Telegram Join My Telegram WhatsApp Join My WhatsApp

ಟ್ರoಪ್ ಗೆ ಕೊನೆಗೂ ಸಿಕ್ತು ನೊಬೆಲ್.

ಭಾರತ- ಪಾಕಿಸ್ತಾನದ್ದು ಸೇರಿ ವಿಶ್ವದ 8 ಯುದ್ದಗಳನ್ನು ನಿಲ್ಲಿಸಿದ್ದರೂ ತಮಗೆ ನೊಬೆಲ್ ಶಾಂತಿ ಪ್ರಶಸ್ತಿ ಕೊಟ್ಟಿಲ್ಲ ಎಂದು ನಿರಂತರವಾಗಿ ಕೊರಗುತ್ತಿದ್ದ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಾಂಪ್ ಅವರಿಗೆ ಕೊನೆಗೂ ನೊಬೆಲ್ ಸಿಕ್ಕಿದೆ, ಆದರೆ ಇದು ನಾರ್ವೆಯ ನೊಬೆಲ್ ಪ್ರಶಸ್ತಿ ಕೊಟ್ಟಿದ್ದಲ್ಲ, ಆ ಸಮಿತಿಯಿಂದ ಪ್ರಶಸ್ತಿ ಪಡೆದುಕೊಂಡವರು ಕೊಟ್ಟಿದ್ದು.

ಪ್ರಜಾಪ್ರಭುತ್ವ ಪರವಾದ ಹೋರಾಟಕ್ಕಾಗಿ 2025 ನೇ ಸಾಲಿನಲ್ಲಿ ತಮಗೆ ದೊರೆತ ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿಯನ್ನು ವೆನಿಜುವೆಲಾದ ಪ್ರತಿಪಕ್ಷ ನಾಯಕಿ “ಮರಿಯಾ ಕೊರಿನಾ ಮಚಾಡೋ” ಅವರು ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಅಮೇರಿಕಾ ಅಧ್ಯಕ್ಷ ಟ್ರಾಂಪ್ ಗೆ ಹಸ್ತಾಂತರಿಸಿದ್ದಾರೆ.

ನೊಬೆಲ್ ಪುರಸ್ಕಾರ ಹಂಚಿಕೊಳ್ಳುವಂತಿಲ್ಲ ನೊಬೆಲ್ ಪ್ರಶಸ್ತಿ ಸಮಿತಿ :

ನೊಬೆಲ್ ಪ್ರಶಸ್ತಿಯನ್ನು ಇನ್ನೊಬ್ಬರಿಗೆ ವರ್ಗಾವಣೆ ಮಾಡುವುದಾಗಲಿ, ಹಂಚಿಕೊಳ್ಳುವುದಾಗಲಿ ಸಾಧ್ಯವಿಲ್ಲ, ನೊಬೆಲ್ ಗೌರವವು ಯಾವತ್ತಿಗೂ ಮೂಲ ವ್ಯಕ್ತಿಯ ಜತೆಗೆ ಶಾಶ್ವತವಾಗಿ ಇರಲಿದೆ ಎಂದು ನಾರ್ವೆಯ ನೊಬೆಲ್ ಸವಿತಿ ಪ್ರತಿಕ್ರಿಯಿಸಿದೆ. ನೊಬೆಲ್ ಪ್ರಶಸ್ತಿ ಫಲಕವನ್ನು ಇನ್ನೊಬ್ಬರಿಗೆ ಹಸ್ತಾಂತರಿಸಬವುದು, ಈ ಹಿಂದೆ ನೊಬೆಲ್ ಪ್ರಶಸ್ತಿ ಫಲಕವನ್ನು ಹರಾಜು ಹಾಕಿದ್ದು ಇದೆ ಎಂದು ರಷ್ಯಾ ಪತ್ರಕರ್ತೆ “ಡೆಮಿಟ್ರಿ ಮುರಾಟೊವ್” ಅವರ ಪ್ರಕರಣವನ್ನು ಉಲ್ಲೇಖಿಸಿ ಹೇಳಿದೆ.

ನೋಬೆಲ್ ಪ್ರಶಸ್ತಿ ಬಗ್ಗೆ ಮಾಹಿತಿ :

ನೋಬೆಲ್ ಪ್ರಶಸ್ತಿ ವಿಶ್ವದ ಅತ್ಯಂತ ಪ್ರತಿಷ್ಠಿತ ಅಂತರರಾಷ್ಟ್ರೀಯ ಪ್ರಶಸ್ತಿಗಳಲ್ಲೊಂದು. ಈ ಪ್ರಶಸ್ತಿಯನ್ನು ಪ್ರತಿ ವರ್ಷ ಮಾನವಕುಲದ ಹಿತಕ್ಕಾಗಿ ಅತ್ಯುತ್ತಮ ಕೊಡುಗೆ ನೀಡಿದ ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ನೀಡಲಾಗುತ್ತದೆ.

ಸ್ಥಾಪನೆ :

  • ನೋಬೆಲ್ ಪ್ರಶಸ್ತಿಯನ್ನು ಅಲ್ಫ್ರೆಡ್ ನೋಬೆಲ್ ಅವರು ಸ್ಥಾಪಿಸಿದರು.

  • ಅವರು ಸ್ವೀಡನ್ ದೇಶದ ವಿಜ್ಞಾನಿ, ಆವಿಷ್ಕಾರಕ ಹಾಗೂ ಡೈನಮೈಟ್‌ನ ಆವಿಷ್ಕಾರಕ.

  • 1895ರಲ್ಲಿ ತಮ್ಮ ವಿಲ್‌ನಲ್ಲಿ ನೋಬೆಲ್ ಪ್ರಶಸ್ತಿಯನ್ನು ಸ್ಥಾಪಿಸುವಂತೆ ಸೂಚಿಸಿದರು.

  • ಮೊದಲ ನೋಬೆಲ್ ಪ್ರಶಸ್ತಿಯನ್ನು 1901ರಲ್ಲಿ ನೀಡಲಾಯಿತು.

ನೋಬೆಲ್ ಪ್ರಶಸ್ತಿ ನೀಡುವ ಕ್ಷೇತ್ರಗಳು :

ನೋಬೆಲ್ ಪ್ರಶಸ್ತಿಯನ್ನು ಒಟ್ಟು 6 ಕ್ಷೇತ್ರಗಳಲ್ಲಿ ನೀಡಲಾಗುತ್ತದೆ:

  1. ಭೌತಶಾಸ್ತ್ರ (Physics)

  2. ರಸಾಯನಶಾಸ್ತ್ರ (Chemistry)

  3. ವೈದ್ಯಕೀಯ ಅಥವಾ ಶರೀರಶಾಸ್ತ್ರ (Medicine / Physiology)

  4. ಸಾಹಿತ್ಯ (Literature)

  5. ಶಾಂತಿ (Peace)

  6. ಆರ್ಥಿಕಶಾಸ್ತ್ರ (Economic Sciences) – ಇದನ್ನು 1968ರಲ್ಲಿ ಸೇರಿಸಲಾಯಿತು

ಪ್ರಶಸ್ತಿ ನೀಡುವ ಸಂಸ್ಥೆಗಳು :

  • ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ – ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್

  • ವೈದ್ಯಕೀಯ – ಕಾರೋಲಿನ್ಸ್ಕಾ ಇನ್ಸ್ಟಿಟ್ಯೂಟ್

  • ಸಾಹಿತ್ಯ – ಸ್ವೀಡಿಷ್ ಅಕಾಡೆಮಿ

  • ಶಾಂತಿ – ನಾರ್ವೇದ ನೋಬೆಲ್ ಸಮಿತಿ

  • ಆರ್ಥಿಕಶಾಸ್ತ್ರ – ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್

ಪ್ರಶಸ್ತಿಯ ಭಾಗಗಳು :

ನೋಬೆಲ್ ಪ್ರಶಸ್ತಿಯೊಂದಿಗೆ ನೀಡಲಾಗುವವು:

  • ಚಿನ್ನದ ಪದಕ

  • ಪ್ರಮಾಣಪತ್ರ

  • ನಗದು ಬಹುಮಾನ

ಪ್ರಶಸ್ತಿ ಪ್ರದಾನ :
  • ಪ್ರಶಸ್ತಿಯನ್ನು ಪ್ರತಿ ವರ್ಷ ಡಿಸೆಂಬರ್ 10ರಂದು (ಅಲ್ಫ್ರೆಡ್ ನೋಬೆಲ್ ಅವರ ಮರಣದ ದಿನ) ಪ್ರದಾನ ಮಾಡಲಾಗುತ್ತದೆ.

  • ಶಾಂತಿ ಪ್ರಶಸ್ತಿ ನಾರ್ವೇಯ ಓಸ್ಲೋದಲ್ಲಿ, ಉಳಿದ ಪ್ರಶಸ್ತಿಗಳು ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ನೀಡಲಾಗುತ್ತವೆ.

ಭಾರತ ಮತ್ತು ನೋಬೆಲ್ ಪ್ರಶಸ್ತಿ

ಭಾರತದಿಂದ ನೋಬೆಲ್ ಪ್ರಶಸ್ತಿ ಪಡೆದ ಪ್ರಮುಖರು:

  • ರವೀಂದ್ರನಾಥ ಟಾಗೋರ್ – ಸಾಹಿತ್ಯ (1913)

  • ಸಿ.ವಿ.ರಾಮನ್ – ಭೌತಶಾಸ್ತ್ರ (1930)

  • ಮದರ್ ತೆರೆಸಾ – ಶಾಂತಿ (1979)

  • ಅಮರ್ತ್ಯ ಸೇನ್ – ಆರ್ಥಿಕಶಾಸ್ತ್ರ (1998)

  • ಕೈಲಾಶ್ ಸತ್ಯಾರ್ಥಿ – ಶಾಂತಿ (2014)