ಸಾಮಾಜಿಕ ಮಾಧ್ಯಮಗಳಲ್ಲಿನ ವಿಷಯಗಳು ಮಕ್ಕಳ ಮೇಲೆ ದುಷ್ಟಪರಿಣಾಮ ಬೀರಬವುದು ಎಂದು ಆಸ್ಟ್ರೇಲಿಯಾ, ಫ್ರಾನ್ಸ್ ನಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆ ನಿಷೇಧಿಸಲಾಗಿದೆ.
ಈ ಬೆನ್ನಲ್ಲೇ ಇದೀಗ ಭಾರತದಲ್ಲೂ “ಸೋಶಿಯಲ್ ಮೀಡಿಯಾ” ಬ್ಯಾನ್ ಆಗುವ ಸಾಧ್ಯತೆ ಇದೆ. ಮಕ್ಕಳ ಸಾಮಾಜಿಕ ಮಾಧ್ಯಮಗಳ ಬಳಕೆಯ ಮೇಲೆ ಮಿತಿಗಳನ್ನು ತರುವ ಬಗ್ಗೆ ಆರ್ಥಿಕ ಸಮೀಕ್ಷೆ ವರದಿಯಲ್ಲಿ ಸೂಚಿಸಲಾಗಿದೆ. ಈ ವರದಿಯಲ್ಲಿ ಮಕ್ಕಳ ಸಾಮಾಜಿಕ ಮಾಧ್ಯಮಗಳ ಬಳಕೆ ನಿಲ್ಲಿಸುವಂತೆ ಸಂಸದ ದೇವರಾಯಲು ಮಸೂದೆ ಮಂಡಿಸಿದ್ದಾರೆ.
ಈಗಾಗಲೇ ಮಕ್ಕಳನ್ನ ಅಶ್ಲೀಲ ಅನವಶ್ಯಕ ಕಂಟೆಂಟ್ ಗಳಿಂದ ದೂರವಿಡಲು ಆಸ್ಟ್ರೇಲಿಯಾ ಹಾಗೂ ಫ್ರಾನ್ಸ್ ನಲ್ಲಿ16 ವರ್ಷದೊಳಗಿನವರಿಗೆ ಸಾಮಾಜಿಕ ಜಾಲತಾಣ ಬ್ಯಾನ್ ಮಾಡಲಾಗಿದೆ. ಇದೇ ರೀತಿ ದೇಶದಲ್ಲಿ ಬ್ಯಾನ್ ಮಾಡುವ ಪ್ರಸ್ತಾವಿತ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ. ಮಕ್ಕಳ ಹಿತದೃಷ್ಟಿಯಿಂದ ಮಂಡಿಸಿರುವುದು ಬಿಲ್ ಆಗಿರುವುದರಿಂದ ಇದು ಅಂಗಿಕಾರವಾಗಬಹುದು.
ಸಾಮಾಜಿಕ ಮಾಧ್ಯಮಗಳ ಅನಾನುಕೂಲತೆಗಳು:
- ಸಮಯ ವ್ಯರ್ಥವಾಗುವುದು:
ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಓದು, ಕೆಲಸ ಮತ್ತು ವೈಯಕ್ತಿಕ ಅಭಿವೃದ್ಧಿಗೆ ಹಾನಿಯಾಗುತ್ತದೆ. - ಮಾನಸಿಕ ಆರೋಗ್ಯದ ಮೇಲೆ ಪರಿಣಾಮ:
ಅತಿಯಾಗಿ ಬಳಸುವುದರಿಂದ ಆತಂಕ, ಒತ್ತಡ, ಖಿನ್ನತೆ (Depression) ಮತ್ತು ಅಸೂಯೆ ಹೆಚ್ಚಾಗಬಹುದು. - ತಪ್ಪು ಮಾಹಿತಿ ಹರಡುವಿಕೆ:
ಸುಳ್ಳು ಸುದ್ದಿ ಮತ್ತು ಅಪಪ್ರಚಾರ ವೇಗವಾಗಿ ಹರಡುವುದರಿಂದ ಸಮಾಜದಲ್ಲಿ ಗೊಂದಲ ಉಂಟಾಗುತ್ತದೆ. - ಗೌಪ್ಯತೆ (Privacy) ಹಾನಿ:
ವೈಯಕ್ತಿಕ ಮಾಹಿತಿಯನ್ನು ದುರುಪಯೋಗ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. - ಸೈಬರ್ ಅಪರಾಧಗಳು:
ಸೈಬರ್ ಬುಲಿಯಿಂಗ್, ಹ್ಯಾಕಿಂಗ್, ಆನ್‌ಲೈನ್ ವಂಚನೆಗಳಂತಹ ಅಪರಾಧಗಳು ಹೆಚ್ಚಾಗುತ್ತಿವೆ. - ಸಾಮಾಜಿಕ ಸಂಪರ್ಕ ಕಡಿಮೆಯಾಗುವುದು:
ನೇರವಾಗಿ ಜನರೊಂದಿಗೆ ಮಾತನಾಡುವ ಅಭ್ಯಾಸ ಕಡಿಮೆಯಾಗುತ್ತದೆ. - ವಿದ್ಯಾರ್ಥಿಗಳ ಮೇಲೆ ಕೆಟ್ಟ ಪರಿಣಾಮ:
ಗಮನ ಭಂಗವಾಗುವುದರಿಂದ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಉಂಟಾಗುತ್ತದೆ. - ಆಸಕ್ತಿ (Addiction):
ಸಾಮಾಜಿಕ ಮಾಧ್ಯಮಗಳ ಮೇಲಿನ ಅವಲಂಬನೆ ಜೀವನಶೈಲಿಯನ್ನು ಹಾಳು ಮಾಡಬಹುದು.