ಹೌರಾ ಮತ್ತು ಗುವಾಹಟಿಯ ಕಾಮಾಖ್ಯ ಜುಂಕ್ಷನ್ ನಡುವೆ ಸಂಪರ್ಕ ಕಲ್ಪಿಸುವ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.
ಪಶ್ಚಿಮ ಬಂಗಾಳದ ಮಾಲ್ಡಾ ಪಟ್ಟಣದಿಂದ ಭಾರತದ ಮೊದಲ ಸ್ಲೀಪ್ಪೆರ್ ರೈಲಿಗೆ ಪ್ರಧಾನಿ ಮೋದಿ ನಿಶಾನೆ ತೋರಿದರು, ಆಧುನಿಕ ಭಾರತದ ಹೆಚ್ಚುತ್ತಿರುವ ಸಾರಿಗೆ ಅಗತ್ಯಗಳನ್ನು ಪೂರೈಸಲು ಅಭಿವೃದ್ಧಿಪಡಿಸಲಾದ ಸಂಪೂರ್ಣ ಹವಾನಿಯಂತ್ರಿಕ ವಂದೇ ಭಾರತ್ ಸ್ಲೀಪರ್ ರೈಲು, ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ವಿಮಾನಯಾನದಂತಹ ಪ್ರಯಾಣದ ಅನುಭವವನ್ನು ನೀಡಲು ಸಜ್ಜಾಗಿದೆ.
ಭಾರತೀಯ ರೈಲ್ವೆ ಸಂಸ್ಥೆ ದೇಶದ ದೀರ್ಘ ದೂರದ ಪ್ರಯಾಣಿಕರಿಗಾಗಿ ವಂದೇ ಸ್ಲೀಪರ್ ರೈಲು ಅನ್ನು ಪರಿಚಯಿಸುತ್ತಿದೆ. ಇದು ಈಗಾಗಲೇ ಯಶಸ್ವಿಯಾಗಿರುವ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಸುಧಾರಿತ ಹಾಗೂ ನಿದ್ರಾಸೌಲಭ್ಯ ಹೊಂದಿದ ಆವೃತ್ತಿಯಾಗಿದೆ.
ಮುಖ್ಯ ವೈಶಿಷ್ಟ್ಯಗಳು :
- ಸ್ಲೀಪರ್ ಕೋಚ್‌ಗಳು: ದೀರ್ಘ ದೂರ ಪ್ರಯಾಣಕ್ಕೆ ಅನುಕೂಲ
- ಅರ್ಧ-ಹೈ ಸ್ಪೀಡ್ ರೈಲು: ಗರಿಷ್ಠ ವೇಗ ಸುಮಾರು 160 ಕಿಮೀ/ಗಂ
- ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ನಿರ್ಮಾಣ
- ಸಂಪೂರ್ಣವಾಗಿ ಎಲೆಕ್ಟ್ರಿಕ್ ರೈಲು
- ಕಡಿಮೆ ಶಬ್ದ ಮತ್ತು ಕಡಿಮೆ ಕಂಪನ
ಸೌಲಭ್ಯಗಳು :
- ಆರಾಮದಾಯಕ ಹಾಸಿಗೆಗಳು (Sleeper Berths)
- ಆಧುನಿಕ ಶೌಚಾಲಯಗಳು
- ಸ್ವಯಂಚಾಲಿತ ಬಾಗಿಲುಗಳು
- ಸುಧಾರಿತ ಏರ್‌ಕಂಡೀಷನಿಂಗ್ ವ್ಯವಸ್ಥೆ
- CCTV ಕ್ಯಾಮೆರಾ ಹಾಗೂ ಸುರಕ್ಷತಾ ವ್ಯವಸ್ಥೆ
- ಚಾರ್ಜಿಂಗ್ ಪಾಯಿಂಟ್‌ಗಳು ಮತ್ತು LED ಡಿಸ್‌ಪ್ಲೇ
ಉದ್ದೇಶ :
- ದೀರ್ಘ ದೂರದ ಪ್ರಯಾಣದಲ್ಲಿ ರಾಜಧಾನಿ ಮತ್ತು ಶತಾಬ್ದಿ ರೈಲುಗಳಿಗೆ ಪರ್ಯಾಯ
- ಪ್ರಯಾಣಿಕರಿಗೆ ವೇಗ, ಸುರಕ್ಷತೆ ಮತ್ತು ಆರಾಮ ಒದಗಿಸುವುದು