ಗೃಹ ಇಲಾಖೆಯಿಂದ ಅಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಅದೇನೆಂದರೆ ರಾಜಧಾನಿಯಲ್ಲಿ ನಿತ್ಯ 7 ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹಾಗೂ ಕಳೆದ ನಾಲ್ಕು ವರ್ಷಗಳಲ್ಲಿ 9456 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ನೇಣಿಗೆ ಶರಣಾಗಿ ಸಾವನ್ನಪ್ಪಿದವರು ಅಧಿಕವಾಗಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾದಂತೆ ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದೆ. ವರದಿಗಳ ಪ್ರಕಾರ ಸಿಲಿಕಾನ್ ಸಿಟಿಯಲ್ಲಿ ಪ್ರತಿ 3.5 ಗಂಟೆಗೆ ಒಂದು ಆತ್ಮಹತ್ಯೆ ನಡೆಯುತ್ತಿವೆ ಎಂದು ಆಘಾತಕಾರಿ ಅಂಕಿ ಅಂಶ ಬಯಲಾಗಿದೆ.
ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು 9450 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ವರ್ಷದಿಂದ ವರ್ಷಕ್ಕೆ ಸರಾಸರಿ 2000 ಕ್ಕಿಂತ ಹೆಚ್ಚು ಸಾವುಗಳು ಸಂಭವಿಸುತ್ತಿವೆ. ಗೃಹ ಇಲಾಖೆ ಮಾಹಿತಿಯಂತೆ ಪ್ರತಿ ದಿನವೂ ಸುಮಾರು ಆರರಿಂದ ಏಳು ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ.
ಇನ್ನು ಬೆಂಗಳೂರಿನಲ್ಲಿ ನಡೆದ ಬಹುತೇಕ ಆತ್ಮಹತ್ಯೆ ಪ್ರಕರಣಗಳುಗಳನ್ನು ಗಮನಿಸಿದಾಗ ನೇಣು ಬಿಗಿದುಕೊಂಡು ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗಿದೆ. ಒಟ್ಟು ಪ್ರಕರಣಗಳಲ್ಲಿ ಶೇಕಡಾ 86 ಮಂದಿ ಪ್ರಾಣ ಕಳೆದುಕೊಳ್ಳಲು ಈ ವಿಧಾನವನ್ನೇ ಆಯ್ದುಕೊಂಡಿದ್ದಾರೆ. ವಿಷ ಸೇವನೆ ಬಿಲ್ಡಿಂಗ್ ಮೇಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಕೇಸ್ ಗಳು ನಂತರ ಸ್ಥಾನದಲ್ಲಿವೆ.ಇದರ ಜೊತೆಗೆ ರೈಲು ಹಳಿಗಳ ಮೇಲೆ ಜಿಗಿಯುವುದು. ಬೆಂಕಿಯಿಂದ ಸುಟ್ಟು ಕೊಂಡು ಮೃತಪಟ್ಟ ಪ್ರಕರಣಗಳು ಹೆಚ್ಚಿವೆ ಎನ್ನಲಾಗಿದೆ.
ಸಹಾಯವಾಣಿ ಆರಂಭ:
ಆತ್ಮಹತ್ಯೆ ಪ್ರಮಾಣವನ್ನು ಕಡಿಮೆ ಮಾಡಲು ನಿಮಾನ್ಸ್ ವತಿಯಿಂದ ಟೆಲಿ-ಮನಸ್ ಸಹಾಯವಾಣಿಯನ್ನು ಆರಂಭಿಸಲಾಗಿದೆ. ಆತ್ಮಹತ್ಯೆಯ ಯೋಚನೆಗಳು ಅಥವಾ ಮಾನಸಿಕ ಸಂಕಷ್ಟ ಎದುರಿಸುತ್ತಿರುವವರ ಸಹಾಯಕ್ಕಾಗಿ14416//1800-891-4416 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ಆತ್ಮಹತ್ಯೆ ಪ್ರಕರಣಗಳು ದಿನೇ ದಿನೇ ಹೆಚ್ಚಾಗಲು ಕಾರಣವೇನು?
ಆತ್ಮಹತ್ಯೆ ಕೇಸ್ ಗಳ ಅಂಕಿ ಅಂಶಗಳು. |
|
|---|---|
| ವರ್ಷ | ಪ್ರಕರಣಗಳು |
| 2022 | 2370 |
| 2023 | 2313 |
| 2024 | 2403 |
| 2025 | 2300 |
ಕೆಲವು ತಜ್ಞರ ಅಭಿಪ್ರಾಯದಂತೆ ಮಾನಸಿಕ ಆರೋಗ್ಯ ಸಮಸ್ಯೆಗಳು, ಕುಟುಂಬದ ಕಲಹಗಳು, ಆರ್ಥಿಕ ಸಂಕಷ್ಟ, ಸಂಬಂಧಗಳ ಮಧ್ಯೆ ಬಿರುಕು, ಭಾವನಾತ್ಮಕ ಒತ್ತಡಗಳು, ಆತ್ಮಹತ್ಯೆ ಪ್ರಕರಣಗಳ ಹೆಚ್ಚಳಕ್ಕೆ ಬಹು ಮುಖ್ಯ ಕಾರಣಗಳಾಗಿವೆ.
ನಿಮಾನ್ಸ್ ನೀಡಿದ ಮಾಹಿತಿಯಂತೆ ಆತ್ಮಹತ್ಯೆಗೆ ಶರಣಾಗುವ ವ್ಯಕ್ತಿಗಳಲ್ಲಿ ಸುಮಾರು ಮೂರನೇ ಒಂದು ಭಾಗ ಜನರಿಗೆ ಮಾನಸಿಕ ಅಸ್ವಸ್ಥತೆಗಳ ಹಿನ್ನೆಲೆ ಇದೆ. ಉಳಿದವರಲ್ಲಿ ಆರ್ಥಿಕ ಸಮಸ್ಯೆಗಳು, ಸಂಬಂಧಗಳ ಮಧ್ಯೆ ಒಡಕು ಹಾಗು ತೀವ್ರ ಭಾವನಾತ್ಮಕ ಒತ್ತಡ ಪ್ರಮುಖ ಕಾರಣಗಳಾಗಿವೆ.
ಆತ್ಮಹತ್ಯೆ (Suicide) ಕುರಿತು ಮಾಹಿತಿ:
ಆತ್ಮಹತ್ಯೆ ಎಂದರೆ ವ್ಯಕ್ತಿ ತನ್ನ ಜೀವವನ್ನು ತಾನೇ ಕೊನೆಗೊಳಿಸುವ ಕ್ರಿಯೆ. ಇದು ಸಾಮಾನ್ಯವಾಗಿ ಗಂಭೀರ ಮಾನಸಿಕ ಒತ್ತಡ, ನೈರಾಶ್ಯ (ಡಿಪ್ರೆಶನ್), ಆರ್ಥಿಕ ಸಮಸ್ಯೆಗಳು, ಕುಟುಂಬ ಕಲಹ, ವೈಫಲ್ಯ ಭಾವನೆಗಳು ಮುಂತಾದ ಕಾರಣಗಳಿಂದ ಉಂಟಾಗಬಹುದು.
ಆತ್ಮಹತ್ಯೆಗೆ ಕಾರಣಗಳು:
-
ಮಾನಸಿಕ ಒತ್ತಡ ಮತ್ತು ಡಿಪ್ರೆಶನ್
-
ಕುಟುಂಬ ಸಮಸ್ಯೆಗಳು
-
ಪ್ರೀತಿ ವೈಫಲ್ಯ
-
ಆರ್ಥಿಕ ಸಂಕಷ್ಟ
-
ಪರೀಕ್ಷಾ ಒತ್ತಡ
-
ಔಷಧಿ/ಮದ್ಯ ವ್ಯಸನ
ಲಕ್ಷಣಗಳು:
-
ನಿರಂತರ ದುಃಖ ಅಥವಾ ಖಾಲಿತನದ ಭಾವನೆ
-
ಜೀವನದ ಬಗ್ಗೆ ಆಸಕ್ತಿ ಕಳೆದುಕೊಳ್ಳುವುದು
-
“ನನಗೆ ಬದುಕಲು ಇಚ್ಛೆ ಇಲ್ಲ” ಎಂಬ ಮಾತುಗಳು
-
ಒಂಟಿತನವನ್ನು ಹೆಚ್ಚಾಗಿ ಇಷ್ಟಪಡುವುದು
-
ನಿದ್ರೆ ಮತ್ತು ಆಹಾರದ ಅಭ್ಯಾಸದಲ್ಲಿ ಬದಲಾವಣೆ
ತಡೆಗಟ್ಟುವ ಕ್ರಮಗಳು:
-
ಕುಟುಂಬ ಮತ್ತು ಸ್ನೇಹಿತರ ಜೊತೆ ಮಾತನಾಡುವುದು
-
ಮನೋವೈದ್ಯರು ಅಥವಾ ಕೌನ್ಸಿಲರ್ ಸಲಹೆ ಪಡೆಯುವುದು
-
ಯೋಗ, ಧ್ಯಾನ ಮತ್ತು ವ್ಯಾಯಾಮ
-
ಒತ್ತಡವನ್ನು ಹಂಚಿಕೊಳ್ಳುವುದು
-
ಸಹಾಯಕ್ಕಾಗಿ ಹೆಲ್ಪ್‌ಲೈನ್‌ಗೆ ಕರೆಮಾಡುವುದು
ಸಹಾಯ ಬೇಕಾದರೆ:
ಭಾರತದಲ್ಲಿ 24 ಗಂಟೆಗಳ ಮಾನಸಿಕ ಸಹಾಯವಾಣಿ – ಕಿರಣ್ ಹೆಲ್ಪ್‌ಲೈನ್: 1800-599-0019