ಒಬ್ಬ ಹುಡುಗ ತಾನು ಪ್ರೀತಿಸಿದ ಹುಡುಗಿಗಾಗಿ ತನ್ನ ಲಕ್ಷ ಲಕ್ಷ ಸಂಬಳದ ಕೆಲಸ ಬಿಟ್ಟು ಇಂದು ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಯಾರು ಎಂದು ಕೆಳಗೆ ಓದಿ ತಿಳಿಯಿರಿ.
ಇವರು ಇಂದು ತನ್ನ ಸಾಧನೆಯ ಮೂಲಕ ಯುವ ಸಮುದಾಯಕ್ಕೆ ಒಂದು ಸ್ಪೂರ್ತಿಯಾಗಿದ್ದಾರೆ. ಈತ ರಾಜಸ್ಥಾನ ರಾಜ್ಯದ ಜೈಪುರ ಮೂಲದ ಯುವಕ ಈತನ ಹೆಸರು ಕಾನಿಷ್ಕ್ ಕಟಾರಿಯಾ ಇವರ ತಂದೆ ಕೂಡ ಐಎಎಸ್ ಅಧಿಕಾರಿ ಎಂದು ತಿಳಿದು ಬಂದಿದೆ.
ಈತ ಮೂಲತ ರಾಜಸ್ಥಾನ ಮೂಲದವರು. ಇವರು ಐಐಟಿ ಬಾಂಬೆ ಇಂದ ಕಂಪ್ಯೂಟರ್ ಸೈನ್ಸ್ನಲ್ಲಿ ಬಿ.ಟೆಕ್ ಪದವಿಯನ್ನ ಪಡೆದಿದ್ದಾರೆ. ಇವರು ವಿದ್ಯಾಭ್ಯಾಸ ಮಾಡುವ ಸಮಯದಲ್ಲಿ ಒಂದು ಹುಡುಗಿಯನ್ನ ಪ್ರೀತಿಸಿದರು. ಆದರೆ ತನ್ನ ಪ್ರೇಯಸಿಗೆ ತನ್ನ ಪ್ರಿಯಕರ ಐಎಎಸ್ ಅಧಿಕಾರಿ ಆಗಬೇಕೆಂಬ ಕನಸು ಕಂಡಿದ್ದರು. ನಂತರ ಕನಿಷ್ಕ ಕಟಾರಿಯಾ ಬಿ.ಟೆಕ್ ನಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದರು.
ನಂತರ ಕನಿಷ್ಕ ಕಟಾರಿಯಾರವರು ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ಕಂಪನಿಯಲ್ಲಿ ಡೇಟಾ ಸೈಂಟಿಸ್ಟ್ ಆಗಿ ಕೆಲಸಕ್ಕೆ ಸೇರುತ್ತಾರೆ. ನಂತರ ನಮ್ಮ ಉದ್ಯಾನನಗರಿ ಬೆಂಗಳೂರಿನಲ್ಲಿ ಕ್ವಿಪ್ ಲಮ್ ಸಾಫ್ಟ್ವೇರ್ ಲ್ಯಾಬ್ಸ್ ಕಂಪನಿಯಲ್ಲಿ ಡೇಟಾ ಸೈಂಟಿಸ್ಟ್ ಆಗಿ ಕೆಲಸ ಮಾಡುತ್ತಾರೆ. ಮತ್ತು ಎರಡು ರೋಡ್ಸ್ ಟೆಕ್ ಎಂಬ ಕಂಪನಿಯಲ್ಲಿ ಸಾಫ್ಟ್ವೇರ್ ಡೆವಲಪ್ಮೆಂಟ್ ಆಗಿಯೂ ಕೂಡ ಕೆಲಸ ಮಾಡುತ್ತಾರೆ.
ಇವರಿಗೆ ಲಕ್ಷ ಲಕ್ಷ ಸಂಬಳ ಬರುತ್ತಿದ್ದರೂ ಕೂಡ ಪ್ರೇಯಸಿಯ ಕನಸು ನೆನಪಾಗುತ್ತದೆ. ಹಾಗಾಗಿ ಪ್ರೇಯಸಿಯ ಕನಸನ್ನು ನನಸು ಮಾಡಲು ಮನಸ್ಸು ಮಾಡುತ್ತಾರೆ. ಈ ಡೇಟಾ ಸೈಂಟಿಸ್ಟ್ ಕೆಲಸವನ್ನ ತೊರೆದು ಮೊಟ್ಟ ಮೊದಲ ಬಾರಿಗೆ 2018 ರಲ್ಲಿ ಯುಪಿಎಸ್ಸಿ ಕೇಂದ್ರ ಲೋಕಸೇವಾ ಆಯೋಗದಲ್ಲಿ ಪರೀಕ್ಷೆ ಬರೆಯಲು ನಿರ್ಧರಿಸುತ್ತಾರೆ.
ನಂತರ 2018 ರ ಕೇಂದ್ರ ಲೋಕಸೇವಾ ಆಯೋಗ ಪರೀಕ್ಷೆಯನ್ನ ತೆಗೆದುಕೊಂಡು ಮೊಟ್ಟ ಮೊದಲ ಪ್ರಯತ್ನದಲ್ಲೇ ದೇಶಕ್ಕೆ 1st ರಾಂಕ್ ಬರುವ ಮೂಲಕ ತನ್ನ ಪ್ರೇಯಸಿಯ ಕನಸನ್ನ ನನಸು ಮಾಡಿ ಪ್ರತಿ ಯುವಕ ಯುವತಿಯರಿಗೆ ಸ್ಪೂರ್ತಿಯಾಗುತ್ತಾರೆ.
ಯುಪಿಎಸ್ಸಿ ಫಲಿತಾಂಶದ ನಂತರ ಕನಿಷ್ಕ ಕಟಾರಿಯಾ ಅವರ ಮಾತು :
ದೇಶಕ್ಕೆ ಮೊದಲ ರಾಂಕ್ ಪಡೆದ ಬಗ್ಗೆ ಸುದ್ದಿ ಸಂಸ್ಥೆ ಜೊತೆ ಸಂದರ್ಭದಲ್ಲಿ ತಿಳಿಸಿದ ಕಾನಿಷ್ಕ ಕಟಾರಿಯ ಇದು ನನಗೆ ಅತ್ಯಂತ ಆಶ್ಚರ್ಯಕರ ಕ್ಷಣ. ನಾನು ಎಂದಿಗೂ ಇಡೀ ದೇಶಕ್ಕೆ ಟಾಪರ್ ಆಗಿ ಹೊರಹೊಮ್ಮುವ ಬಗ್ಗೆ ನಿರೀಕ್ಷೆ ಮಾಡಿರಲಿಲ್ಲ ಎಂದು ಕಾನಿಷ್ಕ್ ಕಟಾರಿಯಾ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ ಯುಪಿಎಸ್ಸಿ ಅಧ್ಯಯನಕ್ಕೆ ನೆರವಾದ ಹಾಗೂ ನೈತಿಕ ಬೆಂಬಲ ನೀಡಿದ ಪೋಷಕರು, ಸಹೋದರಿ ಹಾಗೂ ಗರ್ಲ್ಫ್ರೆಂಡ್ಗೆ ಕಟಾರಿಯಾ ಧನ್ಯವಾದ ತಿಳಿಸಿದ್ದಾರೆ.
ಪ್ರಸ್ತುತ ಕನಿಷ್ಕ ಕಟಾರಿಯಾ ಅವರು ತಮ್ಮ ಸೇವೆ ಸಲ್ಲಿಸುತ್ತಿರುವುದು :
ಪ್ರಸ್ತುತ ಕನಿಷ್ಕ ಕಟಾರಿಯಾ ಅವರು ಮೂಲತ ರಾಜಸ್ತಾನದವರಾಗಿದ್ದು, ಇವರು ರಾಜಸ್ಥಾನ ಕೇಡರ್ ಆಯ್ಕೆ ಮಾಡಿಕೊಂಡಿದ್ದು, ರಾಜಸ್ತಾನದ ಭಾರತ್ ಪುರ್ ಡೆವಲಪ್ಮೆಂಟ್ ಅಥಾರಿಟಿ ಸಂಸ್ಥೆಯಲ್ಲಿ ಜಾಯಿಂಟ್ ಸೆಕ್ರೆಟರಿ(IAS) ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕನಿಷ್ಕಾ ಕಟಾರಿಯಾ IAS ಅಧಿಕಾರಿ ಬಗ್ಗೆ ಮಾಹಿತಿ :
ಕನಿಷ್ಕಾ ಕಟಾರಿಯಾ ಅವರು ಭಾರತದ ಅತ್ಯಂತ ಜನಪ್ರಿಯ ಹಾಗೂ ಪ್ರತಿಭಾವಂತ IAS ಅಧಿಕಾರಿಗಳಲ್ಲಿ ಒಬ್ಬರು. ಅವರು UPSC ಸಿವಿಲ್ ಸರ್ವಿಸ್ ಪರೀಕ್ಷೆ 2018ರಲ್ಲಿ ಪ್ರಥಮ ಸ್ಥಾನ (All India Rank – 1) ಪಡೆದು ದೇಶದ ಗಮನ ಸೆಳೆದರು.
ಸಂಕ್ಷಿಪ್ತ ವಿವರ :
- ಪೂರ್ಣ ಹೆಸರು: ಕನಿಷ್ಕಾ ಕಟಾರಿಯಾ
- ಜನನ ವರ್ಷ: 1996
- ಸ್ವಗ್ರಾಮ: ಜೈಪುರ, ರಾಜಸ್ಥಾನ
- UPSC ರ್ಯಾಂಕ್: AIR 1 (2018)
- ಕೇಡರ್: ರಾಜಸ್ಥಾನ
- ಸೇವೆ: ಭಾರತೀಯ ಆಡಳಿತ ಸೇವೆ (IAS)
ಶೈಕ್ಷಣಿಕ ಹಿನ್ನೆಲೆ :
- ಕನಿಷ್ಕಾ ಕಟಾರಿಯಾ ಅವರು IIT ಬಾಂಬೆಯಿಂದ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ನಲ್ಲಿ ಪದವಿ ಪಡೆದಿದ್ದಾರೆ.
- IIT ಬಾಂಬೆ ಮುಗಿಸಿದ ಬಳಿಕ UPSC ಪರೀಕ್ಷೆಗೆ ಸಿದ್ಧತೆ ಆರಂಭಿಸಿದರು.
ಕುಟುಂಬ ಹಿನ್ನೆಲೆ :
- ಅವರ ತಂದೆ ಕೃಷ್ಣ ಕಟಾರಿಯಾ ಅವರು ಕೂಡ IAS ಅಧಿಕಾರಿ ಆಗಿದ್ದರು (ಇದೀಗ ನಿವೃತ್ತ).
- ಕುಟುಂಬದಿಂದಲೇ ಆಡಳಿತ ಸೇವೆಯ ಪ್ರೇರಣೆ ಪಡೆದಿದ್ದಾರೆ.
UPSC ಸಾಧನೆ :
- ಮೊದಲ ಪ್ರಯತ್ನದಲ್ಲೇ UPSC ಪರೀಕ್ಷೆ ಉತ್ತೀರ್ಣರಾಗಿ ದೇಶದಲ್ಲೇ ಪ್ರಥಮ ಸ್ಥಾನ ಪಡೆದಿರುವುದು ಅವರ ಪ್ರಮುಖ ಸಾಧನೆ.
- ಕಠಿಣ ಪರಿಶ್ರಮ, ಸ್ಪಷ್ಟ ಗುರಿ ಮತ್ತು ಸತತ ಅಧ್ಯಯನವೇ ಅವರ ಯಶಸ್ಸಿನ ಗುಟ್ಟು.
ವಿಶೇಷತೆ :
- ಸರಳ ಜೀವನಶೈಲಿ
- ಯುವಕರಿಗೆ ಪ್ರೇರಣೆಯಾದ ವ್ಯಕ್ತಿತ್ವ
- ಶಿಸ್ತು, ನಿಷ್ಠೆ ಮತ್ತು ಸೇವಾ ಮನೋಭಾವ.