ಡಾ//. ಕೀರ್ತನಾ ಎಂ.
![]()
ಮುಟ್ಟಿನ ಸಮಯದಲ್ಲಿ ರಕ್ತಸ್ರಾವ ಸರಿಯಾಗಿ ಆಗುತ್ತಿಲ್ಲ ಎಂದರೆ ಎರಡು ಗಂಟೆಗಳಿಗೊಮ್ಮೆ ಒಂದು ಬಾರಿ ಒಂದು ಗ್ಲಾಸ್ ಪ್ರಮಾಣದಷ್ಟು ಬಿಸಿ ನೀರು ಸೇವಿಸುವುದರಿಂದ ಹೊಟ್ಟೆನೋವು ಕಡಿಮೆಯಾಗುವುದರೊಂದಿಗೆ ರಕ್ತಸ್ರಾವ ಕೂಡ ಸುಲಭವಾಗುತ್ತದೆ.

ನೈಸರ್ಗಿಕ ಚಹಾಗಳನ್ನು ಸೇವಿಸುವುದರಿಂದ ಉತ್ತಮ ಫ್ಲೋ ಆಗುತ್ತದೆ.
ಈ ಕಷಾಯ ಸಹಾಯ ಮಾಡುತ್ತದೆ.
ಮಾಡುವ ವಿಧಾನ :
- 2 ಇಂಚು ಶುಂಠಿ.
- 1 ಚಮಚ ಮೆಂತ್ಯ.
- ½ ಚಮಚ ಜೀರಿಗೆ.
- ½ ಚಮಚ ಅಜ್ವೈನ್.
- ½ ಚಮಚ ಕಾಳು ಮೆಣಸು.
- 2 ತುಂಡು ಬೆಲ್ಲ.
- 2 ಗ್ಲಾಸ್ ನೀರಿನಲ್ಲಿ ಹಾಕಿ ಐದು ನಿಮಿಷಗಳ ಕಾಲ ಕುದಿಸಿ ಶೋಧಿಸಿ ದಿನಕ್ಕೆ ಒಂದು ಬಾರಿ ಕುಡಿಯಬೇಕು.

15-20 ನಿಮಿಷಗಳ ಕಾಲ ವಾಕ್ ಮಾಡುವುದರಿಂದ ಪಿರಿಯಡ್ಸ್ ಕ್ರಾಂಪ್ ಕಡಿಮೆಯಾಗುವುದರೊಂದಿಗೆ ರಕ್ತ ಸಂಚಾರದ ಹಾಗು ರಕ್ತ ಸ್ರಾವ ಚೆನ್ನಾಗಿ ಆಗುತ್ತದೆ.

ಕಬ್ಬಿಣ ಅಂಶ ಇರುವ ಆಹಾರ ಮತ್ತು “ವಿಟಾಮಿನ್ ಸಿ” ಇರುವ ಆಹಾರ :
- ಬೀಟ್ರೋಟ್,
- ಪಾಲಕ್ ಸೊಪ್ಪು.
- ಕಪ್ಪು ದ್ರಾಕ್ಷಿ.
- ಕಿತ್ತಳೆ.
- ನಿಂಬೆಹಣ್ಣು.
- ಕುಂಬಳಕಾಯಿ ಬೀಜ.
- ಕಪ್ಪು ಎಳ್ಳು.