ಬೆಂಗಳೂರಿನ ಟ್ರಾಫಿಕ್ ವಿಶ್ವದಲ್ಲೇ ಎರಡನೇ ಸ್ಥಾನ ಹಾಗೂ ವಿಶ್ವದಲ್ಲೇ ಮೊದಲ ಸ್ಥಾನ ಗಳಿಸಿದೆ.ಈ ಮೂಲಕ 2025 ರಲ್ಲಿ ಮೆಕ್ಸಿಕೋ ನಗರದ ನಂತರ ಸಿಲಿಕಾನ್ ಸಿಟಿ ಬೆಂಗಳೂರು ಅತ್ಯಂತ ಸಂಚಾರ ದಟ್ಟಣೆಯ ನಗರವಾಗಿ ಹೊರ ಹೊಮ್ಮಿದೆ.
ಟಾಮ್ ಟಾಮ್ ಟ್ರಾಫಿಕ್ ಇಂಡೆಕ್ಸ್ ಮಾಹಿತಿ ಪ್ರಕಾರ 2023 ರಲ್ಲಿ ಬೆಂಗಳೂರು ಆರನೇ ಅತ್ಯಂತ ಸಂಚಾರ ದಟ್ಟಣೆಯ ನಗರವಾಗಿತ್ತು. 2024 ರಲ್ಲಿ ಮೂರನೇ ಸ್ಥಾನ ಪಡೆದಿತ್ತು. 2025 ರ ವೇಳೆಗೆ ಎರಡನೇ ಸ್ಥಾನಕ್ಕೆ ಬಂದಿದ್ದು, 2026 ರ ಅಂತ್ಯದ ವೇಳೆಗೆ ಮೊದಲ ಸ್ಥಾನ ಗಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ.
2025 ರಲ್ಲಿ ಬೆಂಗಳೂರಿನ ಜನದಟ್ಟಣೆಯ ಸಮಯದಲ್ಲಿ ಸರಾಸರಿ ವೇಗ ಗಂಟೆಗೆ 13.9 ಕಿಲೋ ಮೀಟರ್ ಆಗಿದ್ದು.ಇದು 2024ಕ್ಕೆ ಹೋಲಿಸಿದರೆ ಒಂದು ಕಿಲೋ ಮೀಟರ್ ನಿಧಾನವಾಗಿದೆ ಎಂದು ವರದಿ ಹೇಳುತ್ತದೆ.
ವರದಿ ಪ್ರಕಾರ ಟ್ರಾಫಿಕ್ ನಲ್ಲಿ ಕಳೆಯುವ ಸಮಯವನ್ನು ಒಂದು ವರ್ಷಕ್ಕೆ ಲೆಕ್ಕ ಹಾಕಿದಾಗ ದಿನಗಳಲ್ಲಿ ಪಿಂಕ್ ಸಮಯದಲ್ಲಿ ದಿನಕ್ಕೆ ಎರಡು ಬಾರಿ 10 ಕಿಲೋಮೀಟರ್ ಪ್ರಯಾಣ ಮಾಡಲು ಕಳೆಯುವ ಸರಾಸರಿ ಸಮಯವನ್ನು ಉಲ್ಲೇಖಿಸಿ ಬೆಂಗಳೂರಿನ ಜನ ಟ್ರಾಫಿಕ್ನಲ್ಲಿಯೇ. 168 ಗಂಟೆ ಕಳೆಯುತ್ತಾರೆ.ಇದು 7 ದಿನ 40 ನಿಮಿಷಗಳಿಗೆ ಸಮನಾಗಿದೆ. 2024ಕ್ಕೆ ಹೋಲಿಸಿದರೆ 12:46 ನಿಮಿಷ ಜಾಸ್ತಿ ಆಗಿದೆ.
ದಟ್ಟಣೆಯ ವಿಷಯದಲ್ಲಿ ಬೆಂಗಳೂರಿನ ನಂತರ ಐರ್ಲೆಂಡ್ ಡಬ್ಲಿನ್ ನಗರವಿದೆ. ಟಾಪ್ ಇಪ್ಪತ್ತರ ಜನದಟ್ಟನೆಯ ನಗರಗಳ ಪಟ್ಟಿಯಲ್ಲಿರುವ ಇತರ ಭಾರತೀಯ ನಗರಗಳು ಪುಣೆ, ಐದನೇ ಸ್ಥಾನ ಮತ್ತು ಮುಂಬೈ ಹದಿನೆಂಟನೆ ಸ್ಥಾನ.ಪುಣೆಯಲ್ಲಿ ಸರಾಸರಿ ವೇಗ ಗಂಟೆಗೆ 18 ಕಿಲೋ ಮೀಟರ್ ಆಗಿದ್ದರೆ, ಮುಂಬೈ ಗಂಟೆಗೆ 20.8 ಕಿಲೋಮೀಟರ್ ವೇಗದಲ್ಲಿ ಸ್ವಲ್ಪ ವೇಗವಾಗಿ ಚಲಿಸಿತು.
ವರದಿಯ ಪ್ರಕಾರ 2025 ರಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ವಾಹನ ಸವಾರರು ಹೆಚ್ಚು ಪರದಾಡಿದ ದಿನ ಅಂದರೆ ಮೇ 17 ಶನಿವಾರ ಆಗಿದ್ದು. ಸರಾಸರಿ ಸಂಚಾರ ದಟ್ಟಣೆಯ ಮಟ್ಟವು ಶೇಕಡಾ 101 ರಷ್ಟು ತಲುಪಿದ್ದು, ಚಾಲಕರು ಕೇವಲ 2.5 ಕಿಲೋಮೀಟರ್ ಕ್ರಮಿಸಲು 15 ನಿಮಿಷಗಳನ್ನು ತೆಗೆದುಕೊಂಡರು. ಆ ದಿನ ಮಳೆ ಮರಗಳು, ಮೂಲಸೌಕರ್ಯಗಳು ಮುರಿದು ಹೋಗಿರುವುದು ಸಂಚಾರ ದಟ್ಟಣೆಗೆ ಕಾರಣಗಳಾಗಿವೆ.
ದಿನನಿತ್ಯ ನೂರಾರು ಹೊಸ ವಾಹನಗಳು ರಸ್ತೆಗೆ ಕಾಡುತ್ತಿರುವುದು ರಸ್ತೆಗಳ ಅಗಲೀಕರಣ ಆಗದಿರುವುದು ಮತ್ತು ಸ್ಥಗಿತಗೊಂಡ ಕಾಮಗಾರಿ ಸೇರಿ ವಿವಿಧನಿರತ ಸಂಚಾರ ದಟ್ಟಣೆಗೆ ಕಾರಣವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರಿನ ಸಂಚಾರ ಸ್ಥಿತಿ :
ಬೆಂಗಳೂರು ಭಾರತದಲ್ಲೇ ಅತ್ಯಧಿಕ ವಾಹನಗಳಿರುವ ನಗರಗಳಲ್ಲಿ ಒಂದಾಗಿದೆ. ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಸಂಚಾರ ದಟ್ಟಣೆ (ಟ್ರಾಫಿಕ್ ಜಾಂ) ದೊಡ್ಡ ಸಮಸ್ಯೆಯಾಗುತ್ತಿದೆ.
ಸಂಚಾರ ದಟ್ಟಣೆಗೆ ಮುಖ್ಯ ಕಾರಣಗಳು :
- ವಾಹನಗಳ ಸಂಖ್ಯೆ ಅಧಿಕವಾಗಿರುವುದು
- ಕಿರಿದಾದ ರಸ್ತೆ ವ್ಯವಸ್ಥೆ
- ಕಚೇರಿ ಸಮಯಗಳಲ್ಲಿ (ಬೆಳಿಗ್ಗೆ 8–11, ಸಂಜೆ 5–9) ಹೆಚ್ಚಿನ ಒತ್ತಡ
- ಮೆಟ್ರೋ/ರಸ್ತೆ ಕಾಮಗಾರಿಗಳು
- ನಿಯಮ ಉಲ್ಲಂಘನೆ (ಸಿಗ್ನಲ್ ಜಂಪ್, ತಪ್ಪು ಪಾರ್ಕಿಂಗ್)
ಹೆಚ್ಚು ಸಂಚಾರ ಇರುವ ಪ್ರದೇಶಗಳು :
- ಸಿಲ್ಕ್ ಬೋರ್ಡ್ ಜಂಕ್ಷನ್
- ಹೆಬ್ಬಾಳ ಫ್ಲೈಓವರ್
- ವೈಟ್ಫೀಲ್ಡ್
- ಎಲೆಕ್ಟ್ರಾನಿಕ್ ಸಿಟಿ
- ಮಾರತಹಳ್ಳಿ
- ಯಲಹಂಕ
ಸಂಚಾರ ಕಡಿಮೆ ಮಾಡಲು ಕೈಗೊಳ್ಳುತ್ತಿರುವ ಕ್ರಮಗಳು :
- ನಮ್ಮ ಮೆಟ್ರೋ (Namma Metro) ವಿಸ್ತರಣೆ
- ಸಿಗ್ನಲ್ ವ್ಯವಸ್ಥೆ ಸುಧಾರಣೆ
- ಫ್ಲೈಓವರ್ ಮತ್ತು ಅಂಡರ್ಪಾಸ್ ನಿರ್ಮಾಣ
- ಒನ್ವೇ ರಸ್ತೆ ವ್ಯವಸ್ಥೆ
- ಟ್ರಾಫಿಕ್ ಪೋಲೀಸ್ ತಂತ್ರಜ್ಞಾನ ಬಳಕೆ (CCTV, ಇ-ಚಲನ್)
ಸಂಚಾರ ಮಾಹಿತಿ ಪಡೆಯುವ ಮಾರ್ಗಗಳು :
- ಬೆಂಗಳೂರು ಟ್ರಾಫಿಕ್ ಪೋಲೀಸ್ X (ಟ್ವಿಟರ್) ಖಾತೆ
- ಗೂಗಲ್ ಮ್ಯಾಪ್ಸ್
- ಟ್ರಾಫಿಕ್ ಅಪ್ಡೇಟ್ ಆ್ಯಪ್ಗಳು
- FM ರೇಡಿಯೋ ಸಂಚಾರ ಘೋಷಣೆಗಳು
ಸಾರ್ವಜನಿಕರಿಗೆ ಸಲಹೆಗಳು :
- ಸಾರ್ವಜನಿಕ ಸಾರಿಗೆ ಬಳಸುವುದು
- ಕಾರ್ ಪೂಲಿಂಗ್ ಮಾಡುವುದು
- ಸಂಚಾರ ನಿಯಮಗಳನ್ನು ಪಾಲಿಸುವುದು
- ಪೀಕ್ ಅವರ್ಗಳಲ್ಲಿ ಪ್ರಯಾಣ ತಪ್ಪಿಸುವುದು