ಭಾರತದ ಐಟಿ ದಿಗ್ಗಜ ಸಂಸ್ಥೆ ಇನ್ಫೋಸಿಸ್ ಸಂಸ್ಥೆಯು 2027ನೇ ಹಣಕಾಸು ವರ್ಷದಲ್ಲಿ 20 ಸಾವಿರ ಹೊಸ ಪದವೀಧರರನ್ನು ನೇಮಕ ಮಾಡಿಕೊಳ್ಳುವುದಾಗಿ ಸಿಇಒ ಸಲೀಲ್ ಪರೇಖ್ ತಿಳಿಸಿದ್ದಾರೆ.
ಸ್ವಿಟ್ಜರ್ಲೆಂಡ್ ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಸಲೀಲ್ ಪರೇಖ್ 2026 ಎಪ್ರಿಲ್ 1 ರಿಂದ 2027 ಮಾರ್ಚ್ 31 ರವರೆಗಿನ ಇನ್ಫೋಸಿಸ್ ವಿಶೇಷ ಡ್ರೈವ್ ನಡೆಸುವ ಮೂಲಕ 20,000 ಹೊಸಬರನ್ನು ನೇಮಿಸಿಕೊಳ್ಳಲಿದೆ ಎಂದು ಘೋಷಿಸಿದ್ದಾರೆ.
ಇನ್ಫೋಸಿಸ್ ಪ್ರಸಕ್ತ ಸಾಲಿನ ಮೊದಲ ಮೂರು ತ್ರೈಮಾಸಿಕಗಳಲ್ಲಿ 18000 ಪದವೀಧರರನ್ನು ನೇಮಿಸಿಕೊಂಡಿದ್ದು. ಕಳೆದ ತ್ರೈಮಾಸಿಕದಲ್ಲಿ ಒಟ್ಟು ಉದ್ಯೋಗಿಗಳ ಸಂಖ್ಯೆ ಯಲ್ಲಿ.ಐದು ಸಾವಿರಕ್ಕೂ ಹೆಚ್ಚು ಹೆಚ್ಚಳವಾಗಿದೆ.
ಪ್ರಸಕ್ತ ಆರ್ಥಿಕ ವರ್ಷದ ಅತ್ಯಂತ ವೇಳೆಗೆ ಒಟ್ಟು 20,000 ನೇಮಕಾತಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ. ತೊಡಗಿದ. AI ಇಂದ ಉದ್ಯೋಗ ಸೃಷ್ಟಿ. ಕೃತಕ ಬುದ್ಧಿಮತ್ತೆ ಅಥವಾ ಎಐ ತಂತ್ರಜ್ಞಾನದಿಂದ ಸಂಪ್ರದಾಯಿಕ ಉದ್ಯೋಗಿಗಳಿಗೆ ಸ್ವಲ್ಪ ಮಟ್ಟಿನ ಹಿನ್ನಡೆ ಆಗುತ್ತಿದ್ದರು. ಅದೇ ವಿಪುಲ ಅವಕಾಶಗಳನ್ನ ಸೂಚಿಸುತ್ತಿದೆ ಎಂದು ಪರೇಖ್ ಅಭಿಪ್ರಾಯಪಟ್ಟಿದ್ದಾರೆ. ಗೆಲವು ಸಾಂಪ್ರದಾಯಿಕ ಕೆಲಸಗಳಲ್ಲಿ ಒತ್ತಡವಿದ್ದರು. ಕ್ಷೇತ್ರದಲ್ಲಿ ನಾವು ಹೆಚ್ಚಿನ ಬೆಳವಣಿಗೆಯನ್ನು ಕಾಣುತ್ತಿದ್ದೇವೆ. ಸಾಫ್ಟ್ ವೇರ್ ಅಭಿವೃದ್ಧಿ, ಗ್ರಾಹಕ ಸೇವೆ ಮತ್ತು ಹಳೆಯ ಅಪ್ಲಿಕೇಶನ್‌ಗಳ ಆಧುನಿಕ ಕಾಲದಲ್ಲಿ ಏಜೆಂಟ್ ಗಳ ಬಳಕೆ ಹೆಚ್ಚಾಗುತ್ತಿದ್ದು, ಇದು ಹೊಸ ರೀತಿಯ ಉದ್ಯೋಗಗಳಿಗೆ ಬೇಡಿಕೆ ಸೃಷ್ಟಿಸಿದೆ ಎಂದು ಅವರು ಹೇಳಿದ್ದಾರೆ.
ಇದುವರೆಗೆ ಈ ತಂತ್ರಜ್ಞಾನವು ಕೇವಲ ಪರೀಕ್ಷಾರ್ಥ ಅರ್ಥದಲ್ಲಿತ್ತು. ಆದರೆ ಈಗ ಅದು ಪೂರ್ಣ ಪ್ರಮಾಣದ ಪ್ರೊಜೆಕ್ಟ್ ಗಳಲ್ಲಿ ಬಳಕೆಯಾಗುತ್ತಿದೆ. ಹಣಕಾಸು ವಲಯದಲ್ಲಿ ನಮ್ಮ ಟಾಪ್ 25 ಗ್ರಾಹಕರ ಪೈಕಿ 15 ಗ್ರಾಹಕರಿಗೆ ನಾವೇಯೇ ಪಾಲುದಾರರಾಗಿದ್ದೇವೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಯೋಜನೆಗಳು ದೊಡ್ಡ ಮಟ್ಟದಲ್ಲಿ ಜಾರಿಗೆ ಆಗುತ್ತಿದೆ ಎಂದು ಪಾರ್ಕ್ ವಿವರಿಸಿದ್ದಾರೆ.
AI ಕೌಶಲ್ಯ ಹೊಂದಿರುವ ಪ್ರತಿಭಾವಂತರನ್ನು ಸೆಳೆಯಲು ಇನ್ಫೋಸಿಸ್ ಈಗಾಗಲೇ ಆರಂಭಿಕ ವೇತನವನ್ನು ಹೆಚ್ಚಿಸಿದೆ. ವಿಶೇಷ ಕೌಶಲ ಬೇಡುವ ಉದ್ಯೋಗಗಳಿಗೆ ವಾರ್ಷಿಕ 21 ಲಕ್ಷ ರೂಪಾಯಿಗಳ ಪ್ಯಾಕೇಜ್ ನೀಡಲಾಗುತ್ತಿದೆ ಎಂದು ವರದಿಗಳು ತಿಳಿಸಿದೆ. ಇಷ್ಟೇ ಅಲ್ಲದೆ ಅಮೆರಿಕ ಜಿಡಿಪಿ ಬೆಳವಣಿಗೆ ಉತ್ತಮವಾಗಿರುವುದರಿಂದ ದೊಡ್ಡ ಕಂಪನಿಗಳು ತಂತ್ರಜ್ಞಾನದ ಮೇಲೆ ಹೂಡಿಕೆ ಮಾಡಲು ಮುಂದೆ ಬರುತ್ತವೆ ಎಂದು ಪಾರೇಖ್ ತಿಳಿಸಿದ್ದಾರೆ.
ಇನ್ಫೋಸಿಸ್ (Infosys) ಬಗ್ಗೆ ಮಾಹಿತಿ :
ಇನ್ಫೋಸಿಸ್ ಲಿಮಿಟೆಡ್ ಭಾರತದ ಪ್ರಮುಖ ಮಾಹಿತಿ ತಂತ್ರಜ್ಞಾನ (IT) ಸೇವಾ ಕಂಪನಿಯಾಗಿದೆ. ಇದು ಸಾಫ್ಟ್‌ವೇರ್ ಸೇವೆಗಳು, ಐಟಿ ಸಲಹೆ (IT Consulting), ಡಿಜಿಟಲ್ ಸೇವೆಗಳು ಮತ್ತು ವ್ಯವಹಾರ ಪರಿಹಾರಗಳನ್ನು ಒದಗಿಸುತ್ತದೆ.
ಸ್ಥಾಪನೆ:
ಇನ್ಫೋಸಿಸ್ ಅನ್ನು 1981ರಲ್ಲಿ ಸ್ಥಾಪಿಸಲಾಯಿತು.
ಸ್ಥಾಪಕರು:
- ಎನ್.ಆರ್. ನಾರಾಯಣ ಮೂರ್ತಿ
- ನಂದನ್ ನಿಲೇಕಣಿ
- ಎಸ್.ಡಿ. ಶಿಬುಲಾಲ್
- ಕೃಷ್ ಗೋಪಾಲಕೃಷ್ಣನ್
- ಅಶೋಕ್ ಅರೋರಾ
- ಕೇ. ದಿನೇಶ್
- ನಿಖಿಲ್ ನಾಯಕ್
ಮುಖ್ಯ ಕಚೇರಿ :
ಬೆಂಗಳೂರು, ಕರ್ನಾಟಕ, ಭಾರತ
ಸೇವೆಗಳು :
- ಸಾಫ್ಟ್‌ವೇರ್ ಅಭಿವೃದ್ಧಿ
- ಐಟಿ ಸಲಹಾ ಸೇವೆಗಳು
- ಕ್ಲೌಡ್ ಕಂಪ್ಯೂಟಿಂಗ್
- ಕೃತಕ ಬುದ್ಧಿಮತ್ತೆ (AI) ಮತ್ತು ಡೇಟಾ ಅನಾಲಿಟಿಕ್ಸ್
- ಡಿಜಿಟಲ್ ಪರಿವರ್ತನೆ ಸೇವೆಗಳು
ಜಾಗತಿಕ ಹಾಜರಿ:
ಇನ್ಫೋಸಿಸ್ ವಿಶ್ವದ ಅನೇಕ ದೇಶಗಳಲ್ಲಿ ತನ್ನ ಸೇವೆಗಳನ್ನು ನೀಡುತ್ತಿದೆ. ಅಮೆರಿಕಾ, ಯುರೋಪ್, ಏಷ್ಯಾ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳಲ್ಲಿ ಇದರ ಶಾಖೆಗಳಿವೆ.
ಪ್ರಮುಖತೆ:
- ಭಾರತದ ಎರಡನೇ ಅತಿದೊಡ್ಡ ಐಟಿ ಕಂಪನಿಗಳಲ್ಲಿ ಒಂದು
- ಲಕ್ಷಾಂತರ ಉದ್ಯೋಗಿಗಳಿಗೆ ಉದ್ಯೋಗ ನೀಡಿದೆ
- ಪಾರದರ್ಶಕತೆ ಮತ್ತು ಉತ್ತಮ ಕಾರ್ಪೊರೇಟ್ ಆಡಳಿತಕ್ಕೆ ಪ್ರಸಿದ್ಧ
ಇನ್ಫೋಸಿಸ್ ಫೌಂಡೇಶನ್ :
ಸಾಮಾಜಿಕ ಸೇವೆ, ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣ ಅಭಿವೃದ್ಧಿಗಾಗಿ ಇನ್ಫೋಸಿಸ್ ಫೌಂಡೇಶನ್ ಕಾರ್ಯನಿರ್ವಹಿಸುತ್ತದೆ.
ಸಲಿಲ್ ಪರೇಖ್ ಬಗ್ಗೆ ಮಾಹಿತಿ :
ಸಲಿಲ್ ಪರೇಖ್ ಅವರು ಭಾರತದ ಪ್ರಮುಖ ಐಟಿ ಕಂಪನಿ ಇನ್ಫೋಸಿಸ್ (Infosys) ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಹಾಗೂ ವ್ಯವಸ್ಥಾಪಕ ನಿರ್ದೇಶಕ (MD) ಆಗಿದ್ದಾರೆ.
ಪೂರ್ಣ ಹೆಸರು: Salil S. Parekh
ಹುದ್ದೆ: CEO ಮತ್ತು MD – Infosys
ಅಧಿಕಾರ ಸ್ವೀಕರಿಸಿದ ವರ್ಷ: 2018 (ಜನವರಿ)
ರಾಷ್ಟ್ರೀಯತೆ: ಭಾರತೀಯ
ಶೈಕ್ಷಣಿಕ ಹಿನ್ನೆಲೆ :
- ಏರೋನಾಟಿಕಲ್ ಎಂಜಿನಿಯರಿಂಗ್ – IIT ಬಾಂಬೆ
- ಕಂಪ್ಯೂಟರ್ ಸೈನ್ಸ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ – ಕಾರ್ನೆಲ್ ವಿಶ್ವವಿದ್ಯಾಲಯ (USA)
ವೃತ್ತಿ ಜೀವನ :
- ಇನ್ಫೋಸಿಸ್‌ಗೆ ಸೇರುವ ಮೊದಲು Capgemini ಕಂಪನಿಯಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡಿದ್ದರು
- 25 ವರ್ಷಕ್ಕೂ ಹೆಚ್ಚು ಅನುಭವ ಹೊಂದಿರುವ ಐಟಿ ಉದ್ಯಮ ನಾಯಕ
- ಡಿಜಿಟಲ್ ಪರಿವರ್ತನೆ, ಕ್ಲೌಡ್ ತಂತ್ರಜ್ಞಾನ ಮತ್ತು ಐಟಿ ಸೇವೆಗಳ ವಿಸ್ತರಣೆಯಲ್ಲಿ ಪರಿಣತಿ
ಇನ್ಫೋಸಿಸ್‌ನಲ್ಲಿ ಪಾತ್ರ :
- ಕಂಪನಿಯ ಜಾಗತಿಕ ವೃದ್ಧಿಗೆ ನಾಯಕತ್ವ
- ಡಿಜಿಟಲ್ ಸೇವೆಗಳು, ನವೀನ ತಂತ್ರಜ್ಞಾನಗಳ ಮೇಲೆ ಒತ್ತು
- ಉದ್ಯೋಗ ಸೃಷ್ಟಿ ಮತ್ತು ಕೌಶಲ್ಯ ಅಭಿವೃದ್ಧಿಗೆ ಬೆಂಬಲ
ಗೌರವ ಮತ್ತು ಪ್ರಭಾವ :
- ಜಾಗತಿಕ ಮಟ್ಟದಲ್ಲಿ ಗೌರವ ಪಡೆದ ಕಾರ್ಪೊರೇಟ್ ನಾಯಕ.
- ಭಾರತೀಯ ಐಟಿ ಕ್ಷೇತ್ರದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು.