Telegram Join My Telegram WhatsApp Join My WhatsApp

ಬೆಂಗಳೂರಿನ ಮೇಜರ್ ಸ್ವಾತಿ ಶಾಂತಕುಮಾರ್ ಗೆ ವಿಶ್ವಸಂಸ್ಥೆ ಪ್ರಶಸ್ತಿ.

ಬೆಂಗಳೂರಿನವರಾದ ಭಾರತೀಯ ಸೇನಾಧಿಕಾರಿ ಮೇಜರ್ ಸ್ವಾತಿ ಶಾಂತಕುಮಾರ್ ಅವರು ವಿಶ್ವಸಂಸ್ಥೆಯ ಪ್ರಧಾನ ಕಾರ‌್ಯದರ್ಶಿ ನೀಡುವ ಲಿಂಗ ಸಮಾನತೆ ಪ್ರತಿಪಾದಕ ಪ್ರಶಸ್ತಿ 2025ಕ್ಕೆ ಭಾಜನರಾಗಿದ್ದಾರೆ.

ವಿವಿಧ ಕಾರ್ಯಾಚರಣೆಗಳಲ್ಲಿನ ಶ್ರೇಷ್ಠ ಸೇವೆಯನ್ನು ಗುರುತಿಸಿ ನೀಡುವ ಪ್ರಶಸ್ತಿಗಳನ್ನ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಘೋಷಿಸಿದ್ದಾರೆ. 

ಸಂಘರ್ಷಪೀಡಿತ ದಕ್ಷಿಣ ಸೂಡಾನ್ ನಲ್ಲಿ ಮಹಿಳೆಯರ ರಕ್ಷಣೆ ಸಮುದಾಯದ ನೆಮ್ಮದಿಗೆ ಕೈಗೊಂಡ ಸಂವೇದನಾಶೀಲ ಕಾರ್ಯಕ್ರಮಗಳಿಗೆ ಸ್ವಾತಿ ಅವರಿಗೆ ಪ್ರಶಸ್ತಿ ಒಲಿದಿದೆ.

ಅವರದೇ ವಾಕ್ಯವೋ ಸಮಾನ ಪಾಲುದಾರಿಕೆ ಶಾಶ್ವತ ಶಾಂತಿ ಎನ್ನುವುದು ಅವರ ಧ್ಯೇಯವಾಗಿತ್ತು. 

ಶಾಂತಿ ರಕ್ಷಣಾ ಕಾರ್ಯಾಚರಣೆಗಳ ಮುಂದಾಳತ್ವದಲ್ಲಿ ಲಿಂಗ ಸಮಾನತೆಗೆ ಒತ್ತು ನೀಡಿದ್ದಾರೆ. ವಿಶ್ವದಾದ್ಯಂತ ಇರುವ ಎಲ್ಲ ಶಾಂತಿ ರಕ್ಷಣಾ ಕಾರ್ಯಚರಣೆ ಹಾಗು ವಿಶ್ವಸಂಸ್ಥೆಗಳಿಂದ ಬಂದ ನಾಮನಿರ್ದೇಶನಗಳಲ್ಲಿ ಸ್ವಾತಿ ಆಯ್ಕೆಯಾಗಿದ್ದಾರೆ.

ನಾಲ್ಕು ಅಂತಿಮ ಸ್ಪರ್ಧಿಗಳ ನಡುವೆ ನಡೆದ ಮತದಾನದಲ್ಲಿ ಅತ್ಯಧಿಕ ಮತಗಳನ್ನು ಪಡೆದು ಈ ಗೌರವಕ್ಕೆ ಸ್ವಾತಿಯವರು ಪಾತ್ರವಾಗಿದ್ದಾರೆ. 

ಸುಡಾನ್ ನ ಐದು ಸಾವಿರಕ್ಕೂ ಹೆಚ್ಚು ಮಹಿಳೆಯರರಿಗೆ ಸುರಕ್ಷಿತ ವಾತಾವರಣ ನಿರ್ಮಾಣ ಮಾಡಿದೆ. ಅವರು ಗಳಿಸಿದ ಸಮುದಾಯದ ವಿಶ್ವಾಸ ವಿಶ್ವಸಂಸ್ಥೆಯ ಮುಂದಿನ ಕೆಲಸಗಳಿಗೆ ಪ್ರೇರಣೆಯಾಗಿದೆ ಎಂದು ಆಂಟೋನಿ ಗುಟೆರೆಸ್ ಅವರು ಶ್ಲಾಘಿಸಿದ್ದಾರೆ.

ಇಂಜಿನಿಯರಿಂಗ್ ಪದವೀಧರೆ ಆದ ಸ್ವಾತಿ ಅವರು ಬೆಂಗಳೂರಿನ ಲಿಂಗರಾಜಪುರ ನಿವಾಸಿ ಖಾಸಗಿ ಕಂಪನಿ ಉದ್ಯೋಗಿ.ಆರ್. ಶಾಂತಕುಮಾರ್, ಸರ್ಕಾರಿ ಶಾಲಾ ಶಿಕ್ಷಕಿ ರಾಜಮಣಿ ದಂಪತಿ ಪುತ್ರಿ ಎಂಟು ವರ್ಷಗಳಿಂದ ಭಾರತೀಯ ಸೇನೆಯಲ್ಲಿದ್ದು ಒಂದುವರೆ ವರ್ಷದಿಂದ ದಕ್ಷಿಣ ಸೂಡಾನ್‌ನಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಸೇವಾ ನಿರತರಾಗಿದ್ದಾರೆ.