ತಾಂತ್ರಿಕ ಶಿಕ್ಷಣ ಬಿಡಿಎ, ಬೆಂಗಳೂರು ಜಲಮಂಡಳಿ, ಕೃಷಿ ಮಾರುಕಟ್ಟೆ ಇಲಾಖೆ ಸೇರಿದಂತೆ ಒಟ್ಟು 8 ವಿವಿಧ ಇಲಾಖೆಗಳಲ್ಲಿನ ಕಿರಿಯ ಸಹಾಯಕ ಹಾಗು ಸಮಾನಾಂತರ ಒಟ್ಟು 325 ಹುದ್ದೆಗಳ ನೇಮಕಾತಿಗೆ ಜನವರಿ 25 ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಲಿಖಿತ ಪರೀಕ್ಷೆ ನಡೆಸುತ್ತಿದ್ದು ಬಿಗಿ ಕ್ರಮಗಳನ್ನು ಕೈಗೊಂಡಿದೆ.
ಅಂದು ರಾಜ್ಯದ 12 ಜಿಲ್ಲೆಗಳ (ಬೆಂಗಳೂರು, ಮೈಸೂರು, ತುಮಕೂರು, ಬೆಳಗಾವಿ, ಬಳ್ಳಾರಿ, ಕೊಪ್ಪಳ, ಧಾರವಾಡ, ದಕ್ಷಿಣ ಕನ್ನಡ, ಕಲಬುರ್ಗಿ, ಶಿವಮೊಗ್ಗ, ವಿಜಯಪುರ ಮತ್ತು ದಾವಣಗೆರ) ಒಟ್ಟ 319 ಕೇಂದ್ರಗಳಲ್ಲಿ ನಡೆಯುವ ಪರೀಕ್ಷೆಯನ್ನು 1,33,346 ಅಭ್ಯರ್ಥಿಗಳು ಬರೆಯುತ್ತಿದ್ದಾರೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ಅತ್ಯಂತ ಪಾರದರ್ಶಕ ಹಾಗೂ ಅಕ್ರಮಗಳಿಗೆ ಅವಕಾಶ ಇಲ್ಲದಂತೆ ಪರೀಕ್ಷೆಗಳನ್ನು ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪರೀಕ್ಷೆ ಕೊಠಡಿಯಲ್ಲಿ CCTV ಜೊತೆಗೆ ಜಾಮರ್. ಕೂಡ ಹಾಕಿದ್ದು ಎಲೆಕ್ಟ್ರಾನಿಕ್ ವಸ್ತುಗಳ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ.
ಮುಖಚಹರೆ ಪತ್ತೆ ತಂತ್ರಜ್ಞಾನ ಬಳಸಿಯೇ ಅಭ್ಯರ್ಥಿಗಳ ಪರೀಕ್ಷಾ ಕೇಂದ್ರದ ಒಳಗೆ ಬಿಡಲಾಗುತ್ತದೆ. ವಸ್ತ್ರ ಸಂಹಿತೆ ಜಾರಿಯಲ್ಲಿದ್ದು ಅಭ್ಯರ್ಥಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಹೇಳಿದ್ದಾರೆ.
KEA (ಕರ್ನಾಟಕ ಪರೀಕ್ಷಾ ಪ್ರಾಧಿಕಾರ) – ಮಾಹಿತಿ :
KEA (Karnataka Examinations Authority) ಎನ್ನುವುದು ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಸ್ವಾಯತ್ತ ಸಂಸ್ಥೆಯಾಗಿದೆ.
ಸ್ಥಾಪನೆ :
- ಸ್ಥಾಪಿತ ವರ್ಷ: 2006
- ಮುಖ್ಯ ಕಚೇರಿ: ಬೆಂಗಳೂರು, ಕರ್ನಾಟಕ
KEA ಯ ಮುಖ್ಯ ಕಾರ್ಯಗಳು :
- ರಾಜ್ಯ ಮಟ್ಟದ ವಿವಿಧ ಪ್ರವೇಶ ಪರೀಕ್ಷೆಗಳನ್ನು ನಡೆಸುವುದು
- ವೃತ್ತಿಪರ ಕೋರ್ಸ್ಗಳಿಗೆ ಆನ್ಲೈನ್ ಕೌನ್ಸೆಲಿಂಗ್ ಮತ್ತು ಸೀಟು ಹಂಚಿಕೆ
- ಅರ್ಹ ಅಭ್ಯರ್ಥಿಗಳ ಮೆರಿಟ್ ಪಟ್ಟಿ ಪ್ರಕಟಣೆ
KEA ನಡೆಸುವ ಪ್ರಮುಖ ಪ್ರವೇಶಗಳು :
- KCET – ಇಂಜಿನಿಯರಿಂಗ್, ಕೃಷಿ, ಫಾರ್ಮಸಿ ಮೊದಲಾದ ಕೋರ್ಸ್ಗಳು
- NEET ಆಧಾರಿತ ಸೀಟು ಹಂಚಿಕೆ – MBBS, BDS, AYUSH
- PG ವೈದ್ಯಕೀಯ ಮತ್ತು ಡೆಂಟಲ್ ಪ್ರವೇಶ
- B.Ed, D.Ed, MBA, MCA ಪ್ರವೇಶ ಪ್ರಕ್ರಿಯೆಗಳು
- ಸರ್ಕಾರದ ವಿವಿಧ ವೃತ್ತಿಪರ ಕೋರ್ಸ್ಗಳ ಪ್ರವೇಶ
KEA ಯ ಮಹತ್ವ :
- ಪ್ರವೇಶ ಪ್ರಕ್ರಿಯೆಯಲ್ಲಿ ಪಾರದರ್ಶಕತೆ
- ಮೆರಿಟ್ ಆಧಾರಿತ ಸೀಟು ಹಂಚಿಕೆ
- ವಿದ್ಯಾರ್ಥಿಗಳಿಗೆ ಸಮಾನ ಅವಕಾಶ
ಅಧಿಕೃತ ವೆಬ್ಸೈಟ್ :
- https://kea.kar.nic.in