Telegram Join My Telegram WhatsApp Join My WhatsApp

ಆಸ್ಟ್ರೇಲಿಯಾ, ಫ್ರಾನ್ಸ್, ಸ್ಪೇನ್ ಮಕ್ಕಳಿಗೆ ಜಾಲತಾಣ ನಿಷೇಧ.

ಮೊದಲಿಗೆ ಆಸ್ಟ್ರೇಲಿಯಾದಲ್ಲಿ ಚಿಕ್ಕ ಪ್ರಾಯದ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಸಲಾಗಿತ್ತು. ಆಸ್ಟ್ರೇಲಿಯಾ ಸರ್ಕಾರ 16 ವರ್ಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳು ಜಾಲತಾಣ, ಸಾಮಾಜಿಕ ಮಾಧ್ಯಮಗಳು ಬಳಸುವುದನ್ನೇ ನಿಷೇದಿಸಿ ಕಾಯ್ದೆಗಳ ಜಾರಿಗೊಳಿಸಿದೆ.

ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟಿಕ್‌ಟಾಕ್ ಸೇರಿದಂತೆ ಹಲವಾರು ಜನಪ್ರಿಯ ವೇದಿಕೆಗಳ ಬಳಕೆಗೆ 16 ವರ್ಷ ಮತ್ತು ಅದಕ್ಕಿಂತ ಕಿರಿ ಪ್ರಾಯದವರಿಗೆ ಅನುಮತಿ ಇರುವಂತೆ ನಿಯಮ ಮಾಡಲಾಗಿದೆ.

ಆ ಬಳಿಕ ಫ್ರಾನ್ಸ್ ದೇಶದಲ್ಲಿರುವ ಮಕ್ಕಳು ಜಾಲತಾಣದಿಂದ ದೂರವಿರುವಂತೆ ಕಾಯ್ದೆ ಮಾಡಲಾಗಿದೆ. ಕಳೆದ ವಾರವಷ್ಟೇ ಸಂಸತ್ತಿನಲ್ಲಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಜಾಲತಾಣ ನಿರ್ಬಂಧ ವಿಷಯ ಮಂಡಿಸಿ ಅಂಗೀಕರಿಸಲಾಗಿದೆ. ಪೋರ್ಚುಗಲ್, ಡೆನ್ಮಾರ್ಕ್, ಗ್ರೀಸ್ ಮತ್ತು ಇತರ ಯುರೋಪಿಯನ್ ದೇಶಗಳು ಇಂತಹುದೇ ನಿರ್ಬಂಧ ಕ್ರಮಕ್ಕೆ ಮುಂದಾಗಿವೆ.

ಸ್ಪೇನ್ ನಲ್ಲೂ ಮಕ್ಕಳಿಗೆ ಜಾಲತಾಣ ನಿಷೇಧವನ್ನು ಜಾರಿಗೆ ತರಲಾಗುತ್ತಿದೆ. ಸ್ಪೇನ್ ಪ್ರಧಾನಿ ಪೆಡ್ರೋ ಸಂಜೇಶ್ ಮಂಗಳವಾರವಷ್ಟೇ ಈ ಬಗ್ಗೆ ದೊಡ್ಡ ಘೋಷಣೆ ಮಾಡಿದ್ದಾರೆ. 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮದ ಬಳಕೆ ಪೂರ್ಣ ನಿಷೇಧಿಸುವ ಕಾಯ್ದೆಯನ್ನ ಸದ್ಯದಲ್ಲೇ ಸರ್ಕಾರ ಜಾರಿಗೆ ತರಲಿದೆ ಎಂದು ಹೇಳಿದ್ದಾರೆ. 

ದುಬೈನಲ್ಲಿ ನಡೆದ ಅಂತಾರಾಷ್ಟ್ರೀಯ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ಪೆಡ್ರೋ ಪುಟ್ಟ ಮಕ್ಕಳನ್ನು ಆನ್‌ಲೈನ್ ಅಪಾಯಗಳಿಂದ ರಕ್ಷಿಸುವುದು ತುರ್ತು ಅಗತ್ಯವಾಗಿದೆ ಎಂದು ಒತ್ತಿ ಹೇಳಿದ್ದಾರೆ ಮುಂದಿನ ವಾರದಿಂದಲೇ ಇದು ನಿರ್ಬಂಧ ಕ್ರಮಗಳ ಪ್ಯಾಕೇಜ್ ಜಾರಿಗೆ ಬರಲಿದೆ ಎಂದಿದ್ದಾರೆ. 

ನಮ್ಮ ಮಕ್ಕಳು ಒಂಟಿಯಾಗಿ ಎಲ್ಲೆಲ್ಲೋ ಸಂಚ ರಿಸಲು ಆರಂಭಿಸಿದ್ದಾರೆ. ಅಪಾಯಕಾರಿ ಸ್ಥಳಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರೆ. ವ್ಯಸನ ನಿಂದನೆ, ಅಶ್ಲೀಲ ವಿಷಯ, ಕಿರುಕುಳ, ಹಿಂಸೆ ಒಳಗಾಗುತ್ತಿದ್ದಾರೆ. ಇನ್ನು ಇಂಥದ್ದನ್ನೆಲ್ಲ ಸರಿಸಲಾಗದು, ಎಲ್ಲಾ ದೇಶಗಳು ಈ ವಿಷಯದತ್ತ ಗಂಭೀರವಾಗಿ ಗಮನ ಹರಿಸಬೇಕಿದೆ.

ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಕೇವಲ ಚೆಕ್ ಬಾಕ್ಸ್ ಮಾತ್ರವಲ್ಲದೆ ಮಕ್ಕಳ ನೈಜ ವಯಸ್ಸು ಪರಿಶೀಲಿಸಿದ ಬಳಿಕವಷ್ಟೇ ಜಾಲತಾಣಕ್ಕೆ ಪ್ರವೇಶ, ಅವಕಾಶ ಇರುವಂತಹ ವ್ಯವಸ್ಥೆ ಜಾರಿಗೊಳಿಸಬೇಕಿದೆ ಎಂದು ಪೆಟ್ರೋ ಆಗ್ರಹಿಸಿದರು. 

ಜೊತೆಗೆ ಕಾನೂನುಬಾಹಿರ ಅಥವಾ ದ್ವೇಷಪೂರಿತ ವಿಷಯಗಳನ್ನ ಜಾಲತಾಣಗಳಿಂದ ತೆಗೆದುಹಾಕದೆ ಇದ್ದರೆ ಜಾಲತಾಣ ಸೇವೆ ಒದಗಿಸುವ ಕಂಪನಿಗಳ CEO ಗಳನ್ನೇ ಮುಂದಾಗುವ ಅಪರಾಧಗಳಿಗೆ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ. ಈ ಕುರಿತು ಸ್ಪೇನ್‌ನ ಕಾನೂನಿನ ತಿದ್ದುಪಡಿ ತರುವುದಾಗಿ ಘೋಷಿಸಿದ್ದಾರೆ. 

ಭಾರತದಲ್ಲಿಯೂ ಆನ್‌ಲೈನ್ ಗೇಮ್‌ಗಳ ಹುಚ್ಚಿಗೆ ಬಿದ್ದಿರುವ ಮಕ್ಕಳು ದಿನದ ಬಹುತೇಕ ಅವಧಿಯನ್ನ ಮೊಬೈಲ್ ಗಳಲ್ಲಿ ವಿಡಿಯೋ ಗೇಮ್ ಗಳಲ್ಲಿ ಮುಳುಗಿಯೇ ಕಾಲ ಕಳೆಯುತ್ತಿದ್ದಾರೆ. ಆನ್‌ಲೈನ್‌ ಗೇಮ್‌ ಎಂಬುದು ಮಕ್ಕಳಿಗೆ ಬಿಡಲಾಗದ ಅಪಾಯಕಾರಿ ಚಟವಾಗಿ ಬೆಳೆಯುತ್ತಿದೆ. ಈ ಬಗ್ಗೆ ಪೋಷಕರು ಕಾಳಜಿ ವಹಿಸಿ ಆನ್‌ಲೈನ್ ಗೇಮ್‌ಗಳಿಂದ ತಮ್ಮ ಮಕ್ಕಳನ್ನ ದೂರವಿರಿಸಬೇಕಾಗಿದೆ.