂತೆ ರಾಜ್ಯಗಳ ದೃಷ್ಟಿಕೋನ ಹೆಚ್ಚು ರಚನಾತ್ಮಕ ಮತ್ತು ಸಕ್ರಿಯವಾಗಿವೆ. ಎಂದು ಸುಬ್ರಮಣ್ಯಂ ಪ್ರತಿಪಾದಿಸಿದ್ದಾರೆ.  “ರಫ್ತು ಎಂಬುವುದು ಆರ್ಥಿಕ ಬೆಳವಣಿಗೆಯ ಚಾಲಕ ಶಕ್ತಿಯಾಗಿದೆ. ಜಾಗತಿಕ ಮೌಲ್ಯ ಸರಪಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರ ಮೂಲಕ ವಿದೇಶಿ ವಿನಿಮಯವನ್ನು ಹೆಚ್ಚುಗಳಿಸಬವುದು. 

ಆಧಾರವೇನು?

  • ರಾಜ್ಯಗಳ ರಫ್ಹ್ತು ನೀತಿ 
  • ವ್ಯಾಪಾರ ವಹಿವಾಟು ಪರಿಸರ 
  • ಮೂಲ ಸೌಕರ್ಯ ಗುಣಮಟ್ಟ 
  • ರಫ್ಹ್ತು ಉತ್ಪನ್ನಗಳ ಪ್ರಮಾಣ 

ನೀತಿ ಆಯೋಗ ಎಂದರೆ ಏನು?

ನೀತಿ ಆಯೋಗ (NITI Aayog) ಎಂಬುದು ಭಾರತದ ರಾಷ್ಟ್ರೀಯ ನೀತಿ ರೂಪಣೆ ಮತ್ತು ಯೋಜನಾ ಸಂಸ್ಥೆNITI ಎಂದರೆ National Institution for Transforming India.

  • 👉 ಇದು 2015ರ ಜನವರಿ 1ರಂದು ಸ್ಥಾಪನೆಯಾಯಿತು.
    👉 ಹಳೆಯ ಯೋಜನಾ ಆಯೋಗ (Planning Commission) ಅನ್ನು ಬದಲಿಸಿ ನೀತಿ ಆಯೋಗವನ್ನು ಸ್ಥಾಪಿಸಲಾಯಿತು.

ನೀತಿ ಆಯೋಗದ ಮುಖ್ಯ ಉದ್ದೇಶಗಳು :

  • ದೇಶದ ಸಮಗ್ರ ಅಭಿವೃದ್ಧಿಗೆ ನೀತಿಗಳನ್ನು ರೂಪಿಸುವುದು

  • ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಹಕಾರಾತ್ಮಕ ಫೆಡರಲಿಸಂ ಬೆಳೆಸುವುದು

  • ಬಡತನ ನಿವಾರಣೆ, ಶಿಕ್ಷಣ, ಆರೋಗ್ಯ, ಉದ್ಯೋಗ ಸೃಷ್ಟಿ ಮೊದಲಾದ ಕ್ಷೇತ್ರಗಳಲ್ಲಿ ಮಾರ್ಗದರ್ಶನ

  • ದೀರ್ಘಕಾಲೀನ ಮತ್ತು ಸುಸ್ಥಿರ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವುದು

  • ಹೊಸ ಆಲೋಚನೆಗಳು ಮತ್ತು ನವೀನತೆಯನ್ನು (Innovation) ಉತ್ತೇಜಿಸುವುದು

ನೀತಿ ಆಯೋಗದ ಪ್ರಮುಖ ಕಾರ್ಯಗಳು :

  • ಸರ್ಕಾರಕ್ಕೆ ನೀತಿ ಸಲಹೆ ನೀಡುವುದು

  • ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಯೋಜನೆಗಳ ಮೌಲ್ಯಮಾಪನ

  • ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳ ಪರಿಹಾರಕ್ಕೆ ಪರಿಹಾರ ಸೂಚನೆ

  • ಡಿಜಿಟಲ್ ಇಂಡಿಯಾ, ಸ್ಟಾರ್ಟ್‌ಅಪ್ ಇಂಡಿಯಾ ಮುಂತಾದ ಯೋಜನೆಗಳಿಗೆ ಬೆಂಬಲ

ನೀತಿ ಆಯೋಗದ ರಚನೆ :

  • ಅಧ್ಯಕ್ಷರು: ಭಾರತದ ಪ್ರಧಾನಮಂತ್ರಿ

  • ಉಪಾಧ್ಯಕ್ಷರು: ಪ್ರಧಾನಮಂತ್ರಿಯಿಂದ ನೇಮಕ

  • ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO)

  • ಕೇಂದ್ರ ಸಚಿವರು ಮತ್ತು ರಾಜ್ಯಗಳ ಮುಖ್ಯಮಂತ್ರಿಗಳು ಸದಸ್ಯರು

ನೀತಿ ಆಯೋಗದ ಕೇಂದ್ರ ಕಚೇರಿ :

ನವದೆಹಲಿ (New Delhi)

ಸಂಕ್ಷಿಪ್ತವಾಗಿ

ನೀತಿ ಆಯೋಗವು ಭಾರತದ ಅಭಿವೃದ್ಧಿಗೆ ದಿಕ್ಕು ತೋರಿಸುವ ಚಿಂತನಾ ಸಂಸ್ಥೆ (Think Tank) ಆಗಿದ್ದು, ದೇಶವನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬಲಿಷ್ಠವಾಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.